ಕೋವಿಡ್ 19 ನ್ನು ಸಮರ್ಪಕವಾಗಿ ಎದುರಿಸಲು ಜನತೆಗೆ ಅಗತ್ಯ ನೆರವು ನೀಡಲು ಮನವಿ

1) ಇದೀಗ ರಾಜ್ಯ ಸರಕಾರ ಪಡಿತರ ವಿತರಣೆಗೆ ಕ್ರಮ ವಹಿಸಿರುವುದು ಸರಿಯಷ್ಠೇ, ಅದರಲ್ಲಿ ಕೆಲವು ದೋಷಗಳು ಮತ್ತು ಕೊರತೆಗಳಿವೆ. ಕರ್ನಾಟಕ ಸರಕಾರ ಕೋವಿಡ್-19 ರ ಸಂಕಷ್ಠದ ಹಾಗೂ ಆದಾಯವಿರದ ಮತ್ತು ಲಾಕ್ ಡೌನ್ ಸಂದರ್ಭವನ್ನು ವಿಶೇಷವಾಗಿ ಪರಿಗಣಿಸಿ ಕೇರಳ ಸರಕಾರದ ಮಾದರಿಯಲ್ಲಿ ಎಲ್ಲಾ ಅಗತ್ಯ 16 ಸಾಮಾನುಗಳನ್ನು ಬಿಪಿಎಲ್ ಹಾಗೂ ಎಪಿಎಲ್, ಮತ್ತಿತರೇ ಪಡಿತರ ಅವಶ್ಯಕತೆ ಇರುವವರಿಗೆ ಅಗತ್ಯನುಸಾರ ಒದಗಿಸುವುದು ಅದರ ಕರ್ತವ್ಯವಾಗಿತ್ತು. ಮಾತ್ರವಲ್ಲಾ, ಮನೆಯಲ್ಲಿದ್ದು ಕೋವಿಡ್-19 ನ್ನು ಎದುರಿಸಲು ಅಗತ್ಯ ಆರೋಗ್ಯ ಪರಿಕರಗಳನ್ನು ಇದೇ ಸಂದರ್ಭದಲ್ಲಿ ಒದಗಿಸಬೇಕಿತ್ತು. ಆದರೇ ರಾಜ್ಯ ಸರಕಾರ ಅಂತಹ ಕ್ರಮಕ್ಕೆ ಮುಂದಾಗದೇ ಇರುವುದು ತೀವ್ರ ಖಂಡನೀಯ ವಿಚಾರವಾಗಿದೆ. ಇದು ಜನತೆ ಐಕ್ಯತೆಯಿಂದ ಮತ್ತು ಧೃಢತೆಯಿಂದ ಕೋವಿಡ್ -19 ನ್ನು ಎದುರಿಸಲು ತೊಡಕಾಗಿದೆ.

ಇದೀಗ ರಾಜ್ಯ ಸರಕಾರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರರಿಗೆ ಪಡಿತರ ವಿತರಣೆಯಲ್ಲಿ ತೊಡಗಿದೆ. ಅದು ಕೇವಲ ಬಿಪಿಎಲ್ ಕಾರ್ಡದಾರರಿಗೆ ತಲಾ ವ್ಯಕ್ತಿಗೆ 5 ಕೆ.ಜಿ. ಅಕ್ಕಿಯನ್ನು ವಿತರಿಸುತ್ತಿದೆ. ಇದರೊಂದಿಗೆ 2 ಕೆ.ಜಿ. ಗೋದಿ ವಿತರಿಸುತ್ತಿದೆ. ಪ್ರತಿ ದಿನ ತಲಾ ವ್ಯಕ್ತಿಗೆ ಸರಾಸರಿ 400 ಗ್ರಾಂ ಅಕ್ಕಿ ಎಂದರೂ ತಿಂಗಳಿಗೆ ಕನಿಷ್ಟ ತಲಾ ವ್ಯಕ್ತಿಗೆ 12 ಕೆ.ಜಿ. ಅಕ್ಕಿ ವಿತರಿಸಬೇಕು. ಹೋಗಲಿ ಈ ಹಿಂದೆ ರಾಜ್ಯದಲ್ಲಿ ಬಜೆಟ್ ಪೂರ್ವದಂತೆ ತಲಾ ವ್ಯಕ್ತಿಗೆ 7 ಕೆ.ಜಿ. ಅಕ್ಕಿ ವಿತರಣೆ ಮಾಡುತ್ತಿಲ್ಲಾ ಅದೇ ರೀತಿ, ಕೇಂದ್ರ ಸರಕಾರ ಘೋಷಿಸಿದ ಒಂದು ಕೆ.ಜಿ. ಬೇಳೆ ಮತ್ತು ಕೆ.ಜಿ. ಅಡುಗೆ ಎಣ್ಣೆಯನ್ನು ವಿತರಿಸುತ್ತಿಲ್ಲ. ಕೇಂದ್ರ ಸರಕಾರದ ಈ ಘೋಷಣೆಯು ಸಮರ್ಪಕವಾಗಿಲ್ಲ ಕನಿಷ್ಠ ಐದು ಲೀಟರ್ ಅಡುಗೆ ಎಣ್ಣೆ ಮತ್ತು ಐದು ಕೆ.ಜಿ. ಬೆಳೆಯಾದರೂ ಘೋಷಿಸಬೇಕಿತ್ತು.

ಆದ್ದರಿಂದ, ರಾಜ್ಯ ಸರಕಾರ ಕೇರಳದ ಮಾದರಿಯಲ್ಲಿ ಎಲ್ಲಾ ಕನಿಷ್ಟ 16 ಅಗತ್ಯ ಆಹಾರ ಸಾಮಗ್ರಿಗಳು ಮತ್ತು ಆರೋಗ್ಯ ಸುರಕ್ಷತಾ ಪರಿಕರಗಳು ಮಹಿಳೆಯರಿಗೆ ಋತುಮಾನದ ಪ್ಯಾಡ್ ಗಳನ್ನು ಒದಗಿಸಲು ಮತ್ತು ಈ ಲಾಕ್ ಡೌನ್ ಅವಧಿಗೆ ಈ ಎಲ್ಲಾ ವಯಸ್ಕರಿಗೆ ಪ್ರತಿ ದಿನಕ್ಕೆ ತಲಾ 500 ರೂ. ಗಳಂತೆ ನಿರುದ್ಯೋಗ ಭತ್ಯೆಯನ್ನು ಒದಗಿಸುವಂತೆ ಸಿಪಿಐಎಂ ಒತ್ತಾಯಿಸುತ್ತದೆ.

2) ಗ್ರಾಮ ಹಾಗೂ ನಗರಗಳ ಸ್ಲಂಗಳಲ್ಲಿರುವ ಅನಾಥರು, ಕೈಲಾಗದವರು, ಮಕ್ಕಳಿರದ ವಯೋವೃದ್ದರು ಹಾಗೂ ಅನಾರೋಗ್ಯಪೀಡಿತ ಕುಟುಂಬಗಳನ್ನು ಗುರುತಿಸಿ ಅವರುಗಳಿಗೆ ಮನೆಮನೆಗೆ ಆಹಾರ ಸರಬರಾಜು ಮಾಡುವ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪ್ರಾಥಮಿಕ ಶಾಲೆಗಳ ಅಕ್ಷರ ದಾಸೋಹ ಸಿಬ್ಬಂಧಿಯನ್ನು ಬಳಸಬೇಕು. ಹಾಸ್ಟೆಲ್ ಇರುವೆಡೆ ಅವುಗಳನ್ನು ಮತ್ತು ಅವುಗಳ ಸಿಬ್ಬಂಧಿಗಳನ್ನು ಬಳಸಿಕೊಳ್ಳಬೇಕು.

3) ಆಶಾ ಕಾರ್ಯಕರ್ತರು, ಅಂಗನವಾಡಿ ನೌಕರರು, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು, ಶುಚಿತ್ವದ ಕಾರ್ಯದಲ್ಲಿ ತೊಡಗಿರುವ ಮುನ್ಸಿಪಲ್ ಕಾರ್ಮಿಕರು ಅದೇ ರೀತಿ, ಹಾಸ್ಟೆಲ್ ಮತ್ತು ಅಕ್ಷರ ದಾಸೋಹ ಕೆಲಸಗಾರರು (ಬಳಸಿಕೊಂಡಲ್ಲಿ) ಈ ಎಲ್ಲರಿಗೂ ಆರೋಗ್ಯ ಸುರಕ್ಷ ಪರಿಕರಗಳು ಮತ್ತು ವಿಮಾ ಸೌಲಭ್ಯವನ್ನು ಕೂಡಲೇ ಒದಗಿಸಬೇಕು.

ಈ ಎಲ್ಲದಕ್ಕೂ ಅಗತ್ಯ ನೆರವನ್ನು ಕೇಂದ್ರ ಸರಕಾರದಿಂದ ಪಡೆಯಲು ಒತ್ತಾಯಿಸಬೇಕು.

ಈ ಕುರಿತು ಸೂಕ್ತ ಕ್ರಮವಹಿಸಲು ಮರಳಿ ವಿನಂತಿ.

ಯು. ಬಸವರಾಜ
ಕಾರ್ಯದರ್ಶಿ

Leave a Reply

Your email address will not be published. Required fields are marked *