ಕರಡು ಕಾರ್ಯಾಚರಣೆಯ ವೇದಿಕೆ–1931

  • ಮೀರತ್ ವಿಚಾರಣೆ ನಡೆಯುತ್ತಿರುವಾಗಲೇ ಮತ್ತು ಮೀರತ್ ವಿಚಾರಣೆಯ ಆರೋಪಿಗಳು ತಮ್ಮ ಸಾರ್ವತ್ರಿಕ  ಹೇಳಿಕೆಯನ್ನು ಬಿಡುಗಡೆ ಮಾಡುವ ಮುಂಚೆಯೇ, ಭಾರತ ಕಮ್ಯುನಿಸ್ಟ್ ಪಕ್ಷವು ತನ್ನ ಕರಡು ಕಾರ್ಯಾಚರಣೆಯ ವೇದಿಕೆಯನ್ನು ಪ್ರಕಟಿಸಿತ್ತು. ಈ ಕರಡಿನ ಪ್ರತಿಗಳನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾರ್ಚ್ ೧೯೩೧ ರ ಕರಾಚಿ ಮಹಾಧಿವೇಶನದಲ್ಲಿ ವ್ಯಾಪಕವಾಗಿ ವಿತರಿಸಲಾಗಿತ್ತು. ಈ ಕರಡಿನ ಮೂಲಪಠ್ಯವನ್ನು ಇಡಿಯಾಗಿ ಕಾಮಿಂಟರ್ನ್‌ನ ಪತ್ರಿಕೆಯಾದ ಇಂಪ್ರೆಕೊರ್‌ನಲ್ಲಿ ಪ್ರಕಟಿಸಲಾಗಿತ್ತು. ಮಾರ್ಕ್ಸ್‌ವಾದ ಮತ್ತು ಲೆನಿನ್‌ವಾದದ ಆಧಾರದಲ್ಲಿ, ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಗೆಲುವನ್ನು ಕಾರ್ಷಿಕ ಕ್ರಾಂತಿ ಮತ್ತು ಎಲ್ಲಾ ಸಾಮಾಜಿಕ ಅಸಮಾನತೆಯ ನಿರ್ಮೂಲನೆಯೊಂದಿಗೆ ಈ ಕರಡು ತಳಕುಹಾಕಿತ್ತು. ಎಲ್ಲಾ ವಿಭಾಗದವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಗಳಾಗುವುದರ ಮೂಲಕ ಸಾಮ್ರಾಜ್ಯಶಾಹಿಯ ವಿರುದ್ಧದ ಈ ಕಾದಾಟದಲ್ಲಿ ಪಾಲ್ಗೊಳ್ಳಬೇಕೆಂದು ಅದು ಕರೆ ಕೊಟ್ಟಿತ್ತು. ಈ ಕರಡು ಕಾರ್ಯಾಚರಣೆಯ ವೇದಿಕೆಯಲ್ಲಿರುವ ಕೆಲವು ಉದ್ಧರಣೆಗಳನ್ನು ಈ ಕೆಳಗೆ ನೀಡಲಾಗಿದೆ:

ಭಾರತದ ಕ್ರಾಂತಿಕಾರಿ ವಿಮೋಚನೆಗೆ ಬ್ರಿಟಿಷ್ ಬಂಡವಾಶಾಹಿಯ ವಿರುದ್ಧ ಒಂದು ಕಾರ್ಷಿಕ ಕ್ರಾಂತಿಯು ತಳಹದಿ ಆಗಿರಬೇಕು.

ರಾಷ್ಟ್ರೀಯ ಸುಧಾರಣಾವಾದದ ಕೈಗಳಿಂದ ಕಾರ್ಮಿಕ ವರ್ಗ, ರೈತಾಪಿ ಜನ ಮತ್ತು ಪಟ್ಟಣದ ಬಡವರ ವಿಮೋಚನೆ ಆಗಬೇಕೆಂದರೆ ಮತ್ತು ಸಾಮ್ರಾಜ್ಯಶಾಹೀ ವಿರೋಧಿ ಹಾಗೂ ಪಾಳೇಗಾರಿ ವಿರೋಧಿ ಕ್ರಾಂತಿಯ ದಿಕ್ಕಿನಲ್ಲಿ ಅವರ ಕ್ರಾಂತಿಕಾರಿ ಹೋರಾಟವನ್ನು ಒಯ್ಯಬೇಕೆಂದರೆ, ಕಾರ್ಮಿಕ ವರ್ಗಕ್ಕೆ ಒಂದು ತನ್ನದೇ ಆದ ಶ್ರಮಿಕರ ಕಮ್ಯುನಿಸ್ಟ್ ಪಕ್ಷದ ಅವಶ್ಯಕತೆಯಿದೆ. ಭಾರತ ಕಮ್ಯುನಿಸ್ಟ್ ಪಕ್ಷವು ಕಾರ್ಮಿಕ ವರ್ಗದ ಪಕ್ಷವಾಗಿದ್ದು, ಅದರ ಅಂತಿಮ ಗುರಿಯು ಸಮಾಜವಾದವನ್ನು ಮತ್ತು ಅಂತಿಮವಾಗಿ ಸಮತಾವಾದವನ್ನು ಸಾಧಿಸುವುದೇ ಆಗಿದೆ. ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕ್ರಮವು ಬೇರೆಲ್ಲಾ ಪಕ್ಷಗಳ ಮತ್ತು ಗುಂಪುಗಳ ಕಾರ್ಯಕ್ರಮಗಳು ಮತ್ತು ಚಿಂತನೆಗಳಿಗಿಂತ ಸಂಪೂರ್ಣವಾಗಿ ಬೇರೆಯೇ ಇರುತ್ತದೆ; ಆ ಪಕ್ಷಗಳು ಬಂಡವಾಳಶಾಹಿಗಳ ಮತ್ತು ಪುಟ್ಟ ಬಂಡವಾಳಶಾಹಿಗಳ ಪಕ್ಷಗಳಾಗಿವೆ. ಆ ಪಕ್ಷಗಳು ಭಾರತದಲ್ಲಿ ಬಂಡವಾಶಾಹಿಯನ್ನು ಬೆಳೆಸಲು ಪ್ರಯತ್ನಿಸುತ್ತವೆ, ಕಮ್ಯುನಿಸ್ಟ್ ಪಕ್ಷವು ಒಂದು ಸಮಾಜವಾದೀ ಅಭಿವೃದ್ಧಿ ಪಥವನ್ನು ಬೆಳೆಸಲು ನಿರಂತರವಾಗಿ ಮತ್ತು ದೃಢತೆಯಿಂದ ಹೋರಾಡುತ್ತದೆ.

ಈ ಮಾರ್ಗದರ್ಶಕ ತತ್ವಗಳನ್ನು ಅಳವಡಿಸಿಕೊಂಡು, ಭಾರತೀಯ ಕ್ರಾಂತಿಯ ಇಂದಿನ ಘಟ್ಟಕ್ಕೆ ಅನುಸಾರವಾಗಿ ಈ ಕೆಳಗಿನ ಪ್ರಧಾನ ಉದ್ದೇಶಗಳನ್ನು ಸಿಪಿಐ ಮುಂದಿಡುತ್ತದೆ:

  1. ಬ್ರಿಟಿಷ್ ಆಳ್ವಿಕೆಯನ್ನು ಹಿಂಸಾತ್ಮಕವಾಗಿ ಕಿತ್ತೊಗೆಯುವ ಮೂಲಕ ಭಾರತದ ಸಂಪೂರ್ಣ ವಿಮೋಚನೆ. ಎಲ್ಲಾ ಋಣಭಾರವನ್ನು ರದ್ದುಗೊಳಿಸುವುದು. ಬ್ರಿಟಿಷರ ಎಲ್ಲಾ ಕಾರ್ಖಾನೆಗಳು, ಬ್ಯಾಂಕುಗಳು, ರೈಲ್ವೇಗಳು, ಸಮುದ್ರ ಹಾಗೂ ನದಿ ಸಾರಿಗೆ ಮತ್ತು ತೋಟಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ರಾಷ್ಟ್ರೀಕರಣ ಮಾಡುವುದು.
  2. ಒಂದು ಸೋವಿಯತ್ ಸರ್ಕಾರವನ್ನು ಸ್ಥಾಪಿಸುವುದು. ಪ್ರತ್ಯೇಕವಾಗುವುದನ್ನೂ ಒಳಗೊಂಡಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಸ್ವಯಂನಿರ್ಧಾರದ ಹಕ್ಕನ್ನು ಸಾಕಾರಗೊಳಿಸುವುದು. ದೇಶೀಯ ಸಂಸ್ಥಾನಗಳನ್ನು ರದ್ದುಮಾಡುವುದು. ಭಾರತೀಯ ಕಾರ್ಮಿಕರ ಮತ್ತು ರೈತರ ಒಕ್ಕೂಟದ ಸೋವಿಯತ್ ಗಣತಂತ್ರವನ್ನು ನಿರ್ಮಿಸುವುದು.
  3. ಭೂಮಾಲಕರ, ಆಳರಸರ, ಚರ್ಚುಗಳ, ಬ್ರಿಟಿಷ್ ಸರ್ಕಾರದ, ಅಧಿಕಾರಿಗಳ ಮತ್ತು ಲೇವಾದೇವಿಗಾರರ ಎಲ್ಲಾ ಜಮೀನುಗಳನ್ನು, ಅರಣ್ಯಗಳನ್ನು ಮತ್ತಿತರ ಆಸ್ತಿಗಳನ್ನು ಯಾವುದೇ ಪರಿಹಾರ ನೀಡದೆ ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ದುಡಿಯುವ ರೈತರ ಬಳಕೆಗೆ ವಹಿಸಿಕೊಡುವುದು. ಗುಲಾಮಿ ಒಪ್ಪಂದಗಳನ್ನು ಮತ್ತು ಲೇವಾದೇವಿಗಾರರಿಗೆ ಮತ್ತು ಬ್ಯಾಂಕುಗಳಿಗೆ ರೈತರು ಕೊಡಬೇಕಾದ ಎಲ್ಲಾ ಸಾಲಗಳನ್ನು ರದ್ದುಮಾಡುವುದು.
  4. ಎಂಟು ಗಂಟೆಗಳ ಕೆಲಸ ಮತ್ತು ಕಾರ್ಮಿಕರ ಪರಿಸ್ಥಿತಿಯನ್ನು ಆಮೂಲಾಗ್ರವಾಗಿ ಉತ್ತಮಪಡಿಸುವುದು. ಕೂಲಿಯಲ್ಲಿ ಹೆಚ್ಚಳ ಮತ್ತು ನಿರುದ್ಯೋಗಿಗಳಿಗೆ ಪ್ರಭುತ್ವವು ಜೀವನೋಪಾಯ ಒದಗಿಸುವುದು.

ಭಾರತ ಕಮ್ಯುನಿಸ್ಟ್ ಪಕ್ಷವು, ಒಟ್ಟು ಜನಸಮುದಾಯದ ಹಿತಾಸಕ್ತಿಗಳನ್ನು ವ್ಯಕ್ತಪಡಿಸುವ ಈ ಪ್ರಮುಖ ಹಕ್ಕೊತ್ತಾಯಗಳಿಗಾಗಿ ಹೋರಾಡುತ್ತದೆ; ಮತ್ತು ಇವುಗಳ ಸಾಧನೆಯಿಂದ ಭಾರತದಲ್ಲಿ ಸಮಾಜವಾದಿ ಪ್ರಭುತ್ವವನ್ನು ನಿರ್ಮಾಣ ಮಾಡುವ ದಿಕ್ಕಿನಲ್ಲಿ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ ಮತ್ತು ಬೆಳವಣಿಗೆಗಳು ಸಾಧ್ಯವಾಗುತ್ತವೆ.

ಸಾಮ್ರಾಜ್ಯಶಾಹಿಗಳು, ಭೂಮಾಲಕರು, ಲೇವಾದೇವಿಗಾರರು ಮತ್ತು ಬಂಡವಾಳಶಾಹಿಗಳ ವಿರುದ್ಧ ಒಂದು ಸಂಯುಕ್ತ ರಂಗವನ್ನು ರಚಿಸಬೇಕೆಂದು ಭಾರತದ ಕಮ್ಯುನಿಸ್ಟ್ ಪಕ್ಷವು ಶ್ರಮಜೀವಿಗಳಿಗೆ ಕರೆ ಕೊಡುತ್ತದೆ. ಮತ್ತು ವಿವಿಧ ರಾಷ್ಟ್ರೀಯತೆಗಳ ಹಾಗೂ ಧಾರ್ಮಿಕ ನಂಬಿಕೆಗಳ ಶ್ರಮಜೀವಿಗಳನ್ನು ಒಬ್ಬರಮೇಲೆ ಒಬ್ಬರನ್ನು ಎತ್ತಿಕಟ್ಟಿ ಅವರ ನಡುವೆ ತಿಕ್ಕಾಟಗಳನ್ನು ಹುಟ್ಟುಹಾಕುವ ಬ್ರಿಟಿಷ್ ಸರ್ಕಾರದ ಮತ್ತು ಪ್ರತಿಗಾಮಿ ಸ್ಥಳೀಯ ಶೋಷಕರ ವಂಚನೆಯ ಪ್ರಚೋದನಕಾರಿ ವಿಧಾನಗಳಿಂದ ಮೋಸ ಹೋಗದಿರುವಂತೆ ಮುಸ್ಲಿಮರು ಮತ್ತು ಭಾರತದ ಕಾರ್ಮಿಕರು ಹಾಗೂ ರೈತರಿಗೆ ಭಾರತ ಕಮ್ಯುನಿಸ್ಟ್ ಪಕ್ಷವು ಕರೆನೀಡುತ್ತದೆ. ಬ್ರಿಟಿಷರು ಹಾಗೂ ನಮ್ಮದೇ ಶೋಷಕರ ಕೈಯಿಂದ ಸಮಾನವಾಗಿ ನರಳುತ್ತಿರುವ ದಮನಿತರ ಕ್ರಾಂತಿಕಾರಿ ಸಂಯುಕ್ತ ರಂಗದಲ್ಲಿ ಗೊಂದಲ ಎಬ್ಬಿಸಿ ಒಡಕುಂಟುಮಾಡುವುದಕ್ಕೆ ಆಸ್ಪದ ನೀಡಬಾರದೆಂದು ಆಸ್ಪೃಶ್ಯರನ್ನೂ (ಅಂತ್ಯಜರನ್ನೂ) ಒಳಗೊಂಡಂತೆ ಎಲ್ಲಾ ಶ್ರಮಜೀವಿಗಳಿಗೆ ಭಾರತ ಕಮ್ಯುನಿಸ್ಟ್ ಪಕ್ಷವು ಕರೆ ನೀಡುತ್ತದೆ.

ಭಾರತ ಕಮ್ಯುನಿಸ್ಟ್ ಕ್ಷವು ಕಾರ್ಮಿಕ ವರ್ಗದ ರಾಜಕೀಯ ಹಾಗೂ ಆರ್ಥಿಕ ಹಕ್ಕೊತ್ತಾಯಗಳಿಗಾಗಿ ಸಾಮೂಹಿಕ ಕ್ರಾಂತಿಕಾರಿ ಚಟುವಟಿಕೆಗಳನ್ನು ಮತ್ತು ಹೋರಾಟಗಳನ್ನು ಬೆಳೆಸಲು, ತೆರಿಗೆಗಳು, ಕರಗಳು, ಗೇಣಿ ಋಣಗಳನ್ನು, ನಿರ್ದಿಷ್ಟವಾಗಿ, ದೊಡ್ಡ ಭೂಹಿಡುವಳಿಗಳಿರುವ ಜಿಲ್ಲೆಗಳಲ್ಲಿ, ತೆರಲು ರೈತರಿಂದ ಸಾಮೂಹಿಕ ನಿರಾಕರಣೆಗೆ, ಈ ಮೂಲಕ ಶ್ರಮಿಕ ಜನಸಮೂಹಗಳನ್ನು ಅಣಿನೆರೆಸಲು ಮತ್ತು  ಸಾಮ್ರಾಜ್ಯಶಾಹಿಗಳ ವಿರುದ್ಧ ಕ್ರಾಂತಿಕಾರಿ ಹೋರಾಟಗಳಿಗೆ ಸಿದ್ಧಗೊಳಿಸಲು ತನ್ನ ಬೆಂಬಲಿಗರು ಹಾಗೂ ಸಂಘಟನೆಗಳಿಗೆ ಕರೆ ನೀಡುತ್ತದೆ. ವರ್ಗಪ್ರಜ್ಞೆ ಇರುವ ಕಾರ್ಮಿಕರು ಮತ್ತು ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿನ ಜನಸಮುದಾಯದ ಕ್ರಾಂತಿಕಾರಿ ಹೋರಾಟವನ್ನು ಸಂಘಟಿಸುವಲ್ಲಿ ಒಂದು ದೃಢವಾದ ಹೆಜ್ಜೆಯಾಗಿ, ಕಾರ್ಮಿಕರ ಬಿಡಿ-ಬಿಡಿಯಾದ ಮುಷ್ಕರಗಳನ್ನು ಒಂದು ಸಾರ್ವತ್ರಿಕ ರಾಜಕೀಯ ಮುಷ್ಕರವನ್ನಾಗಿ ಮಾರ್ಪಾಟು ಮಾಡಲು ಸಹಾಯ ಮಾಡಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಕರೆ ನೀಡುತ್ತದೆ.

ಸಾಮಾನ್ಯ ಹಕ್ಕೊತ್ತಾಯಗಳು

ಸಾಮೂಹಿಕ ಕ್ರಾಂತಿಕಾರಿ ಹೋರಾಟಗಳನ್ನು ಬೆಳೆಸುವ ಮತ್ತು ಜನರಿಗೆ ರಾಜಕೀಯ ತರಬೇತಿ ನೀಡುವ ಸಲುವಾಗಿ, ಭಾರತ ಕಮ್ಯುನಿಸ್ಟ್ ಪಕ್ಷವು ಈ ಕೆಳಗಿನ ಹಕ್ಕೊತ್ತಾಯಗಳನ್ನು ಮಂಡಿಸುತ್ತದೆ ಮತ್ತು ಅವುಗಳಿಗಾಗಿ ಹೋರಾಡುತ್ತದೆ:

  1. ಬ್ರಿಟಿಷ್ ಸೈನ್ಯವನ್ನು ಉಚ್ಛಾಟಿಸಬೇಕು.
  2. ಎಲ್ಲಾ ರಾಜಕೀಯ ಖೈದಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು.
  3. ಶ್ರಮಜೀವಿಗಳಿಗೆ ಅನಿರ್ಬಂಧಿತ ವಾಕ್, ಆತ್ಮಸಾಕ್ಷಿಯ, ಪತ್ರಿಕಾ, ಸಭೆಗಳ, ಮುಷ್ಕರಗಳ ಮತ್ತು ಸಾಂಘಿಕ ಸ್ವಾತಂತ್ರ್ಯ ಮತ್ತು ಎಲ್ಲಾ ಜನಗಳ-ವಿರೋಧಿ ಹಾಗೂ ಕಾರ್ಮಿಕ-ವಿರೋಧಿ ಕಾನೂನುಗಳನ್ನು(ಟ್ರೇಡ್ ಡಿಸ್ಪ್ಯೂಟ್ ಕಾಯಿದೆ, ಪಿಕೆಟಿಂಗ್ ನಿರ್ಬಂಧ, ಕ್ರಾಂತಿಕಾರಿ ಕಾರ್ಮಿಕರ ಗಡೀಪಾರು ನಿಯಮಗಳು, ಪತ್ರಿಕಾ ಕಾಯಿದೆ, ಇತ್ಯಾದಿಗಳನ್ನು) ರದ್ದುಮಾಡಬೇಕು.
  4. ಶ್ರೇಣಿ, ಜಾತಿ, ರಾಷ್ಟ್ರೀಯ ಹಾಗೂ ಕೋಮು ಸೌಲಭ್ಯಗಳನ್ನು ರದ್ದುಮಾಡಬೇಕು ಮತ್ತು ಲಿಂಗ, ಧರ್ಮ ಮತ್ತು ಜನಾಂಗಗಳನ್ನು ಪರಿಗಣಿಸದೆ ಎಲ್ಲಾ ಪ್ರಜೆಗಳಿಗೂ ಸಂಪೂರ್ಣ ಸಮಾನತೆ.
  5. ಪ್ರಭುತ್ವದಿಂದ ಧರ್ಮವನ್ನು ಸಂಪೂರ್ಣವಾಗಿ ಬೇರ್ಪಡಿಸಬೇಕು.
  6. ನ್ಯಾಯಾಧೀಶರುಗಳು ಮತ್ತು ಅಧಿಕಾರಿಗಳ ಚುನಾವಣೆ ಮತ್ತು ಯಾವಾಗ ಬೇಕಾದರೂ ಬಹುಮತದ ಮತದಾರರ ಒತ್ತಾಯದ ಮೇರೆಗೆ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವುದು.

ಭಾರತ ಕಮ್ಯುನಿಸ್ಟ್ ಪಕ್ಷವು ಈ ಕೆಳಗಿವುಗಳಿಗಾಗಿ ಹೋರಾಡುತ್ತದೆ:

  1. ಕೆಲಸದ ಅವಧಿಯನ್ನು ವಯಸ್ಕರಿಗೆ ೮ ಗಂಟೆಗೆ ಮತ್ತು ೧೬ ರಿಂದ ೨೦ ವರ್ಷದ ಯುವಜನರಿಗೆ ೬ ಗಂಟೆಗೆ ಮಿತಿಗೊಳಿಸಬೇಕು. ಕಲ್ಲಿದ್ದಲು ಗಣಿಯಂತಹ ಹಾನಿಕಾರಕ ಉದ್ದಿಮೆಗಳಲ್ಲಿ ೬ ಗಂಟೆ ಕೆಲಸದ ದಿನವನ್ನು ಆರಂಭಿಸಬೇಕು ಮತ್ತು ಈ ಉದ್ದಿಮೆಗಳ ಕಾರ್ಮಿಕರಿಗೆ ಹಾಲು ಮತ್ತು ಬೆಣ್ಣೆಯನ್ನು ಒದಗಿಸಬೇಕು.
  2. ಮತಪ್ರದರ್ಶನ, ಪಿಕೆಟಿಂಗ್ ಮತ್ತು ಮುಷ್ಕರ ಮಾಡಲು ಕಾರ್ಮಿಕ ಸಂಘಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು.
  3. ಮಹಿಳೆಯರು, ಯುವಜನರು ಮತ್ತು ಪುರುಷರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಇರಬೇಕು.
  4. ಕಡ್ಡಾಯ ಗುತ್ತಿಗೆ ಕೆಲಸ ಮತ್ತು ಕಾನೂನಾತ್ಮಕ ಜೀತ ವ್ಯವಸ್ಥೆಗಳು ಸಂಪೂರ್ಣವಾಗಿ ರದ್ದಾಗಬೇಕು.
  5. ಪೂರ್ಣ ವೇತನದೊಂದಿಗೆ ಕಡ್ಡಾಯ ವಾರದ ವಿಶ್ರಾಂತಿ ಮತ್ತು ವಯಸ್ಕರಿಗೆ ೪ ವಾರಗಳ ಹಾಗೂ ಯುವಜನರಿಗೆ ೬ ವಾರಗಳ ಸಂಬಳ ಸಹಿತ ವಾರ್ಷಿಕ ರಜೆ ನೀಡಬೇಕು.
  6. ನಿರುದ್ಯೋಗ, ಅನಾರೋಗ್ಯ, ಅಪಘಾತ, ಕೈಗಾರಿಕಾ ರೋಗಗಳು, ವೃದ್ಧಾಪ್ಯ, ಕೆಲಸದ ಸಾಮರ್ಥ್ಯದ ನಷ್ಟ, ಅನಾಥಾಲಯ ಇವುಗಳಿಗೆ ಪ್ರಭುತ್ವ ವಿಮೆ ಇರಬೇಕು ಮತ್ತು ಅಶಕ್ತತೆಗೆ ಪರಿಹಾರ ನೀಡಬೇಕು.

ನಮ್ಮ ದೇಶದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪರಿಣಾಮದಿಂದಾಗಿ ಲಕ್ಷಾಂತರ ಜನ ಗುಲಾಮರು ಮತ್ತು ಹತ್ತಾರು ಲಕ್ಷ ಸಾಮಾಜಿಕವಾಗಿ ಬಹಿಷ್ಕೃತ ಅಸ್ಪೃಶ್ಯರು ಇನ್ನೂ ಬದುಕಿದ್ದಾರೆ, ಎಲ್ಲಾ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಬ್ರಿಟಿಷ್ ಆಳ್ವಿಕೆ, ಭೂಮಾಲಕ ಪದ್ಧತಿ, ಪ್ರತಿಗಾಮಿ ಜಾತಿ ಪದ್ಧತಿ, ಧಾರ್ಮಿಕ ವಂಚನೆ ಮತ್ತು ಗುಲಾಮಿ ಹಾಗೂ ಜೀತ ಪದ್ಧತಿಗಳು ಭಾರತದ ಜನರ ಉಸಿರುಗಟ್ಟಿಸುತ್ತಿವೆ ಮತ್ತು ಅವರ ವಿಮೋಚನೆಗೆ ಅಡ್ಡ ಬರುತ್ತಿವೆ. ಇವುಗಳ ಫಲಿತಾಂಶವಾಗಿ ೨೦ನೇ ಶತಮಾನದ ಭಾರತದಲ್ಲಿ ಇನ್ನೂ ಅಸ್ಪೃಶ್ಯರಿದ್ದಾರೆ, ಅವರಿಗೆ ತಮ್ಮ ಸಹ-ಮಾನವರೊಂದಿಗೆ ಸೇರುವ, ಸಾರ್ವಜನಿಕ ಬಾವಿಗಳಿಂದ ನೀರು ಕುಡಿಯುವ, ಶಾಲೆಗಳಲ್ಲಿ ಸಮಾನ ಶಿಕ್ಷಣ ಪಡೆಯುವ ಇತ್ಯಾದಿ ಇತ್ಯಾದಿ ಹಕಕು ಇಲ್ಲವಾಗಿದೆ.

  • ಸರಿಯಾದ ಕಾರ್ಯಕ್ರಮವನ್ನು ಮಂಡಿಸುವಾಗಲೇ, ಈ ಕಾರ್ಯಾಚರಣೆಯ ವೇದಿಕೆಯು ಕೆಲವು ದೋಷಗಳನ್ನು ಮತ್ತು ತಪ್ಪು ತಿಳುವಳಿಕೆಯನ್ನು ಒಳಗೊಂಡಿತ್ತು. ಸಾಮ್ರಾಜ್ಯಶಾಹಿ, ಭೂಮಾಲೀಕರು, ಲೇವಾದೇವಿಗಾರರು ಮತ್ತ ಬಂಡವಳಿಗರ ವಿರುದ್ಧ ಒಂದು ಸಂಯುಕ್ತ ರಂಗವನ್ನು ರಚಿಸಬೇಕೆಂದು ಅದು ಶ್ರಮಜೀವಿಗಳಿಗೆ ಕರೆ ಕೊಟ್ಟಿತ್ತು. ಆದ್ದರಿಂದ, ಸಾಮ್ರಾಜ್ಯಶಾಹಿ- ವಿರೋಧಿ ಸಂಯುಕ್ತ ರಂಗದಿಂದ ಅದು ಸಾಮ್ರಾಜ್ಯಶಾಹಿ, ಪಾಳೇಗಾರಿ ಪದ್ಧತಿ ಮತ್ತು ಬಂಡವಾಳಶಾಹಿಯ ವಿರುದ್ಧ ರಂಗದ ರಚನೆಗೆ ಬಂದು ಮುಟ್ಟಿತು. ಈ ತಿಳುವಳಿಕೆಯಿಂದ ಅದು ಸೋವಿಯತ್ ಅಧಿಕಾರದ ಸ್ಥಾಪನೆಗೆ ಕರೆ ನೀಡಿತು. ನಂತರದಲ್ಲಿ ೧೯೩೪ ರಲ್ಲಿ ಕಾರ್ಯಕ್ರಮಾತ್ಮಕ ದಸ್ತಾವೇಜನ್ನು ಅಂಗೀಕರಿಸುವುದರೊಂದಿಗೆ ಈ ತಪ್ಪುಗಳನ್ನು ಸರಿಪಡಿಸಲಾಯಿತು. ಆದರೆ ಬಿ.ಟಿ.ರಣದೀವೆ ಹೇಳಿದಂತೆ:ನೇರವಾಗಿ ಭಾರತೀಯ ಜನಗಳ ಎಲ್ಲಾ ವಿಭಾಗಗಳ ಸಮಸ್ಯೆಗಳನ್ನು ಮತ್ತು ಕ್ರಾಂತಿಕಾರಿ ಹೋರಾಟದ ತಕ್ಷಣದ ಅಗತ್ಯಗಳನ್ನು ಉದ್ದೇಶಿಸಿದ ಇಂತಹ ಒಂದು ಕ್ರಾಂತಿಕಾರಿ ದಸ್ತಾವೇಜನ್ನು ಭಾರತವು ಹಿಂದೆಂದಿಗೂ ಕಂಡಿರಲಿಲ್ಲ.

ಜಾತಿಪದ್ಧತಿಯ ನಿರ್ದಯ ಮೂಲೋತ್ಪಾಟನೆ ಮಾತ್ರವೇ…..ಕಾರ್ಷಿಕ ಕ್ರಾಂತಿ ಮತ್ತು ಬ್ರಿಟಿಷ್ ಆಳ್ವಿಕೆಯ ಹಿಂಸಾತ್ಮಕ ಕಿತ್ತೊಗೆತ ಮಾತ್ರವೇ ಅಸ್ಪೃಶ್ಯರು ಮತ್ತು ಗುಲಾಮರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಕಾನೂನುಬದ್ಧ ವಿಮೋಚನೆಗೆ ದಾರಿ ಮಾಡಿಕೊಡುತ್ತದೆ.

ಬ್ರಿಟಿಷ್ ಆಳ್ವಿಕೆ ಮತ್ತು ಭೂಮಾಲಕತ್ವದ ವಿರುದ್ಧ ದೇಶದ ಎಲ್ಲಾ ಕಾರ್ಮಿಕರೊಂದಿಗೆ ಸಂಯುಕ್ತ ಕ್ರಾಂತಿಕಾರಿ ರಂಗವನ್ನು ಸೇರಬೇಕೆಂದು ಎಲ್ಲಾ ಅಸ್ಪೃಶ್ಯರಿಗೂ ಭಾರತ ಕಮ್ಯುನಿಸ್ಟ್ ಪಕ್ಷವು ಕರೆ ಕೊಡುತ್ತದೆ.

ಗುಲಾಮ ಪದ್ಧತಿ, ಜಾತಿ ಪದ್ಧತಿ ಮತ್ತು ಜಾತಿ ಪದ್ಧತಿಯ ಎಲ್ಲಾ ಅಸಮಾನತೆಗಳ(ಸಾಮಾಜಿಕ, ಸಾಂಸ್ಕೃತಿಕ ಇತ್ಯಾದಿ) ಸಂಪೂರ್ಣ ಮೂಲೋತ್ಪಾಟನೆಗೆ ಭಾರತ ಕಮ್ಯುನಿಸ್ಟ್ ಪಕ್ಷ ಕರೆ ನೀಡುತ್ತದೆ. ನಮ್ಮ ದೇಶದ ದುಡಿಯುತ್ತಿರುವ ಅಸ್ಪಶ್ಯರು ಮತ್ತು ಶ್ರಮಜೀವಿಗಳ ಸಂಪೂರ್ಣ ಹಾಗೂ ದೋಷರಹಿತ ಸಮಾನತೆಗಾಗಿ ಭಾರತದ ಕಮ್ಯುನಿಸ್ಟ್ ಪಕ್ಷ ಹೋರಾಡುತ್ತದೆ.

ಭಾರತದ ಶ್ರಮಜೀವಿ ಮಹಿಳೆಯರು ಅರೆ ಗುಲಾಮಿ ಸ್ಥಿತಿಯಲ್ಲಿ ಪಾಳೇಗಾರಿ ಅವಶೇಷಗಳ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕಾನೂನುಬದ್ಧ ಅಸಮಾನತೆಯ ದುಪ್ಪಟ್ಟು ಹೊರೆಯ ಅಡಿಯಲ್ಲಿ ಇದ್ದಾರೆ. ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಯಾವುದೇ ಹಕ್ಕುಗಳು ಶ್ರಮಜೀವಿ ಮಹಿಳೆಯರಿಗೆ ಇಲ್ಲ; ಅನೇಕ ಜಿಲ್ಲೆಗಳಲ್ಲಿ ಗೋಷಾ(ಮುಸುಕು ಹಾಕಿಕೊಳ್ಳುವ) ಪದ್ಧತಿ, ಅವಕುಂಠನಗಳ ಅಡಿಯಲ್ಲಿ ಬದುಕಬೇಕಾದ ಬಲವಂತಕ್ಕೆ ಒಳಗಾಗಿದ್ದಾರೆ; ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವ, ತಮ್ಮ ಒಡನಾಡಿಗಳ ಜತೆ ಮುಕ್ತವಾಗಿ ಹಾಗೂ ಬಹಿರಂಗವಾಗಿ ಬೆರೆಯುವ ಹಾಗೂ ಬೀದಿಗಳಲ್ಲಿ ಓಡಾಡುವ ಹಕ್ಕುಗಳೂ ಅವರಿಗೆ ಇಲ್ಲ.

ಮಹಿಳೆಯರ ಸಂಪೂರ್ಣ ಸಾಮಾಜಿಕ, ಆರ್ಥಿಕ ಹಾಗೂ ಕಾನೂನುಬದ್ಧ ಸಮಾನತೆಗಾಗಿ ಭಾರತದ ಕಮ್ಯುನಿಸ್ಟ್ ಪಕ್ಷ ಹೋರಾಡುತ್ತದೆ. ಮಹಿಳೆಯರಿಗೆ ರಾತ್ರಿಪಾಳಿಯ ಕೆಲಸಗಳ ಸಂಪೂರ್ಣ ರದ್ದತಿಗಾಗಿ ಮತ್ತು ಮಹಿಳೆಯರಿಗೆ ನೆಲದಡಿಯಲ್ಲಿನ (ಕಲ್ಲಿದ್ದಲು ಗಣಿ) ಕೆಲಸಗಳ ಮತ್ತು ಯಾವ ಕೆಲಸಗಳು ಮಹಿಳೆಯರಿಗೆ ಹಾನಿಕಾರಕವಾಗಿರುತ್ತವೋ ಅಂತಹ ಎಲ್ಲಾ ಶಾಖೆಗಳಲ್ಲಿನ ಕೆಲಸಗಳ ನಿಷೇಧಕ್ಕಾಗಿ ಭಾರತದ ಕಮ್ಯುನಿಸ್ಟ್ ಪಕ್ಷ ಹೋರಾಡುತ್ತದೆ.

ಹೆರಿಗೆಯ ಎರಡು ತಿಂಗಳು ಮುಂಚೆ ಮತ್ತು ಎರಡು ತಿಂಗಳ ನಂತರದವರೆಗೆ ಪೂರ್ಣ ವೇತನದೊಂದಿಗಿನ ರಜಾಕ್ಕಾಗಿ, ಆ ಸಮಯದಲ್ಲಿ ಉಚಿತ ವೈದ್ಯಕೀಯ ನೆರವಿಗಾಗಿ ಮತ್ತು ಮಹಿಳೆಯರನ್ನು ನೇಮಿಸಿಕೊಳ್ಳುವ ಎಲ್ಲಾ ಕಾರ್ಖಾನೆಗಳಲ್ಲಿ ಮತ್ತು ವರ್ಕ್‌ಶಾಪುಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಮಾಲೀಕರ ಖರ್ಚಿನಲ್ಲಿ ಒದಗಿಸಬೇಕೆಂಬ ಒತ್ತಾಯ ಮಾಡಲು ಭಾರತದ ಕಮ್ಯುನಿಸ್ಟ್ ಪಕ್ಷ ಹೋರಾಡುತ್ತದೆ.

೧೬ ವಯಸ್ಸಿನವರೆಗೆ ವಿದ್ಯಾರ್ಥಿಗಳ ರಾಷ್ಟ್ರೀಯ ಭಾಷೆಗಳಲ್ಲಿ ಸಾರ್ವತ್ರಿಕ, ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ, ಸರ್ಕಾರದ ಖರ್ಚಿನಲ್ಲಿ ಉಚಿತ ಆಹಾರ, ಬಟ್ಟೆ ಮತ್ತು ಪಠ್ಯಪುಸ್ತಕಗಳ ಪೂರೈಕೆಗಾಗಿ ಭಾರತದ ಕಮ್ಯುನಿಸ್ಟ್ ಪಕ್ಷ ಹೋರಾಡುತ್ತದೆ. ಸರ್ಕಾರ ಮತ್ತು ಮಾಲೀಕರ ಖರ್ಚಿನಲ್ಲಿ ಯುವಜನರಿಗೆ ಔದ್ಯೋಗಿಕ ತರಬೇತಿಯನ್ನು ಆರಂಭಿಸಲು ಭಾರತದ ಕಮ್ಯುನಿಸ್ಟ್ ಪಕ್ಷ ಒತ್ತಾಯಿಸುತ್ತದೆ.

ಸರಿಯಾದ ಕಾರ್ಯಕ್ರಮವನ್ನು ಮಂಡಿಸುವಾಗಲೇ, ಈ ಕಾರ್ಯಾಚರಣೆಯ ವೇದಿಕೆಯು ಕೆಲವು ದೋಷಗಳನ್ನು ಮತ್ತು ತಪ್ಪು ತಿಳುವಳಿಕೆಯನ್ನು ಒಳಗೊಂಡಿತ್ತು. ಸಾಮ್ರಾಜ್ಯಶಾಹಿ, ಭೂಮಾಲೀಕರು, ಲೇವಾದೇವಿಗಾರರು ಮತ್ತ ಬಂಡವಳಿಗರ ವಿರುದ್ಧ ಒಂದು ಸಂಯುಕ್ತ ರಂಗವನ್ನು ರಚಿಸಬೇಕೆಂದು ಅದು ಶ್ರಮಜೀವಿಗಳಿಗೆ ಕರೆ ಕೊಟ್ಟಿತ್ತು. ಆದ್ದರಿಂದ, ಸಾಮ್ರಾಜ್ಯಶಾಹಿ- ವಿರೋಧಿ ಸಂಯುಕ್ತ ರಂಗದಿಂದ ಅದು ಸಾಮ್ರಾಜ್ಯಶಾಹಿ, ಪಾಳೇಗಾರಿ ಪದ್ಧತಿ ಮತ್ತು ಬಂಡವಾಳಶಾಹಿಯ ವಿರುದ್ಧ ರಂಗದ ರಚನೆಗೆ ಬಂದು ಮುಟ್ಟಿತು.

ಈ ತಿಳುವಳಿಕೆಯಿಂದ ಅದು ಸೋವಿಯತ್ ಅಧಿಕಾರದ ಸ್ಥಾಪನೆಗೆ ಕರೆ ನೀಡಿತು. ನಂತರದಲ್ಲಿ ೧೯೩೪ ರಲ್ಲಿ ಕಾರ್ಯಕ್ರಮಾತ್ಮಕ ದಸ್ತಾವೇಜನ್ನು ಅಂಗೀಕರಿಸುವುದರೊಂದಿಗೆ ಈ ತಪ್ಪುಗಳನ್ನು ಸರಿಪಡಿಸಲಾಯಿತು. ಆದರೆ ಬಿ.ಟಿ.ರಣದೀವೆ ಹೇಳಿದಂತೆ:ನೇರವಾಗಿ ಭಾರತೀಯ ಜನಗಳ ಎಲ್ಲಾ ವಿಭಾಗಗಳ ಸಮಸ್ಯೆಗಳನ್ನು ಮತ್ತು ಕ್ರಾಂತಿಕಾರಿ ಹೋರಾಟದ ತಕ್ಷಣದ ಅಗತ್ಯಗಳನ್ನು ಉದ್ದೇಶಿಸಿದ ಇಂತಹ ಒಂದು ಕ್ರಾಂತಿಕಾರಿ ದಸ್ತಾವೇಜನ್ನು ಭಾರತವು ಹಿಂದೆಂದಿಗೂ ಕಂಡಿರಲಿಲ್ಲ.

ಕನ್ನಡಕ್ಕೆ: ಟಿ.ಸುರೇಂದ್ರ ರಾವ್

Leave a Reply

Your email address will not be published. Required fields are marked *