ಅನ್ಯ ರಾಜ್ಯದ ಪ್ರಜೆಗಳ ಸಂಕಷ್ಟ ಪರಿಹರಿಸಿ

ಪಶ್ಷಿಮ ಬಂಗಾಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಸಂಬಂಧಿಸಿದ ವಿಚಾರವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಾವಿರಾರು ಜನರು ಲಾಕ್‌ ಡೌನ್‌ ನಿಂದ ಎದುರಿಸುತ್ತಿರುವ ಪ್ರಜೆಗಳ ಸಂಕಷ್ಟಕ್ಕೆ ಗಮನಹರಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಮನವಿಯ ಪೂರ್ಣ ವಿವರಗಳು ಈ ಕೆಳಗಿನಂತೆ ಇವೆ.

ದಿನಾಂಕ: 29-04-2020

ಗೆ,
ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.

ಮಾನ್ಯರೇ,

ವಿಷಯ: ಪಶ್ಚಿಮ ಬಂಗಾಳ ಮತ್ತಿತರೇ ರಾಜ್ಯಗಳಿಂದ ತಮ್ಮ ಆರೋಗ್ಯ ತಪಾಸಣೆಗೆ ಬಂದು ಲಾಕ್ ಡೌನ್ ಆದ ಜನರ ಸಂಕಷ್ಠ ಪರಿಹರಿಸಲು ಕೋರಿ ಮನವಿ.

ರಾಜ್ಯದ ಪ್ರಮುಖ ಆಸ್ಪತ್ರೆಗಳಿಗೆ ವೈದ್ಯಕೀಯ ಸೌಲಭ್ಯಕ್ಕೆ ಬೇರೆ, ಬೇರೆ ರಾಜ್ಯಗಳಿಂದ ಬಂದು ಸಹಸ್ರಾರು ಜನ ಲಾಕ್ಡೌನ್‌ನಲ್ಲಿ ಬಂಧಿಗಳಾಗಿ ತೀವ್ರ ಸಂಕಷ್ಠಕ್ಕೆ ಸಿಲುಕಿರುವುದು ತಮ್ಮ ಗಮನಕ್ಕಿದೆಯೆಂದು ಭಾವಿಸುವೆನು.

ಬೃಹತ್ ಬೆಂಗಳೂರಿನ ಕಾಡುಗೋಡಿ ಹತ್ತಿರ ವಿರುವ ಸಾಯಿಬಾಬಾ ಆಸ್ಪತ್ರೆಗೆ ಪಶ್ಚಿಮ ಬಂಗಾಳ ರಾಜ್ಯ ಒಂದರಿಂದಲೇ ಕ್ಯಾನ್ಸರ್ ಮತ್ತಿತರೇ ನರ ರೋಗ ಮತ್ತಿತರೇ ಸಂಬಂಧ ಶೂಶೃಷೆಗೆಂದು ಬಂದವರ ಮತ್ತು ಅವರ ಸಹಾಯಕ್ಕೆ ಬಂದವರ ಸಂಖ್ಯೆ 5,000 ಕ್ಕೂ ಹೆಚ್ಚಾಗಿದೆಯೆನ್ನಲಾಗಿದೆ.

ಕಳೆದ ಲಾಕ್ ಡೌನ್ ಅವಧಿಯಲ್ಲಿ ಪ್ರತಿ ದಿನ ವಸತಿ ಬಾಡಿಗೆ, ಆಹಾರ ಮತ್ತಿತರೆ ವೆಚ್ಚವಾಗಿ ತಲಾ 500 ರೂ. ಗಳಿಗಿಂತಲೂ ಅಧಿಕ ಮೊತ್ತ ಖರ್ಚು ಮಾಡಬೇಕಾಗಿ ಬಂದಿದೆ ಮತ್ತು ಔಷಧಿಗಾಗಿಯೂ ವೆಚ್ಚ ಮಾಡಬೇಕಿದೆ. ಕಳೆದ 40 ದಿನಗಳಿಂದ ದೊಡ್ಡ ಮೊತ್ತ ಕಳೆದುಕೊಂಡು ತೀವ್ರ ಸಂಕಷ್ಠಕ್ಕೆ ಸಿಲುಕಿದ್ದಾರೆ. ಈ ನಡುವೆ ಸ್ಥಳೀಯ ಆಡಳಿತದ ಮದ್ಯ ಪ್ರವೇಶದಿಂದ ಸ್ವಲ್ಪ ನೆರವು ಸಿಕ್ಕರೂ ಸಂಕಷ್ಟಗಳು ಬೆಳೆಯುತ್ತಲೇ ಇವೆ ಎನ್ನಲಾಗಿದೆ.

ಬಹುತೇಕರು ವೃದ್ಧರು, ತೀವ್ರ ಮತ್ತು ಗಂಭೀರ ಅನಾರೋಗ್ಯದಲ್ಲಿರುವವರು ಇದ್ದಾರೆ. ಇವರ ವೆಚ್ಚಕ್ಕೆ ಲಾಕ್ ಡೌನ್ ನಲ್ಲಿರುವ ಬಂಗಾಲದ ಅವರು ಕುಟುಂಬಗಳು ನೆರವಾಗಲು ತೀವ್ರ ಸಂಕಷ್ಠವನ್ನೆದುರಿಸುತ್ತಿವೆ ಎನ್ನಲಾಗಿದೆ.

ರಾಜ್ಯ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ, ಇವರಿಗೆ ಅಗತ್ಯ ನೆರವು ನೀಡಬೇಕು ಮತ್ತು ಪಶ್ಚಿಮ ಬಂಗಾಳಕ್ಕೆ ತೆರಳಲು ಅಗತ್ಯ ಸಾರಿಗೆ ಮತ್ತು ಪರವಾನಿಗಿ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯ ಸರಕಾರದ ಸಹಾಯ ಪಡೆಯಬಹುದು.

ಅದೇ ರೀತಿ, ರಾಜ್ಯದ ಇತರೇ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಸಿಲುಕಿರುವ ಇತರೇ ರಾಜ್ಯಗಳ ಜನತೆಗೂ ಅಗತ್ಯ ನೆರವು ನೀಡಲು ಭಾರತ ಕಮ್ಯೂನಿಷ್ಟ ಪಕ್ಷ (ಮಾರ್ಕ್ಸವಾದಿ)ದ ರಾಜ್ಯ ಸಮಿತಿ ಪರವಾಗಿ ತಮ್ಮಲ್ಲಿ ಮನವಿ ಮಾಡುವೆನು. ಈ ಕುರಿತು ಕೈಗೊಂಡ ಕ್ರಮಗಳ ಮಾಹಿತಿಯನ್ನು ನೀಡಲು ವಿನಂತಿಸುವೆನು.

ವಂದನೆಗಳೊಂದಿಗೆ,

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *