ಮೋದಿ ಸರಕಾರ ನಾಲ್ಕು ವರ್ಷ ವಿಮರ್ಶಿಸುವ ನಾಲ್ಕು ಕಿರುಹೊತ್ತಿಗೆ

ಮೋದಿ ಸರಕಾರ ತನ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಅದ್ದೂರಿಯಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಈ ನಾಲ್ಕುವರ್ಷಗಳ ಆಳ್ವಿಕೆಯನ್ನು ಜನಸಾಮಾನ್ಯರ ದೃಷ್ಟಿಯಿಂದ ವಿಮರ್ಶಿಸುವ ನಾಲ್ಕು ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಿದೆ.

ಜೂನ್ 1ರಂದು ದಿಲ್ಲಿಯಲ್ಲಿ ಕೇಂದ್ರ ಸಮಿತಿಯ ಕಚೇರಿಯಲ್ಲಿ ಕರೆದ ಪತ್ರಿಕಾಸಮ್ಮೇಳದಲ್ಲಿ ಇವನ್ನು ಬಿಡುಗಡೆ ಮಾಡಲಾಯಿತು. ಪತ್ರಿಕಾ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನ ಕಾರ್ಯದರ್ಶಿ ಸೀತಾರಾಮ್‍ ಯೆಚುರಿ ಮತ್ತು ಪೊಲಿಟ್‍ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍ ಮಾತನಾಡಿದರು.

ಯೆಚುರಿಯವರು ಈ ಪುಸ್ತಕಗಳನ್ನು ಪರಿಚಯಿಸುತ್ತ  ಈ ಸರಕಾರ ಹೋಗಲೇಬೇಕು, ಏಕೆಂದರೆ ಇದು ಜನತೆಯ ಮೇಲೆ ಅಭೂತಪೂರ್ವ ಹೊರೆಗಳನ್ನು ಹೇರಿದೆ, ಜನಸಾಮಾನ್ಯರ ಪರಿಸ್ಥಿತಿ ಈ ನಾಲ್ಕು ವರ್ಷಗಳಲ್ಲಿ ತುಂಬಾ ಹದಗೆಟ್ಟಿದೆ ಎಂದರು.

“ಮೋದಿ ಸರಕಾರದ ದುರಾಡಳಿತದ ನಾಲ್ಕು ವರ್ಷಗಳು- ಅದು ಏಕೆ ಕೊನೆಗೊಳ್ಳಬೇಕು” ಎಂಬುದು ಈ ನಾಲ್ಕು ಕಿರುಪುಸ್ತಕಗಳ ಮುಖ್ಯ ಶಿರೋನಾಮೆ . ಇದು ಜನಗಳನ್ನು ಲೂಟಿ ಮಾಡುವ, ಶ್ರೀಮಂತರ ಕೊಳ್ಳೆಗೆ ಸೌಕರ್ಯ ಒದಗಿಸುವ ಸರಕಾರ. ಅದೇ ವೇಳೆಗೆ ಸುಳ್ಳುಗಳನ್ನು, ಶುದ್ಧ ಸುಳ್ಳುಗಳನ್ನು ಹರಡುವ ಒಂದು ಸರಕಾರ ಎಂಬುದನ್ನು ಇವು ಬಿಂಬಿಸುತ್ತವೆ.

ಬೃಂದಾ ಕಾರಟ್‍ ಅವರು ಈ ನಾಲ್ಕು ಪುಸ್ತಕಗಳ ಬಗ್ಗೆ ವಿವರಿಸಿದರು.

ಮೊದಲ ಪುಸ್ತಿಕೆ ದೇಶದ ನುಚ್ಚುನೂರಾಗಿರುವ  ಆರ್ಥಿಕ ಪರಿಸ್ಥಿತಿಯನ್ನು ಕುರಿತಾದದ್ದು. ಜನಗಳಿಗೆ ಪ್ರಯೋಜನಗಳಿಗಿಂತ ಆಡಂಬರದ ಮಾತುಗಳೇ ಹೆಚ್ಚು. ಈ ಸರಕಾರ ಲಾಭಕೋರರ ಸರಕಾರ, ಯುವಜನರಿಗೆ ಪಕೋಡಾಗಳನ್ನು ಮಾರಿ ಎಂಬ ಉಪದೇಶವಲ್ಲದೆ  ಬೇರೇನೂ ಇಲ್ಲ. ಮೋದಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ ಸಮೃದ್ಧವಾಗಿ ತುತ್ತ ತುದಿಯಲ್ಲಿದೆ.

ದೇಶದ ರಾಜಕೀಯ ರಚನೆಯ ಮೇಲೆ ದಾಳಿಯನ್ನು ವಿವರಿಸುವ ಎರಡನೇ ಪುಸ್ತಿಕೆ ಸಂವಿಧಾನವನ್ನು ಹೇಗೆ ದುರ್ಬಲಗೊಳಿಸಲಾಗುತ್ತಿದೆ, ಕಳಚಿ ಹಾಕಲಾಗುತ್ತಿದೆ ಎಂಬುದನ್ನು ವಿವರಿಸುತ್ತದೆ.  ದೇಶದಲ್ಲಿನ ಸುಮಾರಾಗಿ ಎಲ್ಲ ಪ್ರಮುಖ ಸ್ಥಾನಗಳನ್ನು ‘ಸಂಘ’ ಕೈವಶ ಮಾಡಿಕೊಂಡಿದೆ ಮತ್ತು ಒಕ್ಕೂಟ ರಚನೆಯ ಮೇಲೆ ಗಂಭೀರ ಪ್ರಹಾರ ನಡೆಸಲಾಗುತ್ತಿದೆ.

ಮೂರನೇ ಪುಸ್ತಿಕೆ ಬಿಜೆಪಿ ಕೊಟ್ಟಿರುವ ಆಶ್ವಾಸನೆಗಳು ಮತ್ತು ಅದರ ಸಂಪೂರ್ಣ ವಿಶ್ವಾಸಘಾತಗಳನ್ನು ವರ್ಣಿಸಿದೆ. ಇದರಲ್ಲಿ ನಾಲ್ಕು ವರ್ಷಗಳ ದುರಾಡಳಿತದ ಸಾಮಾಜಿಕ ಆಯಾಮಗಳ ಮೇಲೆ ವಿಶೇಷ ಒತ್ತು ನೀಡಲಾಗಿದೆ.  ಈ ಆಯಾಮಗಳನ್ನು ಪರಿಶೀಲಿಸುತ್ತ ಅದು ಆದಿವಾಸಿಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಅಭೂತಪೂರ್ವ ದಾಳಿಗಳು ನಡೆಯುತ್ತಿವೆ ಎಂಬುದನ್ನು ತೋರಿಸುತ್ತದೆ.

ಅದರೊಂದಿಗೆ, ಮೀಸಲಾತಿ ಸವಲತ್ತುಗಳನ್ನು ಕೂಡ ದುರ್ಬಲಗೊಳಿಸುವ ರೀತಿಯಲ್ಲಿ ಆರ್ಥಿಕ ಧೋರಣೆಗಳನ್ನು ರೂಪಿಸಲಾಗುತ್ತಿದೆ ಎಂಬ ಸಂಗತಿಯತ್ತ ಅದು ಗಮನ ಸೆಳೆಯುತ್ತದೆ. ಮೀಸಲಾತಿಗಳನ್ನು ನಿರಾಕರಿಸಲು ಕೇಂದ್ರದಿಂದ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ.

ನಾಲ್ಕನೇ ಪುಸ್ತಿಕೆ ಅಪಾಯಕ್ಕೊಳಗಾಗಿರುವ ಜನಗಳ ಬದುಕು ಮತ್ತು ಭವಿಷ್ಯದ ಕುರಿತಾಗಿದೆ. ಈ ನಾಲ್ಕು ವರ್ಷಗಳ ಅವಧಿ ಹೇಗೆ ಖಾಸಗಿ ದುರಾಸೆ ಮತ್ತು ಕೇಸರಿ ಅಜೆಂಡಾಕ್ಕಾಗಿ ವಿದ್ಯಾರ್ಥಿಗಳನ್ನು ಬಲಿಗೊಡಲಾಗುತ್ತಿದೆ, ಹೇಗೆ ಜನತೆಯ ಆರೋಗ್ಯವಂತ ಕಾರ್ಪೊರೇಟ್‍ಗಳಿಗಾಗಿ ಜನತೆಯ ಆರೋಗ್ಯದ ವಿಷಯದಲ್ಲಿ ರಾಜಿಮಾಡಿಕೊಂಡು   ಜನಸಮಾಹಗಳನ್ನು ಕಾಯಿಲೆಪೀಡಿತರನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಈ ನಾಲ್ಕು ವರ್ಷಗಳ ಆಳ್ವಿಕೆಯಲ್ಲಿ ಆಹಾರ ಭದ್ರತೆಗೆ ವಿಪರೀತ ಹಾನಿಯುಂಟಾಗಿದೆ ಎಂಬುದನ್ನು ಈ ಪುಸ್ತಿಕೆ ವಿವರಿಸುತ್ತದೆ.

ಒಟ್ಟಿನಲ್ಲಿ,ಈ ಸರಕಾರ ಜನತೆಯ ಲೂಟಿಗೆ ಅನುವು ಮಾಡಿ ಕೊಡುವ ಕೆಲಸ ಮಾಡುತ್ತಿದೆ, ಅದೇ ವೇಳೆಗೆ  ತನ್ನ 4 ವರ್ಷಗಳ ದುರಾಡಳಿತದ ಮೇಲೆ ಪರದೆ ಹಾಕಲು ಸುಳ್ಳುಗಳನ್ನು ಹರಡುತ್ತಿದೆ ಎಂದು ಬೃಂದಾ ಕಾರಟ್‍ ಹೇಳಿದರು.

ಇಂಗ್ಲೀಷ್ ಆವೃತ್ತಿಗೆ ಪುಸ್ತಕಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ…….

ದೇಶದ ನುಚ್ಚುನೂರಾಗಿರುವ ಆರ್ಥಿಕ ಪರಿಸ್ಥಿತಿಯನ್ನು ಕುರಿತಾದದ್ದು.

ಸಂವಿಧಾನವನ್ನು ಹೇಗೆ ದುರ್ಬಲಗೊಳಿಸಲಾಗುತ್ತಿದೆ, ಕಳಚಿ ಹಾಕಲಾಗುತ್ತಿದೆ

ಕೊಟ್ಟಿರುವ ಆಶ್ವಾಸನೆಗಳು ಮತ್ತು ಅದರ ಸಂಪೂರ್ಣ ವಿಶ್ವಾಸಘಾತ

ಕೊಟ್ಟಿರುವ ಆಶ್ವಾಸನೆಗಳು ಮತ್ತು ಅದರ ಸಂಪೂರ್ಣ ವಿಶ್ವಾಸಘಾತ

ಪತ್ರಿಕಾಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆಯ ಸಂದರ್ಭದ ವಿಡಿಯೋ

Leave a Reply

Your email address will not be published. Required fields are marked *