ಶಿಕ್ಷಣ ಕ್ಷೇತ್ರದಲ್ಲಿ ಮೋದಿಯವರ ವಿಫಲತೆ

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ನಿಚ್ಛಳ ಬಹುಮತ ನೀಡಿ ಒಳ್ಳೆಯ ದಿನಗಳು ಬರುವುದೆಂದು ಕಾದಿದ್ದವರಿಗೆ ನಾಲಿಗೆ ಕಚ್ಚಿಕೊಂಡಂತಿರಬಹುದು. ಅವರ 2014ರ ಪ್ರಣಾಳಿಕೆಯ ಪ್ರಕಾರ 25 ಕೋಟಿ ಉದ್ಯೋಗ ಅವಕಾಶದಿಂದ ನಿರುದ್ಯೋಗವನ್ನು ಹಿಮ್ಮೆಟ್ಟಿಸಬಹುದೆಂದು ತಿಳಿಯಲಾಗಿತ್ತು.

ಅದರಂತೆ ೨೦೧೪ ರಿಂದ ಪ್ರತಿವರ್ಷ ೨ ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿಕೊಂಡಿತ್ತು. ಆದರೆ ವಾಸ್ತವತೆ ಭಿನ್ನವಾಗಿದ್ದು 110 ಲಕ್ಷ ಉದ್ಯೋಗ ೨೦೧೮ ರಲ್ಲೇ ನಷ್ಟವಾಗಿದೆ. ರಾಷ್ಟ್ರೀಯ ಅಂಕಿ ಅಂಶಗಳ ಪ್ರಕಾರ ೨೦೧೭ – ೧೮ ರಲ್ಲಿನ ವರದಿಯಂತೆ ಈ ಪ್ರಮಾಣದ ನಿರುದ್ಯೋಗ ೪ ದಶಕಗಳಲ್ಲೇ ಇರಲಿಲ್ಲ.

ಆದರೆ ಈ ವರದಿಯನ್ನು ಪ್ರಕಟಿಸಿಲ್ಲ. ಸರ್ಕಾರದ ಹುದ್ದೆಗಳಲ್ಲೇ ೨೫ ಲಕ್ಷ ಖಾಲಿಯಿದ್ದು ಸರ್ಕಾರಕ್ಕೆ ಅದನ್ನು ತುಂಬುವ ಇಚ್ಛೆಯಿಲ್ಲ. ಆರ್ಥಿಕ ತಜ್ಞ ಹೇಳುತ್ತಿರುವುದನ್ನು ಸರ್ಕಾರ ಒಪ್ಪದೇ ಬೊಗಳೆ ಆರ್ಥಿಕತೆಯನ್ನೇ ಮುಂದುವರೆಸಿದ್ದಾರೆ. ಎಲ್ಲ ಸತ್ಯಗಳನ್ನು ಮರೆಮಾಚುತ್ತಿದ್ದಾರೆ.

ಭಾರತವನ್ನು ತರುಣ ದೇಶವೆಂದು ಪರಿಗಣಿಸಲಾಗಿದೆ. ಇಲ್ಲಿರುವ ಶೇ. ೫೦% ಜನಸಂಖ್ಯೆ ೨೫ ವರ್ಷಗಳಿಗಿಂತ ಕಡಿಮೆಯಿರುವರು ಮತ್ತು ೬೫% ಜನಸಂಖ್ಯೆ ೩೫ ವರ್ಷಕ್ಕಿಂತ ಕಡಿಮೆಯಿರುವರು. ೨೦೨೦ ರ ವೇಳೆಗೆ ಸರಾಸರಿ ವರ್ಷ ೨೫ ಇರಲಿದೆ. ಸರ್ಕಾರ ಸಾಮಾಜಿಕ ಭದ್ರತೆಗಳಿಗೆ ಧನವಿನಿಯೋಗದ ಕೊರತೆ ಮಾಡುತ್ತಿರುವುದರಿಂದ ಜನರ ಕೊಳ್ಳುವ ತಿನ್ನುವ ಸಾಮರ್ಥ್ಯ ಕಡಿಮೆಯಾಗಲಿದೆ.

ಜನರಲ್ಲಿ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದರಿಂದ ವಸ್ತುಗಳ ಉತ್ಪಾದನೆ ಕುಸಿಯುತ್ತಿದೆ. ಕೈಗಾರಿಕೆ ಬೆಳೆದಿದ್ದರೆ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಬದಲಿಗೆ ಅಸಂಘಟಿತ ಕ್ಷೇತ್ರಗಳಲ್ಲಿ ೧,೫೨,೦೦೦ ಕಾರ್ಮಿಕರು ಅನಾಣ್ಯೀಕರಣದ ಮೂರು ತಿಂಗಳಲ್ಲೇ ಕೆಲಸ ಕಳೆದುಕೊಂಡಿದ್ದಾರೆ. ರೈತರ ಆತ್ಮಹತ್ಯೆ ಹೆಚ್ಚಾಗಿದೆ.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಂತೆ ೧೦೦ ದಿನಗಳು ಇಲ್ಲವಾಗಿದೆ. ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಉದ್ಯೋಗದ ಪರಿಸ್ಥಿತಿ ಎಷ್ಟು ಹಾಳಾಗಿದೆಯೆಂದರೆ ತಮಿಳುನಾಡಿನಲ್ಲಿ ೧೪ ಗುಡಿಸುವ ಹುದ್ದೆಗೆ ೪೬೦೦ ಇಂಜನೀಯರ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಈ ರೀತಿಯ ಹತಾಶೆ ಮನೋಭಾವದಿಂದ ಯುವ ಜನತೆಯನ್ನು ಧಾರ್ಮಿಕ ಮೂಲಭೂತವಾದಿಗಳು ದುರುಪಯೋಗ ಮಾಡಿಕೊಳ್ಳಬಹುದಲ್ಲ.

ಯುವಜನರನ್ನು ದ್ವೇಷಿಸುವ ಘೋಷಣೆಗಳಿಗೆ ಬದಲಾಗಿ ಭಾರತ ವಿದ್ಯಾರ್ಥಿ ಫೆಡರೇಶನ್ ಘೋಷಣೆಯಂತೆ ಧರ್ಮದ ಹೆಸರಿನಲ್ಲಿ ಒಡೆಯದೇ ಉದ್ಯೋಗದ ಹೆಸರಿನಲ್ಲಿ ಜೋಡಿಸಿ ಎಂದು ಒಗ್ಗೂಡಿಸಬೇಕಿದೆ.

ಕಳೆದ ಐದು ವರ್ಷಗಳಲ್ಲಿ ಎಲ್ಲ ವರ್ಗದ ಜನರು ಸಂಕಷ್ಟಗಳಿಗೆ ಒಳಗಾಗಿದ್ದರೂ ಬ್ಯಾಂಕ್‌ಗಳನ್ನು ಲೂಟಿ ಮಾಡಿರುವ ಶ್ರೀಮಂತರು ತಲೆಮರೆಸಿಕೊಂಡಿದ್ದರೂ ಅವರ ಲಕ್ಷಾಂತರ ಕೋಟಿ ಸಾಲ ಮೋದಿಯವರ ಸರ್ಕಾರ ಮನ್ನಾ ಮಾಡಿದ್ದೆ. ಎನ್‌ಡಿಎ ಆಳ್ವಿಕೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಶೋಷಣೆಗೆ ಒಳಗಾಗಿದ್ದಾರೆ.

ಆರ್‌ಎಸ್‌ಎಸ್-ಬಿಜೆಪಿಯವರ ನೀತಿಯಂತೆ ಇಡೀ ಸಮಾಜವನ್ನೇ ಕೋಮುವಾದಿಯನ್ನಾಗಿಸಿ ’ಹಿಂದುರಾಷ್ಟ’ ಸ್ಥಾಪಿಸುವ ಹುನ್ನಾರವಿದೆ. ಕ್ಯಾಂಪಸ್‌ಗಳಲ್ಲಿನ ಪ್ರಜಾಪ್ರಭುತ್ವ ಮಾಯವಾಗಿದ್ದು ಭಯ ಮತ್ತು ಬೇಹುಗಾರಿಕಾ ವ್ಯವಸ್ಥೆ ಶಿಕ್ಷಣ ಸಂಸೈಗಳನ್ನು ಆವರಿಸಿದೆ. ಮುಕ್ತ ಚರ್ಚೆ ಮಾಯವಾಗಿದೆ. ರೋಹಿತ್ ವೇಮುಲಾ ರವರ ಸಾಂಸ್ಥಿಕಾ ಕೊಲೆಗೆ ಕಾರಣರಾದ ಅಪರಾಧಿಗಳು ನಿರ್ಭೀತರಾಗಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ನಜೀಮ್ ಅಹ್ಮದ್ ಎಬಿವಿಪಿ ದಾಳಿಗೆ ಒಳಗಾಗಿ ಇನ್ನು ಪತ್ತೆಯಾಗಿಲ್ಲ.

ಸಾರ್ವಜನಿಕವಾಗಿದ್ದ ವಿಶ್ವವಿದ್ಯಾನಿಲಯಗಳನ್ನು ಖಾಸಗಿಯವರ ತೆಕ್ಕೆಗೆ ಹಾಕುವ ಇಚ್ಛಾ ಪೂರ್ವಕ ಕೆಲಸವಾಗಿದ್ದು ಅಕಾಡೆಮಿಕ್ ವಾತಾವರಣವನ್ನು ಕಟ್ಟಿಹಾಕಲಾಗಿದೆ.

ಇತ್ತೀಚಿನ ಸಚಿವ ಪಿಯೂಶ್ ಗೋಯಲ್‌ರವರ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರದ ಬಗ್ಗೆ ಎರಡು ಸಾಲಿದ್ದು ಕಳೆದ ವರ್ಷದ ಬಜೆಟ್‌ಗಿಂತ ಕೇವಲ ೧೦% ಹೆಚ್ಚಿದೆ. ಇದು ಜಿಡಿಪಿಯ ೩.೩% ರಷ್ಟಿದ್ದು ಬಿಜೆಪಿಯ ೨೦೧೪ ರ ಪ್ರಣಾಳಿಕೆಯಲ್ಲಿದ್ದ ೬% ಗಿಂತ ಕಡಿಮೆಯಿದೆ. ಉನ್ನತ ಶಿಕ್ಷಣಕ್ಕಾಗಿ ಮೀಸಲಿದ್ದ ೨೭೫೦ ಕೋಟಿ ಪೈಕಿ ಕಳೆದ ವರ್ಷದಲ್ಲಿ ವೆಚ್ಚವಾಗಿರುವುದು ಕೇವಲ ೨೫೦ ಕೋಟಿ.

ಒಂದು ಕಡೆ ಮೀಸಲಾತಿ ಇಲ್ಲದ ವರ್ಗಕ್ಕೆ ೧೦% ಮೀಸಲಾತಿ ಕೊಡುವುದಾಗಿ ಬೊಬ್ಬೆ ಹೊಡೆಯುತ್ತಲೇ ವಿದ್ಯಾರ್ಥಿಗಳ ನೆರವಿಗಾಗಿರುವ ನಿಧಿ ೨೬೦೦ ಕೋಟಿಗಿಂತ ೨೩೦೬ ಕೋಟಿಗೆ ಇಳಿದಿದೆ. ಪ್ರಧಾನಮಂತ್ರಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಾಗಿ ಕಳೆದ ವರ್ಷ ೩೦ ಕೋಟಿ ಈಗ ೧೩ ಕೋಟಿಗೆ ಇಳಿದಿದ್ದು ಮಹಿಳಾ ಸಬಲೀಕರಣದ ಜಂಬ ಹೊಡೆಯುವ ಸರ್ಕಾರದ ನಿಜರೂಪವಾಗಿದೆ. ಐಐಟಿ, ಯುಜಿಸಿ, ಐಸಿಟಿಯು ಮುಂತಾದ ಸಂಸ್ಥೆಗಳಿಗೂ ಬಜೆಟ್ ಕಡಿತ ಮಾಡಲಾಗಿದೆ. ಹಣದುಬ್ಬರ ಸಹಿತ ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಸಂಕಷ್ಟ ತಂದಿದೆ.

ಶಿಕ್ಷಣ ಸಾಮಾಜಿಕ-ಆರ್ಥಿಕ ಚಲನೆಗೆ ಸಾಧ್ಯವಾಗಿದ್ದು ಶೋಷಿತ ವರ್ಗಗಳಿಗೆ ವರದಾನ ಆದರೆ ಮನುವಾದಿ ಸರ್ಕಾರ ನಿರ್ಲಕ್ಷಕ್ಕೆ ಒಳಗಾಗಿದ್ದ ಸಮುದಾಯಗಳಿಗೆ ಮಾರಕವಾಗಿದೆ. ರೋಹಿತ್ ವೇಮುಲಾರವರ ಮರಣಶಾಸನದಲ್ಲಿ “ನನಗೆ ೭ ತಿಂಗಳ ಸ್ಕಾಲರ್‌ಶಿಪ್ ಹಣವಾದ ೧,೭೫,೦೦೦/- ಬರಬೇಕಿದೆ. ಅದನ್ನು ನನ್ನ ಕುಟುಂಬಕ್ಕೆ ತಲುಪುವಂತೆ ನೋಡಿಕೊಳ್ಳಿ”. ದಲಿತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹಣ ದೊರೆಯದೆ ಹತಾಶರಾಗುತ್ತಿರುವುದು ಸರ್ಕಾರದ ನೀತಿಗೆ ಕೈಗನ್ನಡಿ. ಈಗ ನಡೆಯುತ್ತಿರುವ ಹಂಗಾಮಿ ಫಾಕಲ್ಟಿಯಿಂದ ವಿಧ್ಯಾಬ್ಯಾಸ ಮತ್ತು ಸಂಶೋಧನೆ ಮಟ್ಟ ಕುಸಿಯುತ್ತಿದೆ.

ಕೇಂದ್ರ ಸರ್ಕಾರ ಸ್ವಾಯುತ್ತತೆಯ ಹೆಸರಿನಲ್ಲಿ ಸ್ವಯಂ ಸಂಪನ್ಮೂಲಗಳನ್ನು ಕ್ರೋಡಿಕರಿಸುವ ಕೋರ್ಸ್‌ಗಳನ್ನು ಪ್ರಾರಂಭಿಸಲು ಹಸಿರು ನಿಶಾನೆ ತೋರಿದೆ. ಸರ್ಕಾರ ಸ್ವಾಯುತ್ತತೆಯಿಂದ ಹೆಚ್ಚಿನ ಅಕಾಡೆಮಿಕ್ ಹೆಚ್ಚಿನ ಸ್ವಾತಂತ್ರ ಮತ್ತು ಹೊಸದನ್ನು ಕಂಡುಹಿಡಿಯುವುದನ್ನು ಪ್ರೇರೇಪಿಸುವುದು ಎಂದೂ ವಾದಿಸಿದರೂ ಈ ರೀತಿಯ ಸ್ವಾಯುತ್ತತೆ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಅಸಮರ್ಪಕ ಅಧಿಕಾರ ದೊರೆತು, ಫೀಸು ಹೆಚ್ಚಿಸುವುದು, ಆಡಳಿತ ವೆಚ್ಚ ನಿರ್ಭಂದಂತಹ ಸ್ಥಿತಿ ಉಂಟಾಗುತ್ತಿದೆ. ಇದರಿಂದ ಕ್ಯಾಂಪಸ್‌ಗಳು ಕ್ಯಾಟಿಂಜಲ್ ಆಲೋಚನೆ. ಮುಕ್ತವಾಗಿ ಪ್ರಶ್ನಿಸುವ ಮತ್ತು ಪ್ರಜಾಪ್ರಭುತ್ವದ ಶವಾಗಾರಗಳಾಗಲಿದೆ.

ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಫೆಡೆರಲ್ ವ್ಯವಸ್ಥೆಗೆ ಮಾರಕವಾಗಿದೆ. ನೀಟ್ ನಂತಹ ಪರಿಕ್ಷೆಯಿಂದ ತಮಿಳುನಾಡು ವಿದ್ಯಾರ್ಥಿಗಳು ಹೊರಗುಳಿಯುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಶಾಲಾ ಶಿಕ್ಷಣ ದುರ್ಬರ ಸ್ಥಿತಿಯಲ್ಲಿದೆ. ೯ ಕೋಟಿ ಮಕ್ಕಳು ಶಾಲೆಗೆ ಇನ್ನೂ ಹೋಗುತ್ತಿಲ್ಲ ಇದು ವಿಶ್ವದಲ್ಲೇ ಹೆಚ್ಚು. ಗುಜರಾತ್‌ನಲ್ಲಿ ಒಟ್ಟು ೩೨,೦೦೦ ಸ್ಕೂಲ್‌ಗಳ ಪೈಕಿ ೧೨,೦೦೦ ಸಾವಿರ ಸರ್ಕಾರಿ ಶಾಲೆಗಳಿದ್ದು ಅಲ್ಲಿ ಕೇವಲ ೧ ಅಥವಾ ೨ ಅಧ್ಯಾಪಕರಿದ್ದಾರೆ.

ಬುಡಕಟ್ಟು ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಫ್ ಸಿಗುತ್ತಿಲ್ಲ ಮತ್ತು ಅವರಿಗಾಗಿ ಇರುವ ಹಾಸ್ಟೆಲ್‌ಗಳ ಸ್ಥಿತಿ ಶೋಚನೀಯ. ಈ ವಿಷಯಗಳನ್ನು ಚರ್ಚಿಸಲಾಗುವುದಿಲ್ಲ. ಬದಲಿಗೆ ಪಟೇಲ್ ಮೂರ್ತಿಗಾಗಿ ೨೯೮೯ ಕೋಟಿ ವೆಚ್ಚ ಮಾಡಲಾಗಿದೆ. ಆ ವೆಚ್ಚದಲ್ಲಿ ೨ ಐಐಟಿಗಳನ್ನು ಅಥವಾ ೫ ಐಐಎಂ ಅಥವಾ ೧ ಐಐಎಎಂಸ್ ಕಟ್ಟಿಸಬಹುದಿತ್ತು. ಎನ್‌ಡಿಎ ಘೋಷಣೆ ‘ಮಗಳನ್ನು ಉಳಿಸಿ, ಮಗಳನ್ನು ಓದಿಸಿಗಾಗಿ ಮಾಡುವ ವೆಚ್ಚ ಆ ವಿಷಯದಲ್ಲಿ ನೀಡುವ ಜಾಹೀರಾತಿಗಿಂತ ಕಡಿಮೆ.

ಕೋಮುವಾದದಿಂದ ನಮ್ಮ ಜಾತ್ಯಾತೀತ ವವ್ಯಸ್ಥೆಗೆ ಧಕ್ಕೆಯಾಗಿದೆ. ಪಠ್ಯಕ್ರಮವನ್ನು ಬಿಜೆಪಿ ಆಡಳಿತವಿರುವ ಪ್ರದೇಶದಲ್ಲಿ ವಿಜ್ಞಾನ ಮತ್ತು ಚರಿತೆಯ ಜಾಗವನ್ನು ಮಿಥ್ಯೆಗಳ ಮತ್ತು ಪುರಾಣಗಳು ಆಕ್ರಮಿಸುತ್ತಿದೆ. ಚಾರಿತ್ರಿಕ ಸತ್ಯಗಳನ್ನು ತಿರುಚಿ ಪರಿಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇತ್ತೀಚಿನ ವಿಜ್ಞಾನ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ಬೆಂಬಲಿಗರ ಸರ್ಕಸ್ ನಡೆದಿದ್ದು ಅವೈಜ್ಞಾನಿಕ ಚಿಂತನೆಗಳನ್ನು ಪ್ರತಿಪಾದಿಸಿ, ಐನ್‌ಸ್ಟೈನ್ ಸಾಪೇಕ್ಷಾ ಸಿದ್ಧಾಂತವನ್ನು ಮತ್ತು ನ್ಯೂಟನ್ ಗುರುತ್ವಾಕರ್ಷಣಾ ನಿಯಮವನ್ನು ಹೀಗೆಳಿದಿದ್ದಾರೆ.

ಇಂದು  ಸಮರ ಎರಡು ಕಡೆಯಿಂದ ನಡೆಯಲಿದ್ದು ವಿದ್ಯಾರ್ಥಿಗಳು ವಿದ್ಯಾರ್ಥಿಪರ ಆಗ್ರಹಿಸುವ ನೀತಿಗಳಿಗಾಗಿ ನಡೆಯಬೇಕಿದೆ. ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳು ಅಕಾಡೆಮಿಕ್ ಚಿಂತಕರು ಅಧ್ಯಾಪಕರು ರೂಪಿಸಬೇಕೇ ಹೊರತು ಆರ್‌ಎಸ್‌ಎಸ್ ನವರ ಆದೇಶದ ಮೇಲೆ ಅಲ್ಲ. ರೈತ ಮತ್ತು ಕಾರ್ಮಿಕರ ಐತಿಹಾಸಿಕ ಜಾಥಾ ನಂತರ ರಾಜಧಾನಿಯಲ್ಲಿ ಫೆಬ್ರವರಿ ೧೮ ಮತ್ತು ೧೯ ರಂದು ಪಾರ್ಲಿಮೆಂಟ್ ಚಲೋ ಕಾರ್ಯಕ್ರಮವನ್ನು ದೇಶದಾದಂತ್ಯ ಬಂದಿರುವ ವಿದ್ಯಾರ್ಥಿಗಳು ನಡೆಸಿದ್ದಾರೆ. “ಕೆಜಿಯಿಂದ ಪಿಜಿ ವರೆಗೆ ಉಚಿತ ಶಿಕ್ಷಣ” “ಪಾಠಶಾಲೆಗಳೇ ಹೊರತು ಗೋಶಾಲೆಗಳಲ್ಲ” ‘ಶಿಕ್ಷಣ ಉಳಿಸಿ’ “ಪ್ರಜಾಪ್ರಭುತ್ವ ಉಳಿಸಿ” ಮುಖ್ಯ ಘೋಷಣೆಗಳಾಗಲಿದೆ. ಈ ನಡೆ ಪರ್ಯಾಯ ಶಿಕ್ಷಣ ದೃಷ್ಠಿಕೋನದ ಮುಖಾಂತರ ಉತ್ತಮ ಭಾರತ ನಿರ್ಮಾಣದ ಕಡೆಗೆ ಸಾಗಲಿದೆ.

ಕನ್ನಡಕ್ಕೆ : ಎಂ.ಜಿ. ವೆಂಕಟೇಶ್

Leave a Reply

Your email address will not be published. Required fields are marked *