ಭೀಮಾ-ಕೊರೆಗಾಂವ್ ಹಿಂಸಾಚಾರ: ನ್ಯಾಯ ಒದಗಿಸಿ

ಭೀಮಾ-ಕೊರೆಗಾಂವ್‍ ಘಟನೆಗಳಲ್ಲಿ ದಲಿತರ ಮೇಲೆ ಹಿಂಸಾಚಾರ ಹರಿಯ ಬಿಟ್ಟವರನ್ನು ಶಿಕ್ಷಿಸಬೇಕು ಎಂಬ ತನ್ನ ಆಗ್ರಹವನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಪುನರುಚ್ಛರಿಸಿದೆ.

ಇದರ ಬದಲು, ಮಹಾರಾಷ್ಟ್ರದ  ಬಿಜೆಪಿ-ಶಿವಸೇನೆ  ಸರಕಾರ  ಬಲಪಂಥೀಯ ಕಾರ್ಯಕರ್ತ ಸಂಭಾಜಿ ಭಿಡೆಯ ಮೇಲಿನ ಕನಿಷ್ಟ ಆರು ಗಲಭೆ ಮೊಕದ್ದಮೆಗಳನ್ನು ಹಿಂತೆಗೆದುಕೊಂಡಿದೆ ಎಂದು ವರದಿಯಾಗಿದೆ. ಬಿಜೆಪಿ ರಾಜ್ಯ ಸರಕಾರ ನೂರಾರು ಬಿಜೆಪಿ-ಶಿವಸೇನಾ ಕಾರ್ಯಕರ್ತರ ಮೇಲಿನ ಕೇಸುಗಳನ್ನೂ ಹಿಂತೆಗೆದುಕೊಂಡಿದೆ. ಬಿಜೆಪಿ ಸರಕಾರದ  ನಡೆ ಜನವರಿ 1ರಂದು ನಡೆದ ಹಿಂಸಾಚಾರವನ್ನು ಸಂಯೋಜಿಸಿದ್ದು ಸಂಭಾಜಿ ಭಿಡೆ ಮತ್ತು ಮಿಲಿಂದ್‍ ಏಕ್‍ಬೋಟೆ ಎಂಬ ಪುಣೆ ಪೋಲೀಸ್‍ ನೇಮಿಸಿದ ಹತ್ತು ಸದಸ್ಯರ ಸಮಿತಿಯ ವರದಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇದಕ್ಕೆ ತೀರಾ ವಿರುದ್ಧವಾಗಿ, ದಲಿತ ಕಾರ್ಯಕರ್ತರ ಮೇಲೆ ಹಾಕಿರುವ ಕೇಸುಗಳು ಹಾಗೆಯೇ ಇವೆ. ಅವರಿಗೆ ಅನಗತ್ಯ ಕಿರುಕುಳ ಮುಂದುವರೆಯುತ್ತಿದೆ. ಇದು ಬಿಜೆಪಿಯ ದಲಿತ- ವಿರೋಧಿ ನಿಲುವನ್ನು ಸಂಪೂರ್ಣವಾಗಿ ಬಯಲಿಗೆಳೆದಿದೆ, ಇದು ಖಂಡನಾರ್ಹ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಭೀಮಾ-ಕೊರೆಗಾಂವ್‍ ಹಿಂಸಾಚಾರದ ಅಪರಾಧಿಗಳ ಮತ್ತು ದೇಶದ ಹಲವು ಭಾಗಗಳಲ್ಲಿ ದಲಿತ-ವಿರೋಧಿ ಗಲಭೆಗಳನ್ನು ಸೃಷ್ಟಿಸಿರುವ ಆರೋಪಿಗಳ ವಿರುದ್ಧ  ಕಾನೂನಿನ ಪ್ರಕಾರ  ಕ್ರಮ ಕೈಗೊಳ್ಳಬೇಕು  ಎಂದು ಆಗ್ರಹಿಸಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ  ಅವರನ್ನು ದೋಷಮುಕ್ತರಾಗಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

Leave a Reply

Your email address will not be published. Required fields are marked *