ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜನೆ ಸಂವಿಧಾನಬಾಹಿರ

ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಕೇಂದ್ರ ಸರಕಾರದ ಆಣತಿಯಂತೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ವಿಸರ್ಜನೆ ಮಾಡಿದ್ದಾರೆ. ಇದು ಒಂದು ಕಾನೂನುಬಾಹಿರ ಮತ್ತು ಸಂವಿಧಾನಬಾಹಿರ ಹೆಜ್ಜೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖಂಡಿಸಿದೆ.

“ವಿರುದ್ಧ ಸಿದ್ಧಾಂತಗಳ” ಪಕ್ಷಗಳು ಒಂದು ಸೂಕ್ತ  ಸರಕಾರ ರಚಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸುವುದು ರಾಜ್ಯಪಾಲರ ಕೆಲಸವಲ್ಲ. ಈ ಅಳತೆಗೋಲಿನ ಪ್ರಕಾರ, ಚುನಾವಣೆಗಳ ನಂತರ ಪಿಡಿಪಿ-ಬಿಜೆಪಿ ಸರಕಾರ ರಚಿಸಲು ಬಿಡಬಾರದಾಗಿತ್ತು. ರಾಜ್ಯಪಾಲರು ಬಹುಮತ ಇದೆ ಎಂದು ಸರಕಾರ ರಚಿಸುವ ದಾವೆ ಮುಂದಿಟ್ಟಿರುವ ಮುಖಂಡರಿಗೆ ಸದನದಲ್ಲಿ ಬಹುಮತವನ್ನು ಸಾಬೀತು ಮಾಡಿ ಎಂದಷ್ಟೇ ಹೇಳಲು ಸಾಧ್ಯ.

ಮೋದಿ ಸರಕಾರ ಈ ಸರ್ವಾಧಿಕಾರಶಾಹಿ ಕ್ರಮವನ್ನು ಕೈಗೊಂಡು ರಾಜ್ಯದಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ ಮತ್ತು ಹದಗೆಡಿಸಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಖೇದ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *