ರಾಜಕೀಯ ಮೇಲಾಟ ನಿಲ್ಲಿಸಿ ಪರಿಣತಿ ಆಧಾರಿತ ವಾರ್ ರೂಂ ನಿರ್ವಹಿಸಿ

ಕೋವಿಡ್ ವಾರ್ ರೂಂಗಳನ್ನು ಸುಧಾರಿಸುವ ನೆಪದಲ್ಲಿ ನಡೆದಿರುವ ರಾಜಕೀಯ ಮೇಲಾಟ ನಿಲ್ಲಿಸಿ ಪರಿಣತಿ ಆಧರಿಸಿ ನಿರ್ವಹಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.

ಬಿಜೆಪಿಯ ಸಂಸದರು, ಶಾಸಕರು ಕೋವಿಡ್ ವಾರ್ ರೂಂಗಳಿಗೆ ದಿಢೀರ್ ಬೇಟಿ ನೀಡಿ ಮಾಡಿದ್ದ ಕೋವಿಡ್‌ ಸೋಂಕಿತರಿಗೆ ಹಾಸಿಗೆ ನೀಡಿಕೆಯಲ್ಲಿ ಆರೋಪ ಮುಂತಾದ ಅಂಶಗಳು ಕೋವಿಡ್ ರೋಗಿಗಳಿಗೆ ಹಾಸಿಗೆಗಳು ಮುಂತಾದ ಸೌಲಭ್ಯಗಳನ್ನು ಒದಗಿಸಲು ಇರುವ ಸಧ್ಯದ ವ್ಯವಸ್ಥೆಯ ಮೇಲೆ ಜನರಲ್ಲಿ ಅಪನಂಬಿಕೆ ಅನುಮಾನವನ್ನು ಉಂಟು ಮಾಡಿದೆ. ಅದೇ ವೇಳೆ ಕೆಲವು ವಾರ್ ರೂಂಗಳು ಒಂದೆರಡು ದಿನ ಕಾರ್ಯನಿರ್ವಹಿಸದೆ ಜನ ಸಂಕಷ್ಟ ಎದುರಿಸಿದ್ದಾರೆ.

ಇದೀಗ 100 ಗಂಟೆಗಳಲ್ಲಿ ವಾರ್ ರೂಂಗಳ ವ್ಯವಸ್ಥೆ ಸುಧಾರಣೆ ಹೆಸರಲ್ಲಿ ಸಂಸದ ತೇಜಸ್ವಿ ಸೂರ್ಯ ನೀಡಿರುವ ಶಿಫಾರಸ್ಸು ಅಳವಡಿಸುವ ಪ್ರಯತ್ನವನ್ನು ಜಾರಿಮಾಡಿದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂಬ ಆತಂಕವನ್ನು ಪರಿಣಿತರು ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತವಿರುವಾಗಲೇ ಬಿಜೆಪಿ ಒಳಗಿನ ರಾಜಕೀಯ ಮೇಲಾಟಕ್ಕಾಗಿ ವ್ಯವಸ್ಥೆಯ ಸುಧಾರಣೆ ನೆಪದಲ್ಲಿ ಇರುವ ವಾರ್ ರೂಂ ವ್ಯವಸ್ಥೆಯು ಹದಗೆಡವಲು ಬಿಡದೆ ಪರಿಣತಿ ಆಧಾರಿತವಾಗಿ ಸಜ್ಜುಗೊಳಿಸಲು ಸಿಪಿಐ(ಎಂ) ಒತ್ತಾಯಿಸಿದೆ.

ಲಾಕ್‌ಡೌನ್‌ ಜಾರಿ ಪೋಲಿಸರ ದಬ್ಬಾಳಿಕೆಗೆ ಕಡಿವಾಣ ಹಾಕಲು ಒತ್ತಾಯ

ಲಾಕ್‌ಡೌನ್ ಜಾರಿಗೊಳಿಸಲು ಪೊಲೀಸರು ಮನಸ್ಸೋಯಿಚ್ಚೆ ಸಿಕ್ಕಸಿಕ್ಕವರ ಮೇಲೆ ಲಾಠಿ ಬೀಸಿರುವ ಕ್ರಮವು ಖಂಡನೀಯವಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷವು ಪೋಲಿಸರ ದಬ್ಬಾಳಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದೆ.

ದಿನಕ್ಕೊಂದು ಗಂಟೆಗೊಂದು ಆದೇಶ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮವು ಇಂತಹ ದಯನೀಯ ಪರಿಸ್ಥಿತಿಗೆ ಜನತೆಯನ್ನು ದೂಡಿ ಅವರ ಮೇಲೆ ಪೊಲೀಸ್ ದಬ್ಬಾಳಿಕೆಗೆ ರಾಜ್ಯ ಸರ್ಕಾರವು ಅನುವುಗೊಳಿಸಿದೆ. ಜನತೆಯನ್ನು ಮನೆಯಲ್ಲೇ ಇರಲು ಮನ ಒಲಿಸಿ ಅವರಿಗೆ ಅಗತ್ಯ ನೆರವು ನೀಡಿದಲ್ಲಿ ಸಹಕರಿಸುತ್ತಾರೆ. ಆದ ಕಾರಣ ಕೂಡಲೇ ಜನತೆಗೆ ಅಗತ್ಯ ಪಡಿತರ ಮತ್ತು ಪರಿಹಾರ ಪ್ಯಾಕೇಜ್ ಪ್ರಕಟಿಸಿ ವಿಶ್ವಾಸ ಮೂಡಿಸಬೇಕೆಂದು ಸಿಪಿಐ(ಎಂ) ಕೋರಿದೆ.

Leave a Reply

Your email address will not be published. Required fields are marked *