ಹರಿದ್ವಾರ ಸಭೆಯಲ್ಲಿ ಸಂವಿಧಾನ ಮತ್ತು ಕಾನೂನು ಚೌಕಟ್ಟಿನ ಉಲ್ಲಂಘನೆ: ಬಲವಾದ ಕ್ರಮಕ್ಕೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹ

ಹರಿದ್ವಾರದಲ್ಲಿ ‘ ಧರ್ಮ ಸಂಸದ್‌’ ಎಂದು ನಡೆದ ಸಮಾರಂಭದಲ್ಲಿ  ಮುಸ್ಲಿಮರ ವಿರುದ್ಧದ ತೀವ್ರ ದ್ವೇಷದ ಭಾಷಣಗಳು ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ಸಂವಿಧಾನ ಮತ್ತು ಕಾನೂನು ಚೌಕಟ್ಟಿನ ಉಲ್ಲಂಘನೆಯಾಗಿವೆ.. ಆ ಭಾಷಣಗಳನ್ನು ಮಾಡಿದವರನ್ನು ತಕ್ಷಣವೇ ಬಂಧಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಈ ಭಾಷಣಗಳು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿರುದ್ಧವೂ ಸೇರಿದಂತೆ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವಂತಿವೆ. ಬಿಜೆಪಿ ನೇತೃತ್ವದ ಸರ್ಕಾರಗಳ ಅಡಿಯಲ್ಲಿ ಅಂತಹವರು ಪಡೆದಿರುವ ಅಭಯಹಸ್ತದಿಂದಾಗಿ  ಇದು ಮೂರು ದಿನಗಳವರೆಗೆ ಅಡೆತಡೆಯಿಲ್ಲದೆ ಮುಂದುವರಿಯಲು ಸಾಧ್ಯವಾಯಿತು.. ನಾಚಿಕೆಗೇಡಿನ ಸಂಗತಿಯೆಂದರೆ, ವಿಳಂಬವಾಗಿ ಹಾಕಿದ  ಎಫ್‌ಐಆರ್  ಕೂಡ ಕಾನೂನಿನ ಅಪಹಾಸ್ಯವೇ ಆಗಿದೆ. ಏಕೆಂದರೆ ಇದು ಅಲ್ಲಿಯ ಕಲಾಪಗಳ ವೀಡಿಯೊಗಳು ತಪ್ಪಿತಸ್ಥರ ಗುರುತನ್ನು ಸ್ಪಷ್ಟವಾಗಿ ತೋರಿಸುತ್ತಿದ್ದರೂ ಕೂಡ ಸಂವಿಧಾನದ ಮೇಲಿನ ಈ ದಾಳಿಯ ಪ್ರಮುಖ ಅಪರಾಧಿಗಳನ್ನು ಹೆಸರಿಸುವುದಿಲ್ಲ

ಎಫ್‌ಐಆರ್‌ನಲ್ಲಿ ಅಂತವರ ಹೆಸರುಗಳನ್ನು ಸೇರಿಸಬೇಕು ಎಂದು ಆಗ್ರಹಿಸಿರುವ  ಪೊಲಿಟ್ ಬ್ಯೂರೋ, ದ್ವೇಷದ ಭಾಷಣವನ್ನು ಮಾತ್ರವಲ್ಲದೆ ಹಿಂಸಾಚಾರಕ್ಕೆ ಪ್ರಚೋದನೆಯನ್ನು ನೀಡಿದ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಕರೆ ನೀಡಿದೆ.

 

Leave a Reply

Your email address will not be published. Required fields are marked *