ಎನ್‌.ಪಿ.ಆರ್. ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ- ಎನ್‌.ಆರ್‌.ಸಿ.ಗೆ ಕಾಗದಪತ್ರ ತೋರಿಸುವುದಿಲ್ಲ

ಮಾರ್ಚ್೨೩ರ ಹುತಾತ್ಮ ದಿನದ ವರೆಗೆ ಮನೆ-ಮನೆ ಪ್ರಚಾರಾಂದೋಲನ-ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಗಣತಿಗಾರರು ಮನೆಗೆ ಬಂದಾಗ ಜನಗಣತಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಬೇಕು, ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್‌.ಪಿ.ಆರ್)ನ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲೆಂದು ಹೇಳಬೇಕು ಎಂದು ಸಿಪಿಐ(ಎಂ)ನ ಕೇಂದ್ರ ಸಮಿತಿ ದೇಶಬಾಂಧವರಿಗೆ ಕರೆ ನೀಡಿದೆ.

ಸಿ.../ಎನ್‌.ಪಿ.ಆರ್./ಎನ್‌.ಆರ್‌.ಸಿ ವಿರುದ್ಧ ಪ್ರತಿಭಟನೆಗಳಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಈ ಕುರಿತ ಎಲ್ಲ ಜಂಟಿ ಪ್ರತಿಭಟನಾ ಕರೆಗಳಲ್ಲಿ ಮತ್ತು ಸಂವಿಧಾನವನ್ನು ರಕ್ಷಿಸಿಕೊಳ್ಳುವ ಎಲ್ಲ ಕರೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ  ಕೇರಳದ  ತಿರುವನಂತಪುರದಲ್ಲಿ ನವಂಬರ್ ೧೭ರಿಂದ ೧೯ರ ವರೆಗೆ ನಡೆದ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

CCTVM2ಜನವರಿ ೨೩, ಜನವರಿ ೨೬ ಮತ್ತು ಜನವರಿ 30ರ ಜಂಟಿ ಕಾರ್ಯಾಚರಣೆಗಳನ್ನು ದೇಶಾದ್ಯಂತ ಸಂಪೂರ್ಣವಾಗಿ ಬೆಂಬಲಿಸಲು ಮತ್ತು ಬಲಿಷ್ಟಗೊಳಿಸಲು ಶ್ರಮಿಸುವುದಾಗಿ ಅದು ಹೇಳಿದೆ.

  • ಜನವರಿ 23 ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮದಿನ. ಅವರ ನೇತೃತ್ವದಲ್ಲಿ ಆಝಾದ್ ಹಿಂದ್ ಸೇನೆ (ಐಎನ್‌ಎ) ನೀಡಿದ ಜೈಹಿಂದ್ ಘೋಷಣೆ ಎಲ್ಲ ಭಾರತೀಯರಿಗೆ ಅಭಿವಂದನೆಯ ಘೋಷ ವಾಕ್ಯವಾಗಿ ಬಿಟ್ಟಿದೆ. ಕೆಂಪುಕೋಟೆಯಲ್ಲಿ ನಡೆದ ಚಾರಿತ್ರಿಕ ಐಎನ್‌ಎ ವಿಚಾರಣೆಯ ವೇಳೆಯಲ್ಲಿ ಸಹಗಲ್ ಡಿಲ್ಲೋಂ, ಷಾನವಾಜ್ ಎಂಬ ಘೋಷಣೆ ದೇಶಾದ್ಯಂತ ಮೊಳಗಿತು. ಅದು 1945-46ರ ಸಂಕಷ್ಟಮಯ ಸಮಯದಲ್ಲಿ ಭಾರತೀಯ ಜನತೆಯಲ್ಲಿ ಹೊಸ ಹುರುಪನ್ನು ತುಂಬಿ ನಮ್ಮ ಜನಗಳ ಕೋಮು ಐಕ್ಯತೆಯನ್ನು ಬಲಪಡಿಸಿತು.
  • ಜನವರಿ 26 ನಮ್ಮ ಗಣತಂತ್ರ ದಿನ. ಅಂದು ದೇಶಾದ್ಯಂತ ಸಂವಿಧಾನದ ಪೀಠಿಕೆಯನ್ನು ಓದಲಾಗುವುದು ಮತ್ತು ಎಲ್ಲ ವಾಸಸ್ಥಳಗಳಲ್ಲಿ ಸಂವಿಧಾನವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಕೈಗೊಳ್ಳಲಾಗುವುದು.
  • ಜನವರಿ 30 ಮಹಾತ್ಮ ಗಾಂಧಿ ಹುತಾತ್ಮರಾದ ದಿನ.  ಕೋಮು ಸಾಮರಸ್ಯಕ್ಕಾಗಿ ಅವರು ನಡೆಸಿದ ನಿರಂತರ ಪ್ರಚಾರಾಂದೋಲನಗಳನ್ನು ಎತ್ತಿ ತೋರುವ ರೀತಿಯಲ್ಲಿ ಇದನ್ನು ಆಚರಿಸಲಾಗುವುದು.

ಪ್ರಸಕ್ತ ಬೆಳವಣಿಗೆಗಳ ಸಂದರ್ಭದಲ್ಲಿ ಈ ಮೂರು ಮಹತ್ವದ ದಿನಗಳನ್ನು ಸೂಕ್ತ ರೀತಿಯಲ್ಲಿ, ಸ್ವರೂಪದಲ್ಲಿ ಮತ್ತು ಶಾಂತಿಯುತವಾಗಿ ದೇಶಾದ್ಯಂತ ಆಚರಿಸಬೇಕು ಎಂದು ಕೇಂದ್ರ ಸಮಿತಿ ನಿರ್ಧರಿಸಿದೆ.

ಕೇರಳ ಮತ್ತು ಪಂಜಾಬಿನ ರಾಜ್ಯ ಸರಕಾರಗಳು ಮಾಡಿರುವಂತೆ ಎನ್‌.ಆರ್‌.ಸಿ.ಯನ್ನು ವಿರೋಧಿಸಿರುವ ಎಲ್ಲ  ಮುಖ್ಯಮಂತ್ರಿಗಳು ಎನ್‌.ಪಿ.ಆರ್‌.ನ್ನು ಕೂಡ ನಿಲ್ಲಿಸಬೇಕು ಎಂದು ಕೇಂದ್ರ ಸಮಿತಿ ಕರೆ ನೀಡಿದೆ. ಏಕೆಂದರೆ ಇದು ಎನ್‌.ಆರ್‌.ಸಿ.ಗೆ ಆಧಾರವಾಗುತ್ತದೆ.

ಎನ್‌.ಪಿ.ಆರ್. ಮತ್ತು ಎನ್‌.ಆರ್‌.ಸಿ. ಪರಸ್ಪರ ತಳುಕು ಹಾಕಿಕೊಂಡಿರುವ ಪ್ರಕ್ರಿಯೆಗಳು ಎಂಬುದನ್ನು ಜನಗಳಿಗೆ ವಿವರಿಸಲು ಮತ್ತು ಕೇವಲ ಜನಗಣತಿಯ ಪ್ರಶ್ನೆಗಳಿಗೆ ಉತ್ತರ ನೀಡಬೇಕು, ಎನ್‌.ಪಿ.ಆರ್. ಪ್ರಶ್ನೆಗಳಿಗೆ ಉತ್ತರ ನೀಡಬಾರದು ಎಂದು ಜನಗಳಿಗೆ ಹೇಳಲು ಮನೆ-ಮನೆ ಪ್ರಚಾರವನ್ನು ನಡೆಸಲಾಗುವುದು.

ಮಾರ್ಚ್ 23ರಂದು ನಮ್ಮ ಅಮರ ಹುತಾತ್ಮರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಹುತಾತ್ಮ ದಿನಾಚರಣೆಯೊಂದಿಗೆ, ಶೋಷಣಾಮುಕ್ತ ಮತ್ತು ಎಲ್ಲರನ್ನೂ ಒಳಗೊಳ್ಳುವ ನವಭಾರತದ ಭಗತ್ ಸಿಂಗ್ ಕಣ್ಣೊಟವನ್ನು ಸಾಕಾರಗೊಳಿಸುವ ಪ್ರಯತ್ನಗಳಲ್ಲಿ ಸೇರಿಕೊಳ್ಳುವ ಪ್ರತಿಜ್ಞೆಯೊಂದಿಗೆ ಈ ಪ್ರಚಾರಾಂದೋಲನ ಸಮಾಪನಗೊಳ್ಳುತ್ತದೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಇದರಲ್ಲಿ ಪಕ್ಷದ ನೇತೃತ್ವದಲ್ಲಿರುವ ಎಲ್ಲ ಸಾಮೂಹಿಕ ರಂಗಗಳು ಭಾಗವಹಿಸುತ್ತವೆ, ಮನೆ-ಮನೆ ಪ್ರಚಾರದ ಸಂದರ್ಭದಲ್ಲಿ ನಮ್ಮ ಜನಗಳ ಜೀವನಾಧಾರವನ್ನು ಕುರಿತಾದ ತಕ್ಷಣದ ಪ್ರಶ್ನೆಗಳನ್ನು ಎತ್ತುತ್ತವೆ ಎಂದಿದೆ.

ಈಗಿರುವ ಸ್ಥಾನಬದ್ಧತೆಯ ಕೇಂದ್ರಗಳನ್ನು ಕಳಚಿಹಾಕಬೆಕು, ಇಂತಹ ಹೊಸ ಕೇಂದ್ರಗಳನ್ನು ನಿರ್ಮಿಸುವುದನ್ನು ನಿಲ್ಲಿಸಬೇಕು ಎಂದೂ ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.

Leave a Reply

Your email address will not be published. Required fields are marked *