ಮೋದಿ ಸರಕಾರದ ಸುಳ್ಳು ಪ್ರಚಾರವನ್ನು ತಿರಸ್ಕರಿಸಿ

ಇತಿಹಾಸವನ್ನು ಉತ್ಪಾದಿಸುವ ಮತ್ತು ಸತ್ಯವನ್ನು ನಿರ್ಮೂಲಗೊಳಿಸುವ ಅಮಿತ್ ಷಾ ಸೂತ್ರ ಜಾರಿಗೆ

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕೆಳದರ್ಜೆಗೆ ಇಳಿಸಿವಿಭಜಿಸಿಲಡಾಖನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕಿಸುವ ಔಪಚಾರಿಕ  ಘೋಷಣೆಯನ್ನು ಮಾಡಲು ಕೇಂದ್ರ ಸರಕಾರ ವಲ್ಲಭಬಾಯಿ ಪಟೇಲರ ಜನ್ಮ ದಿನವನ್ನೇ ಆರಿಸಿಕೊಂಡಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಸಂದರ್ಭದಲ್ಲಿ ಕಲಮು 370 ನ್ನು ರದ್ದು ಮಾಡಿರುವುದಕ್ಕೆಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಭಜನೆ ಮತ್ತು ಅದರ ಸ್ಥಾನಮಾನವನ್ನು ಇಳಿಸಿರುವುದಕ್ಕೆ ತನ್ನ ಬಲವಾದ ವಿರೋಧವನ್ನು ಪುನರುಚ್ಚರಿಸಿದೆ.

ಒಂದು ಪೂರ್ಣ ಪ್ರಮಾಣದ ರಾಜ್ಯವನ್ನು ಅಲ್ಲಿಯ ಜನಗಳ ಅಥವ ರಾಜ್ಯ ವಿಧಾನಸಭೆಯ ಅಭಿಪ್ರಾಯವನ್ನು ಕೇಳದೆಯೇ ಕೆಳದರ್ಜೆಗೆ ಇಳಿಸಿರುವುದುಮತ್ತು ಅದನ್ನು ವಿಭಜಿಸಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಒಂದು ನಾಚಿಕಗೇಡಿನ ದಿನ. ಇದು ಭಾರತದ ಸಂವಿಧಾನದ ಕಲಮು 370ರ ನಗ್ನ ಉಲ್ಲಂಘನೆಯಾಗಿದೆ. ದೇಶದ ಒಕ್ಕೂಟ ರಚನೆಯೂ ಸೇರಿದಂತೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವವರಿಗೆ ಈ ದಿನ ಆಚರಿಸಲು ಏನೂ ಇಲ್ಲ.

ಈ ದಿನವನ್ನು ಆರಿಸಿಕೊಳ್ಳುವ ಮೂಲಕ ಸರಕಾರ ಇತಿಹಾಸವನ್ನು ಉತ್ಪಾದಿಸುವ ಮತ್ತು ಸತ್ಯವನ್ನು ನಿರ್ಮೂಲಗೊಳಿಸುವ ಅಮಿತ್ ಷಾ ಸೂತ್ರವನ್ನು ಜಾರಿಗೆ ತಂದಿದೆ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ವ್ಯಂಗ್ಯವಾಡಿದೆ. ವಲ್ಲಭಭಾಯಿ ಪಟೇಲ್ ಕಲಮು 370ರಲ್ಲಿ ಭಾಗೀದಾರರಾಗಿದ್ದರುಮಾತ್ರವಲ್ಲ ಅದರ ಕರಡನ್ನು ರೂಪಿಸುವಲ್ಲಿಯೂ ತೊಡಗಿಸಿಕೊಂಡವರಾಗಿದ್ದರು ಎಂಬುದು ದಾಖಲಾಗಿರುವ ಸಂಗತಿ. ಪಟೇಲರ ಸ್ಮರಣೆಗಳಲ್ಲೂ ಅದು ದಾಖಲಾಗಿದೆ.

ಸರ್ದಾರ್ ಪಟೇಲರು  1949ರ ಮೇ 15 ಮತ್ತು 16ರಂದು ತಮ್ಮ ನಿವಾಸದಲ್ಲಿಯೇ  ವಿಶೇಷ ಸ್ಥಾನಮಾನದ ಬಗ್ಗೆ ಚರ್ಚೆಗಳನ್ನು ಜವಹರಲಾಲ್ ನೆಹರೂ ಮತ್ತು ಶೇಖ್ ಅಬ್ದುಲ್ಲಾರ ಜೊತೆಗೆ.ನಡೆಸಿದರು. ನಂತರಅಂತಿಮವಾಗಿ ಕಲಮು 370ರ ಕರಡನ್ನು ಪಟೇಲ್ ಮತ್ತು ಗೋಪಾಲಸ್ವಾಮಿ ಅಯ್ಯಂಗಾರ್ ರೂಪೀಕರಿಸಿದರು. ಸಂವಿಧಾನ ಸಭೆಯಲ್ಲಿ ಇದನ್ನು ಮಂಡಿಸಿದವರು ಕೂಡ ವಲ್ಲಭಭಾಯಿ ಪಟೇಲ್ ಅವರೇ. ಏಕೆಂದರೆ ಅಂದು ನೆಹರು ಅಮೆರಿಕಾ ಭೇಟಿಯಲ್ಲಿದ್ದರು.

ಈಗ ಈ ಕುರಿತ ಶಾಸನಗಳನ್ನು ಸಂಸತ್ತಿನಲ್ಲಿ ಪಾಸು ಮಾಡಿಸಿಕೊಂಡ ಎರಡೂವರೆ ತಿಂಗಳುಗಳ ನಂತರವೂ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಈ ದೇಶದ ನಾಗರಿಕರಾಗಿ ಇರುವ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಬಿಜೆಪಿ ಮತ್ತು ಅದರ ಸಂಘಟನೆಗಳಲ್ಲದೆ ಬೇರೆ ಯಾರೂ ರಾಜಕೀಯ ಚಟುವಟಿಕೆ ನಡೆಸುವಂತಿಲ್ಲ. ಕಾಶ್ಮೀರದ ದನಿಯನ್ನು ಸಂಪೂರ್ಣವಾಗಿ ದಮನ ಮಾಡಲಾಗಿದೆ. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರಧಾನ ಮುಖಂಡರುಗಳು ಮತ್ತು ಇನ್ನೂ ಹಲವರು ಇನ್ನೂ ಜೈಲಿನಲ್ಲಿದ್ದಾರೆ. ಬೀಗ ಜಡಿದಿರುವ ಮತ್ತು ಮುಚ್ಚಿ ಬಿಟ್ಟಿರುವ ಪರಿಸ್ಥಿತಿ ಮುಂದುವರೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖಿನ ಜನಗಳಿಗೆ ಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ಹಕ್ಕುಗಳನ್ನು ನಿರಾಕರಿಸಿರುವುದರ ವಿರುದ್ಧ ಅವರೊಡನೆ ಸೌಹಾರ್ದವನ್ನು ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಮೋದಿ ಸರಕಾರದ ಸುಳ್ಳು ಪ್ರಚಾರವನ್ನು ತಿರಸ್ಕರಿಸಬೇಕು ಎಂದೂ ಕೇಳಿಕೊಂಡಿದೆ.

Leave a Reply

Your email address will not be published. Required fields are marked *