ಜನಗಣತಿ ಕಾರ್ಯವನ್ನು ಮುಂದೂಡಿ-ಎನ್‌ಪಿಆರ್ ಗಣತಿ ಕೈಬಿಡಿ

ಕೋವಿಡ್-19 ಎಲ್ಲೆಡೆಗಳಲ್ಲಿ ಹರಡುತ್ತಿರುವುದರಿಂದ ಮತ್ತು ಸಾಮಾಜಿಕವಾಗಿ ದೂರವಿರುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಅಗತ್ಯವಿರುವುದರಿಂದ ಎಪ್ರಿಲ್ 1ರಿಂದ ಆರಂಭಿಸಬೇಕೆಂದಿರುವ ಎನ್‌ಪಿಆರ್ ಗಣತಿಯನ್ನು ಕೈಬಿಡಬೇಕು ಎಂಬುದು ತನ್ನ ದೃಢ ಅಭಿಪ್ರಾಯ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ‌
ಸರಕಾರ ಮತ್ತು ಅದರ ಎಲ್ಲ ಸಂಸ್ಥೆಗಳು ಈ ಸರ್ವತ್ರ ಹರಡುತ್ತಿರುವ ಕಾಯಿಲೆಯ ಮೇಲೆ ಹತೋಟಿ ಪಡೆಯಲು ಮತ್ತು ಅದರಿಂದಾಗಿ ಜನಗಳ ಆರೋಗ್ಯ ಹಾಗೂ ಜೀವನಾಧಾರಗಳಿಗೆ ಒಡ್ಡಿರುವ ಸವಾಲುಗಳನ್ನು ಎದುರಿಸಲು ಏಕಚಿತ್ತದಿಂದ ಗಮನ ಕೇಂದ್ರೀಕರಿಸಬೇಕಾಗಿದೆ.
ಅಲ್ಲದೆ ಈಗಾಗಲೇ 13 ರಾಜ್ಯ ಸರಕಾರಗಳು ಎನ್‌ಪಿಆರ್/ಎನ್‌ಆರ್‌ಸಿ ಪ್ರಕ್ರಿಯೆಗೆ ತಮ್ಮ ವಿರೋಧವನ್ನು ಘೋಷಿಸಿವೆ.
ಜನಗಣತಿ ಕಾರ್ಯವನ್ನು ಪರಿಸ್ಥಿತಿ ಸಾಮಾನ್ಯಗೊಳ್ಳುವ ವರೆಗೆ ಮುಂದೂಡಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಪ್ರಧಾನ ಮಂತ್ರಿಗಳು ಇಂದು (ಮಾರ್ಚ್‌ 19) ರಂದು ರಾತ್ರಿ 8 ಗಂಟೆಗೆ ಮಾಡುತ್ತಾರೆಂದು ಬಹಳ ಪ್ರಚಾರಪಡಿಸಲಾಗಿರುವ ತನ್ನ ಭಾಷಣದಲ್ಲಿ ಈ ಕುರಿತ ಪ್ರಕಟಣೆಯನ್ನು ಮಾಡಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *