ಚುನಾವಣಾ ಪ್ರಚಾರ ಮತ್ತು ಮತದಾನವನ್ನು ಡಿಜಿಟಲ್‍ ವಿಧಾನಕ್ಕೆ ಸೀಮಿತಗೊಳಿಸಬಾರದು

ಚುನಾವಣಾ ಆಯೋಗ ಮತದಾರರು ಮತ್ತು ರಾಜಕೀಯ ಪಕ್ಷಗಳ ಭೌತಿಕ ಭಾಗವಹಿಸುವಿಕೆಯ ಆಧಾರದಲ್ಲಿ, ಚುನಾವಣೆಗಳನ್ನು ನಡೆಸಬೇಕು. ಇದನ್ನು ಮಹಾಸೋಂಕಿನಿಂದಾಗಿ ಮತ್ತು ಜನಗಳ ಜೀವಗಳಿಗೆ ಅತ್ಯುನ್ನತ ಆದ್ಯತೆ ನೀಡಬೇಕಾದ ಸುರಕ್ಷತಾ ಅಗತ್ಯಗಳಿಂದಾಗಿ ಉಂಟಾಗಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು.

ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗುವಂತಿರಬೇಕು ಎಂಬುದು ಯಾರೂ ಉಲ್ಲಂಘಿಸಬಾರದ ನೀತಿ. ಇದರ ಆಧಾರದಲ್ಲಿಯೇ ಚುನಾವಣಾ ಆಯೋಗ ಒಂದು ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಯುವಂತೆ ಖಾತ್ರಿಪಡಿಸಬೇಕು. ಏಕೆಂದರೆ ವರ್ಚುವಲ್ ಪ್ರಚಾರವನ್ನಷ್ಟೇ ಆಧರಿಸುವ ಚಟುವಟಿಕೆ ಅಪಾರ ಹಣಕಾಸು ಸಂಪನ್ಮೂಲಗಳನ್ನು ಹೊಂದಿರುವ ಪಕ್ಷಗಳಿಗೆ ಹೆಚ್ಚಿನ ಅನುಕೂಲಗಳನ್ನು ಕೊಡುತ್ತದೆ ಎಂಬುದು ಸ್ಪಷ್ಟ. ಆದ್ದರಿಂದ ಡಿಜಿಟಲ್ ಸ್ವರೂಪದಲ್ಲಿ ಮಾತ್ರವೇ ಪ್ರಚಾರ ಮತ್ತು ಮತದಾನ ಇರಬೇಕೆಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಚುನಾವಣಾ ಅಯೋಗಕ್ಕೆ ತಿಳಿಸಿದೆ.

ಬಿಹಾರ ವಿಧಾನಸಭಾ ಚುನಾವಣೆ ಮತ್ತು ಕೆಲವು ಇತರ ಉಪಚುನಾವಣೆಗಳನ್ನು ಹೇಗೆ ನಡೆಸಬಹುದು ಎಂಬ ಬಗ್ಗೆ ಅಭಿಪ್ರಾಯಗಳನ್ನು ಕೇಳಿ  ಚುನಾವಣಾ ಆಯೋಗ ಜುಲೈ 17ರಂದು ಬರೆದ ಪತ್ರಕ್ಕೆ ಸ್ಪಂದಿಸುತ್ತ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯ ನೀಲೋತ್ಪಲ ಬಸು ಬರೆದ ಪತ್ರದಲ್ಲಿ  ಇದನ್ನು ಸ್ಪಷ್ಟಪಡಿಸಿದ್ದಾರೆ,

“ಚುನಾವಣಾ ಪ್ರಚಾರ ಸಾರ್ವಜನಿಕ ಸಭೆಗಳನ್ನು, ದೈಹಿಕ ಅಂತರ ಮತ್ತಿತರ ಸುರಕ್ಷತಾ ಅಗತ್ಯಗಳನ್ನು ಖಾತ್ರಿಪಡಿಸಿಕೊಂಡು ನಡೆಸಲು ಅವಕಾಶ ಕೊಡಬೇಕು ಎಂದು ನಾವು ಬಯಸುತ್ತೇವೆ. ಅದೇ ರೀತಿಯಲ್ಲಿ, ಅಭ್ಯರ್ಥಿಗಳು ಮತ್ತು ಅವರ ಪ್ರತಿನಿಧಿಗಳು ಇಂತಹುದೇ ಪ್ರಚಾರಕರ ಒಂದು ಸಣ್ಣ ಗುಂಪಿನೊಂದಿಗೆ ಮತದಾರರ ಮನೆಗಳಿಗೆ ಭೇಟಿ ನೀಡಲು ,ಆರೋಗ್ಯ ಮತ್ತು ಸುರಕ್ಷತಾ ಅಗತ್ಯಗಳನ್ನು ಕಾಪಾಡುವ ಕ್ರಮಕ್ಕೆ ಒಳಪಟ್ಟು ಅವಕಾಶ ನೀಡಬೇಕು” ಎಂದು ನೀಲೋತ್ಪಲ ಬಸು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಭಾರತೀಯ ಸಂವಿಧಾನ ಚುನಾವಣಾ ಆಯೋಗಕ್ಕೆ, ಯಾವುದೇ ಸ್ಪರ್ಧಾಳು ಪಕ್ಷಕ್ಕೆ ನ್ಯಾಯಯುತವಲ್ಲದ ರೀತಿಯಲ್ಲಿ ಅನುಕೂಲವನ್ನು ಮಾಡಿಕೊಡಲು ಅವಕಾಶವಿರದ ರೀತಿಯಲ್ಲಿ ಚುನಾವಣೆಗಳು ನಡೆಯುವಂತೆ ಖಾತ್ರಿಪಡಿಸಬೇಕೆಂದು ವಿಧಿಸಿದೆ ಎಂದು ಸಿಪಿಐ(ಎಂ) ತನ್ನ ಪತ್ರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *