ಕಮ್ಯುನಿಸ್ಟ್ ನೇತಾರ ಜಕ್ಕಾ ವೆಂಕಯ್ಯ ನಿಧನ

ಆಂಧ್ರಪ್ರದೇಶದ ಹಿರಿಯ ಕಮ್ಯುನಿಸ್ಟ್ ಮುಖಂಡರಾಗಿರುವ ಜಕ್ಕಾ ವೆಂಕಯ್ಯ ಮೇ 29ರಂದು ನಿಧನರಾಗಿದ್ದಾರೆ. ಅವರು ಈ ಹಿಂದೆ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರಾಗಿದ್ದರು. ಅವರಿಗೆ 84 ವರ್ಷ.

ನೆಲ್ಲೂರು ಜಿಲ್ಲೆಯಲ್ಲಿ ಕೃಷಿ ಕೂಲಿಕಾರರ ಸಂಘಟನೆಯೊಂದಿಗೆ ಆರಂಭಿಸಿದ ಅವರು  ಅಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದರು. 1970 ರ ದಶಕದಲ್ಲಿ ಕೃಷಿ ಕೂಲಿಕಾರರ ಹೋರಾಟಗಳಿಗೆ ಮತ್ತು ೧೯೮೦ರ ದಶಕದಲ್ಲಿ ಹಲವು ಭೂಮಿ ಹೋರಾಟಗಳಿಗೆ ಅವರು ನೇತೃತ್ವ ನೀಡಿದರು.

ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿಯಾಗಿ, ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯರಾಗಿ ಮತ್ತು ಕೇಂದ್ರ ಸಮಿತಿ ಸದಸ್ಯರಾಗಿ ಅವರು ವಿವಿಧ ಹಂತಗಳಲ್ಲಿ ಪಕ್ಷ ಕಟ್ಟುವ ಜವಾಬ್ದಾರಿಯನ್ನು ನಿರ್ವಹಿಸಿದರು. ಎರಡು ಅವಧಿಗೆ ವಿಧಾನ ಸಭಾ ಸದಸ್ಯರಾಗಿಯೂ ಆಯ್ಕೆಗೊಂಡಿದ್ದರು.

ಅವರೊಬ್ಬ ಅಕಳಂಕ ಪ್ರಾಮಾಣಿಕತೆಯ ಮುಖಂಡರು ಮತ್ತು ಸಮರ್ಪಿತ ಮಾರ್ಕ್ಸ್‌ವಾದಿ-ಲೆನಿನ್‌ವಾದಿ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದೆ. ಅವರ ಪತ್ರಿ ಮತ್ತು ಮಕ್ಕಳಿಗೆ ಪಕ್ಷ ಹಾರ್ದಿಕ ಸಂತಾಪ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *