ಕಾರ್ಪೊರೇಟ್ ಲೂಟಿಗಾಗಿ ದುರ್ಬಲ ಸಮುದಾಯಗಳನ್ನು ಪರಸ್ಪರ ಮುಖಾಮುಖಿಯಾಗಿಸಿದ ಮೀಸಲಾತಿ ಸಮರ

ಕರ್ನಾಟಕ ರಾಜಕೀಯ ಪರಿಸ್ಥಿತಿ

cpim rajya sammelanaಭಾರತದ ಪ್ರಮುಖ ಎಡಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ 23ನೇ ಮಹಾಧಿವೇಶನ ಎಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಸಮ್ಮೇಳನ ಜನವರಿ 2 ರಿಂದ 4 ರ ವರೆಗೆ ಗಂಗಾವತಿಯಲ್ಲಿ ನಡೆಯಲಿದೆ. ಕರ್ನಾಟಕದ ಜನತೆಯ, ಅದರಲ್ಲೂ ಕಾರ್ಮಿಕರ, ರೈತರ ಮತ್ತು ಇತರ ದುಡಿಯುವ ಜನವಿಭಾಗಗಳ ಹಿತರಕ್ಷಣೆಯಲ್ಲಿ ಕಳೆದ ಮೂರು ವರ್ಷಗಳ ಅನುಭವಗಳು ಮತ್ತು ಅದರ ಬೆಳಕಿನಲ್ಲಿ ಮುನ್ನಡೆಯ ದಾರಿಯನ್ನು ರೂಪಿಸುವುದು ಈ ಸಮ್ಮೇಳನದ ಪ್ರಮುಖ ಕಾರ್ಯಸೂಚಿ. ದುಡಿಯುವ ಜನವಿಭಾಗಗಳ ನಡುವೆ ಕೆಲಸ ಮಾಡುತ್ತಿರುವವರ ಪ್ರತಿನಿಧಿಗಳು ಇದನ್ನು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಮುಖಂಡತ್ವ ಸಿದ್ಧಪಡಿಸಿರುವ ಕರಡು ವರದಿಯ ಕೆಲವು ಅಂಶಗಳನ್ನು ಇಲ್ಲಿ ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

ಸಿಪಿಐ(ಎಂ) ಕರ್ನಾಟಕ 23ನೆಯ ರಾಜ್ಯ ಸಮ್ಮೇಳನದ ಕರಡು ವರದಿಯ ಆಯ್ದ ಭಾಗಗಳು

ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಬಿಜೆಪಿ ನೇತೃತ್ವದ ಒಕ್ಕೂಟ ಸರಕಾರ ಮೀಸಲಾತಿ ವಿರೋಧಿ ನಿಲುಮೆ ಹೊಂದಿದೆ. ಸಾಮಾಜಿಕ ನ್ಯಾಯವನ್ನು ಆಧರಿಸಿರುವ ಮೀಸಲಾತಿಯು ಸಾಮಾಜಿಕ ತಾರತಮ್ಯಕ್ಕೊಳಗಾದ ಜನ ಸಮುದಾಯಗಳಿಗೆ ದೊರಕದಂತೆ ಕಾರ್ಯ ನಿರ್ವಹಿಸುತ್ತಿದೆ.

ಸಾರ್ವಜನಿಕ ರಂಗದ ಕೈಗಾರಿಕೆಗಳು ಉದ್ದಿಮೆಗಳನ್ನು, ಸಾರ್ವಜನಿಕ ಶಿಕ್ಷಣವೂ ಸೇರಿದಂತೆ ಇತರೆ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಅದೇ ರೀತಿ, ಸರಕಾರಿ ಇಲಾಖೆಗಳಲ್ಲಿನ ಖಾಲಿ ಇರುವ ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುತ್ತಿಲ್ಲ. ಬದಲಿಗೆ ಉದ್ಯೋಗಗಳನ್ನು ಕಡಿತ ಮಾಡುತ್ತಿದೆ ಮತ್ತು ಹೊರ ಗುತ್ತಿಗೆ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸಗಾರರನ್ನು ನೇಮಿಸಿಕೊಳ್ಳುತ್ತಾ ಶಿಕ್ಷಣ ಹಾಗೂ ಸಾಮಾಜಿಕ ತಾರತಮ್ಯಕ್ಕೊಳಗಾದ ಸಮುದಾಯಗಳಿಗೆ ಅಲ್ಲಿ ಮೀಸಲಾತಿಯ ಮೂಲಕ ದೊರೆಯುತ್ತಿದ್ದ ಸೌಲಭ್ಯಗಳು ಸಿಗದಂತೆ ಲೂಟಿಕೋರ ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗಿದೆ. ಇದೇ ನೀತಿಯನ್ನು ಕರ್ನಾಟಕದ ಬಿಜೆಪಿ ಸರಕಾರ ಅನುಸರಿಸುತ್ತಿದೆ.

ಹೀಗೆ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ತೀವ್ರವಾಗಿ ಕಡಿತಗೊಳ್ಳುತ್ತಿರುವಾಗಲೇ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಸಮುದಾಯಗಳು, ಜನ ಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಳವನ್ನು ಮತ್ತು ಪರಿಶಿಷ್ಡ ಜಾತಿ ಸಮುದಾಯಗಳು ಒಳ ಮೀಸಲಾತಿ ಪ್ರಶ್ನೆಗಾಗಿ ಹೋರಾಡುತ್ತಿವೆ.

ವಾಸ್ತವದಲ್ಲಿ, ಮೀಸಲಾತಿ ಉಳಿಸಿಕೊಳ್ಳಲು ಖಾಸಗೀಕರಣದ ನೀತಿಯ ವಿರುದ್ದ ಬಲವಾಗಿ ದ್ವನಿ ಎತ್ತುತ್ತಾ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ವಿಸ್ತರಿಸಲು ಮತ್ತು ಸಾರ್ವಜನಿಕ ರಂಗದ ಶಿಕ್ಷಣವನ್ನು ವಿಸ್ತರಿಸಿ ಬಲ ಪಡಿಸಲು ವ್ಯಾಪಕವಾಗಿ ಬಂಡವಾಳ ತೊಡಗಿಸುವಂತೆ ಒತ್ತಾಯಿಸುತ್ತಲೇ ಮೀಸಲಾತಿ ವಿಸ್ತರಣೆಗಾಗಿ ಈ ಸಮುದಾಯಗಳು ಹೋರಾಡಬೇಕಿತ್ತು. ಇಲ್ಲವೇ ಎಲ್ಲ ದುರ್ಬಲ ಸಮುದಾಯಗಳ ಜೊತೆ ಮತ್ತು ಪ್ರಗತಿಪರರ ಜೊತೆ ಸೇರಿ ಸರ್ವರಿಗೂ ಶಿಕ್ಷಣ ಮತ್ತು ಸರ್ವರಿಗೂ ಉದ್ಯೋಗಕ್ಕಾಗಿ ಹೋರಾಡಬೇಕಿತ್ತು. ಹಾಗೇ ಮಾಡದೇ, ಒಂದೆಡೆ ಲೂಟಿಕೋರ ಕಾರ್ಪೋರೇಟ್ ಖಾಸಗೀಕರಣದ ಪರವಿರುವ ಕೇವಲ ಅಧಿಕಾರ ಲಾಲಸೆಯಿಂದ ಮೀಸಲಾತಿಪರವೆಂಬ ಸೋಗಲಾಡಿ ಕಾಂಗ್ರೆಸ್ ಪಕ್ಷವನ್ನು ನಂಬಿ, ಇರುವ ಮೀಸಲಾತಿ ಸೌಲಭ್ಯವನ್ನು ಕಳೆದು ಕೊಳ್ಳುವ, ಅಪಾಯವನ್ನು ಮೈಮೇಲೆ ಎಳೆದು ಕೊಳ್ಳುವ ಕೆಲಸದಲ್ಲಿ ತೊಡಗಿವೆ.

ಇದೇ ಸಂದರ್ಭದಲ್ಲಿ, ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂಬ ಪರಿಶಿಷ್ಠರ ಹಕ್ಕೊತ್ತಾಯವನ್ನು ಪರಿಗಣಿಸದ ಒಕ್ಕೂಟ ಸರಕಾರ ಮೀಸಲಾತಿ ಆಚೆ ಇರುವ ಶೇ 5 ಕ್ಕಿಂತಲೂ ಕಡಿಮೆ ಇರುವ ಮೇಲ್ಜಾತಿಗಳ ವಾರ್ಷಿಕ 8 ಲಕ್ಷ ರೂ ಆದಾಯ ಹೊಂದಿರುವ ಜನಗಳಿಗೆ ಶೇ 10 ರಷ್ಠು ಮೀಸಲಾತಿಯನ್ನು ಜಾರಿಗೊಳಿಸಿದೆ.

ಇದು ಸ್ಪಷ್ಠವಾಗಿ ಸಾಮಾಜಿಕ ತಾರತಮ್ಯಕ್ಕೊಳಗಾದ ಸಮುದಾಯಗಳ ಮೀಸಲಾತಿಯನ್ನು ಮತ್ತಷ್ಠು ಕುಗ್ಗಿಸುವ ಹುನ್ನಾರವೇ ಆಗಿದೆ.

ಕರ್ನಾಟಕದಲ್ಲಿ ಇದು, ಪರಿಶಿಷ್ಟ ಜಾತಿ ಸಮುದಾಯಗಳ ಒಳಗೆ ಒಳ ಮೀಸಲಾತಿ ವಿರೋಧಿಸುವ ಹೆಸರಿನಲ್ಲಿ ಪರಸ್ಪರ ಸಮುದಾಯಗಳನ್ನು ಮುಖಾಮುಖಿಯಾಗಿಸಿ ತನ್ನ ರಾಜಕೀಯ ಬೆಂಬಲವನ್ನು ಬಿಜೆಪಿ ಹೆಚ್ಚಿಸಿಕೊಳ್ಳುತ್ತಿದೆ.

ಈ ಅವಧಿಯಲ್ಲಿ ಹಲವು ಶೂದ್ರ ಹಿಂದುಳಿದ ಜಾತಿ ಸಮುದಾಯಗಳು ತಮಗೂ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಸಮುದಾಯಗಳ ಪಟ್ಟಿ ಒಳಗೆ ಪ್ರವೇಶ ಬೇಕೆಂದು ಹೋರಾಡುತ್ತಿವೆ. ಲಿಂಗಾಯಿತ ಸಮುದಾಯದ ಕೆಲ ಒಳ ಜಾತಿ ಸಮುದಾಯವು ತಮಗೂ ಮೀಸಲಾತಿ ಬೇಕೆಂದು ಮಠಾಧೀಶರ ನೇತೃತ್ವದಲ್ಲಿ ಚಳುವಳಿಗಿಳಿದಿವೆ.

ಅದೇ ರೀತಿ, ಬಡ್ತಿ ಮೀಸಲಾತಿ ವಿಚಾರವೂ ನೌಕರರ ನಡುವೆ ಪರಸ್ಪರರನ್ನು ಮುಖಾಮುಖಿಯಾಗಿಸುತ್ದಿದೆ. ಮೀಸಲಾತಿ ವಿರೋಧಿ ಶಕ್ತಿಗಳು ಇತರರನ್ನು ಬಡ್ತಿ ಮೀಸಲಾತಿ ಪಡೆಯುವವರ ಮೇಲೆ ಎತ್ತಿಕಟ್ಟುತ್ತಿವೆ.

ಇದೆಲ್ಲವೂ ಅಧಿಕಾರದಾಹಿ ಬಂಡವಾಳಶಾಹಿ-ಭೂಮಾಲಕ ರಾಜಕಾರಣದಿಂದ ಸಾಮಾಜಿಕ ತಾರತಮ್ಯಕ್ಕೊಳಗಾದ ಜನ ಸಮುದಾಯಗಳನ್ನು ಪರಸ್ಪರರ ನಡುವೆ ಮುಖಾಮುಖಿಯಾಗಿಸುವ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳನ್ನು ಈ ಎಲ್ಲಾ ಸಮುದಾಯಗಳ ವಿರುದ್ದ ಎತ್ತಿಕಟ್ಟುವ ಕ್ರಮಗಳಾಗಿವೆ. ಇವು ಜನ ಸಮುದಾಯಗಳನ್ನು ಒಡೆದಾಳುವ ನೀತಿಗಳ ಭಾಗವಾಗಿ ಬರುತ್ತಿವೆ.

ಈ ಮುಖಾಮುಖಿಯಾಗುವ ನೀತಿಯಿಂದಾಗಿ ಈ ಸಮುದಾಯಗಳು ಇರುವ ಮೀಸಲು ಸೌಲಭ್ಯವನ್ನು ಕಳೆದುಕೊಳ್ಳುವಂತಾಗುತ್ತದೆ. ಮಾತ್ರವಲ್ಲಾ, ಇದು, ಜಾತಿ ತಾರತಮ್ಯದ ವಿರುದ್ದ ಜಾಗೃತಿ ಪಡೆದು ಮೀಸಲಾತಿ ನೆರವು ಕೇಳುವ ಸಮುದಾಯಗಳನ್ನು, ಎಂದಿನಂತೆ ಪರಸ್ರರನ್ನು ದ್ವೇಷಿಸುವ ಜಾತಿವಾದಿಗಳನ್ನಾಗಿಸಿ, ಜಾತಿ ಪದ್ದತಿಯ ಜಾಲದೊಳಗೆ ಸಿಲುಕಿಸಿ ಬಿಡುತ್ತದೆ..

ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ದುರ್ಬಲ ಜನ ಸಮುದಾಯಗಳು ಮತ್ತು ಸಾಮಾಜಿಕ ತಾರತಮ್ಯಕ್ಕೊಳಗಾದ ಜನ ಸಮುದಾಯಗಳು ಒಗ್ಗೂಡಿ ಎರಡೂ ಸರಕಾರಗಳ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಖಾಸಗೀಕರಣ ನೀತಿಗಳನ್ನು ತೀವ್ರವಾಗಿ ಪ್ರತಿರೋಧಿಸುತ್ತಾ, ಸಾರ್ವಜನಿಕ ರಂಗವನ್ನು ಬಲ ಪಡಿಸಿ, ವಿಸ್ಥರಿಸುವ ಮತ್ತು ಬೆಳೆಯುತ್ತಿರುವ ಜನ ಸಂಖ್ಯೆಗನುಗುಣವಾಗಿ ಸಾರ್ವಜನಿಕ ಶಿಕ್ಷಣ ಬಲಪಡಿಸುವ ಮತ್ತು ಸರಕಾರಿ ಉದ್ಯೋಗಗಳನ್ನು ವಿಸ್ಥರಿಸುವ ಖಾಲಿ ಇರುವ ಉದ್ಯೋಗ ಹಾಗೂ ಬ್ಯಾಕ್ ಲಾಗ್ ಉದ್ಯೋಗಗಳನ್ನು ತುಂಬುವAತೆ ಒತ್ತಾಯಿಸಬೇಕಾಗಿದೆ.

ಪರಿಶಿಷ್ಟರ ಜನ ಸಮುದಾಯಗಳಿಗನುಗುಣವಾಗಿ ಮೀಸಲಾತಿ ಹೆಚ್ಚಳಕ್ಕೆ ಅದೇ ರೀತಿ, ಕೆನೆಪದರವನ್ನು ಹೊರತು ಪಡಿಸಿದ ಹಿಂದುಳಿದ ಜಾತಿ ಸಮುದಾಯಗಳ ಜನ ಸಂಖ್ಯೆಗನುಗುಣವಾದ ಮೀಸಲಾತಿ ಹೆಚ್ಚಳಕ್ಕೆ ಮತ್ತು ಬಡ್ತಿ ಮೀಸಲಾತಿಯಲ್ಲೂ ಇತರೆ ಹಿಂದುಳಿದ ಜಾತಿ ಸಮುದಾಯಗಳಿಗೂ ವ್ಯವಸ್ಥೆ ಮಾಡಲು ಒತ್ತಾಯಿಸುವ ಮೂಲಕ ಜನ ಸಮುದಾಯಗಳನ್ನು ಪರಸ್ಪರರ ವಿರುದ್ಧ ಎತ್ತಿಕಟ್ಟುವ ಮತ್ತು ಕಾರ್ಪೋರೇಟ್ ಕಂಪನಿಗಳ ಲೂಟಿಕೋರ ರಾಜಕಾರಣವನ್ನು ಸೆಣಸಲು ಕ್ರಮವಹಿಸ ಬೇಕಾಗಿದೆ.

ಬೊಮ್ಮಾಯಿ ಸರ್ಕಾರದಿಂದ ಏನನ್ನು ನಿರೀಕ್ಷಿಸಬಹುದು?

ಬಿಜೆಪಿ ಅಖಿಲ ಭಾರತ ವರಿಷ್ಠರ ನಿರ್ದೇಶನದಂತೆ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ರಾಜ್ಯದ 30 ನೇ ಮುಖ್ಯ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ 23 ನೇ ವ್ಯಕ್ತಿ. ಅವರ ತಂದೆ ಎಸ್.ಆರ್. ಬೊಮ್ಮಾಯಿ ರಾಜ್ಯದ 11 ನೇ ಮುಖ್ಯಮಂತ್ರಿಯಾಗಿ 1988 ರಿಂದ 1989 ರ ವರೆಗೆ ಸೇವೆ ಸಲ್ಲಿಸಿದ್ದರು. ಬಸವರಾಜ ಬೊಮ್ಮಯಿಯವರು ಬಿ.ಎಸ್. ಯಡಿಯೂರಪ್ಪರವರ ಪರಮಾಪ್ತರಲ್ಲಿ ಒಬ್ಬರಾಗಿದ್ದು ಸಹಜವಾಗಿ ಅವರ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಬಸವರಾಜ ಬೊಮ್ಮಾಯಿಯವರು ತಂದೆಗೆ ತಕ್ಕ ಮಗ ಎಂದು ಹೇಳುವವರಿದ್ದಾರೆ. ಅಪ್ಪನ ಹಾದಿಯಲ್ಲೇ ನಡೆದು ಹೆಸರು ಮಾಡುತ್ತಾರೆ ಎಂದು ಅವರ ಅಭಿಮಾನಿಗಳ ನಿರೀಕ್ಷೆ. ಆದರೆ ಬಸವರಾಜ ಬೊಮ್ಮಾಯಿಯವರು ತನ್ನ ತಂದೆ ತುಳಿದ ರಾಜಕೀಯ ಹಾದಿಯನ್ನು ತ್ಯಜಿಸಿ ವರ್ಷಗಳೇ ಕಳೆದಿವೆ. ಎಸ್.ಆರ್. ಬೊಮ್ಮಾಯಿಯವರು ರಾಯಿಸ್ಟ್ ಸಮಾಜವಾದಿ ಸಿದ್ಧಾಂತವನ್ನು ಮೈಗೂಡಿಸಿಕೊಂಡವರು. ತಂದೆಯ ರಾಜಕೀಯ ಪಯಣವನ್ನು ಬಾಲ್ಯದಿಂದಲೇ ಗಮನಿಸುತ್ತಾ ಬಂದಿದ್ದ ಬಸವರಾಜ ಬೊಮ್ಮಾಯಿಯವರು ಸಮಾಜವಾದಿ ಚಿಂತನೆಯ ರಾಜಕೀಯವನ್ನೇ ಆಯ್ಕೆಮಾಡಿಕೊಂಡರು. ಬಹುಬೇಗ ಜನತಾ ಪರಿವಾರದ ಸಂಘಟನೆಯಲ್ಲಿ ಕ್ರಿಯಾಶೀಲರಾದರು. ಜಯಪ್ರಕಾಶ ನಾರಾಯಣ, ಲೋಹಿಯಾ ಸಿದ್ದಾಂತಗಳನ್ನು ಅಧ್ಯಯನ ಮಾಡಿದರು. ಆದರೆ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಹತ್ತಿರವಾದರು. ಯಡಿಯೂರಪ್ಪರವರ ಪರಮಾಪ್ತರಾದರು. ಮುಂದೆ ಯಡಿಯೂರಪ್ಪರವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದಾಗ ಬೊಮ್ಮಾಯಿರವರು ಬಿಜೆಪಿಯಲ್ಲಿಯೇ ಉಳಿದರು ಮಾತ್ರವಲ್ಲ ಯಡಿಯೂರಪ್ಪರವರನ್ನು ಮರಳಿ ಬಿಜೆಪಿಗೆ ಕರೆತರುವಲ್ಲಿಯೂ ಬಸವರಾಜ ಬೊಮ್ಮಾಯಿ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದಾಗಿ ಬಿಜೆಪಿ ವರಿಷ್ಠರಲ್ಲಿ ಬೊಮ್ಮಾಯಿ ಬಗ್ಗೆ ವಿಶ್ವಾಸ ಗಟ್ಟಿಗೊಳ್ಳಲು ಒಂದು ಕಾರಣವಾಯಿತು.

ಲಿಂಗಾಯತರ ಪೈಕಿ ಪಂಚಮಶಾಲಿ, ಬಣಜಿಗ ಮತ್ತು ಗಾಣಿಗೇರರು ರಾಜಕೀಯವಾಗಿ ಪ್ರಭಾವಿಗಳು. ಅವರೆಲ್ಲರನ್ನು ಒಂದುಗೂಡಿಸಿ ಯಡಿಯೂರಪ್ಪ ಅವರ ನಾಯಕರಾಗಿ ಹೊರಹೊಮ್ಮಿದ್ದರು. ಲಿಂಗಾಯತರ ಪೈಕಿ `ಸಾದರು’ ಅತಿ ಚಿಕ್ಕ ಉಪಪಂಗಡಕ್ಕೆ ಸೇರಿದವರಾಗಿದ್ದಾರೆ. ಬೊಮ್ಮಾಯಿಯವರು `ಸಾದರ’ ಒಳಪಂಗಡಕ್ಕೆ ಸೇರಿದವರು. ಮುಂದಿನ ದಿನಗಳಲ್ಲಿ ಲಿಂಗಾಯತರು ಒಳಪಂಗಡಗಳ ಆಧಾರದಲ್ಲಿ ತಿರುಗಿಬಿದ್ದರೆ ಅಚ್ಚರಿಯೇನಲ್ಲ.

ಅನಿರೀಕ್ಷಿತವಾಗಿ ರಾಜ್ಯದ ಮುಖ್ಯ ಮಂತ್ರಿಯಾಗಿರುವ ಬಸವರಾಜ ಅವರಿಂದ ಜನತೆ ಏನನ್ನು ನಿರೀಕ್ಷಿಸಬಹುದು. “ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿಯ ತತ್ವ ಸಿದ್ದಾಂತಗಳು ಆರ್‌ಎಸ್‌ಎಸ್ ಸಿದ್ಧಾಂತಗಳೇ ಆಗಿರುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವುದೆ. ಬೊಮ್ಮಾಯಿ ಮಾತುಗಳಲ್ಲಿ ಯಾವುದೇ ಹೊಸತನವಿಲ್ಲ. ಸಮಾಜವಾದಿ ದಾರಿಯನ್ನು ತ್ಯಜಿಸಿ ಕೋಮುವಾದಿ ಪಥವನ್ನು ಆಯ್ಕೆಮಾಡಿಕೊಂಡಿರುವ ಬಸವರಾಜ ಬೊಮ್ಮಾಯಿಯವರಿಂದ ಯಾವ ಒಳ್ಳೆಯ ದಿನಗಳನ್ನು ನಿರೀಕ್ಷಿಸಬಹುದು? ಬೊಮ್ಮಾಯಿರವರು ಮೋದಿಯವರನ್ನು ಅವಲಂಬಿಸಿ ಆಡಳಿತ ನಡೆಸಬೇಕು. ಅವರಿಂದ ಯಾವ ಸ್ವತಂತ್ರ ಕಾರ್ಯಾಚರಣೆ ಸಾಧ್ಯವಿಲ್ಲ. ವ್ಯಕ್ತಿ ಬದಲಾವಣೆ ಮುಖ್ಯವಲ್ಲ. ದೋರಣೆಗಳು ಬದಲಾಗಬೇಕು. ಜನತೆಯ ಆದಾಯ ಹೆಚ್ಚಿಸುವ, ನಿರುದ್ಯೋಗವನ್ನು ನಿರ್ಮೂಲನೆ ಮಾಡುವ, ರೈತರಿಗೆ ನ್ಯಾಯವನ್ನು ದೊರಕಿಸುವ, ಅಸ್ಪೃಶ್ಯತೆ, ಅಸಮಾನತೆ ಕಿತ್ತುಹಾಕುವ, ಮಹಿಳೆಯರಿಗೆ ರಕ್ಷಣೆಯನ್ನು ನೀಡುವ, ಜವಾಬ್ದಾರಿಯುತ ಆಡಳಿತವನ್ನು ನೀಡಲಾಗದೆ ಬೊಮ್ಮಾಯಿ ಸರ್ಕಾರ ಜನತೆಗೆ ಏನು ಒಳ್ಳೆಯದನ್ನು ಮಾಡಲು ಸಾಧ್ಯ. ಬೊಮ್ಮಾಯಿ ಅವರ ಆಡಳಿತ ಜನವಿರೋಧಿಯಾಗಿಯೇ ಮುಂದುವರೆದರೆ ಆಶ್ಚರ್ಯವೇನಿಲ್ಲ. ಅಷ್ಟು ಮಾತ್ರವಲ್ಲ. ಬೊಮ್ಮಾಯಿ ಆಡಳಿತ ಆರೆಸ್ಸೆಸ್ ಪ್ರೇರಿತ ಆಗಿರುವುದು ಖಚಿತ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳುವ ಮೂಲಕ ಅವರು ಹಿಂದುತ್ವ ಶಕ್ತಿಗಳಿಗೆ ಕುಮ್ಮಕ್ಕು ನೀಡಲು ಮತ್ತು ಆ ಮೂಲಕ ಆರೆಸ್ಸೆಸ್ ಮೆಚ್ಚಿಸಲು ಮುಂದಾಗುತ್ತಿದ್ದಾರೆ.

prcntg sarkara3ಹಗರಣಗಳು, ಭ್ರಷ್ಟಾಚಾರ ಮತ್ತು ಬಿಜೆಪಿ ಸರ್ಕಾರ

ರಾಜ್ಯದಲ್ಲಿನ ಗುತ್ತಿಗೆದಾರರು ಪ್ರಸಕ್ತ ಬಿಜೆಪಿ ಸರ್ಕಾರದಡಿ 40 ಶೇಕಡ ಲಂಚ ಕೇಳುವ ದುಸ್ಥಿತಿಯಿದೆ ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಮಧ್ಯಪ್ರವೇಶಿಸಲು ಕೋರುವ ಹಂತಕ್ಕೆ ರಾಜ್ಯದಲ್ಲಿನ ಭ್ರಷ್ಟಾಚಾರ ತಲುಪಿದೆ. ಜನರನ್ನು ವಂಚಿಸಿದ ಐಎಂಎ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಯತ್ನದಲ್ಲಿದ್ದಾರೆ. ಇಡೀ ಹಗರಣದ ತನಿಖೆ ವಿಳಂಬವಾಗಿ ದಿಕ್ಕು ತಪ್ಪಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಅದರ ಬೆನ್ನ ಹಿಂದೆ ಮಾಜಿ ಸಿಎಂ ಯಡಿಯೂರಪ್ಪನವರ ಕಚೇರಿ ಸಿಬ್ಬಂದಿ ಮತ್ತು ಮತ್ತು ಆಪ್ತರ ಮನೆ ಮೇಲಿನ ದಾಳಿಯಲ್ಲಿ ಪತ್ತೆಯಾದ ನೂರಾರು ಕೋಟಿ ರೂಗಳು ಎಸಿಬಿ ದಾಳಿ ಮೇಲೆ ಸರ್ಕಾರಿ ಅಧಿಕಾರಿಗಳ ಮನೆ ಮುಂತಾದೆಡೆ ಲಭಿಸಿರುವ ಹಣ, ಚಿನ್ನಾಭರಣಗಳು ಭ್ರಷ್ಟಚಾರದ ಆಳ ಅಗಲವನ್ನು ತೋರುತ್ತದೆ.

ಬಿಬಿಎಂಪಿ ಯಲ್ಲಿ ಹಗರಣಗಳು 2018-19 ರ ಸಾಲಿನ ಆಡಿಟ್ ವರದಿಯಿಂದ ಬಹಿರಂಗಗೊAಡಿವೆ. ಅಧಿಕಾರಿ ಮತ್ತು ಗುತ್ತಿಗೆದಾರರಿಂದ 144 ಕೋಟಿ ವಸೂಲಿಗೆ ಶಿಫಾರಸ್ಸು, 828 ಕೋಟಿ ರೂಗಳ ದುರ್ಬಳಕೆ, ಬೆಂಗಳೂರಿನಲ್ಲಿ ಇಲ್ಲದ ಜಮೀನು-ಕಟ್ಟಡಗಳಿಗೆ ಅಕ್ರಮವಾಗಿ ಅಭಿವೃದ್ಧಿ ಹಕ್ಕುಪತ್ರ (ಟಿಡಿಆರ್) ಪಡೆದು ರೂ.27.68 ಕೋಟಿಗೆ ಮಾರಾಟ ಮಾಡಿರುವ ದಲ್ಲಾಳಿಗಳು ಮತ್ತು ಅಧಿಕಾರಿಗಳ ಭ್ರಷ್ಟಾಚಾರ, ನಗರಾಭಿವೃದ್ಧಿ ಪ್ರಾಧಿಕಾರಗಳ ಅಪಾರ ಅಕ್ರಮಗಳು ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂಬರ್ ಒಂದು ರಾಜ್ಯವನ್ನಾಗಿಸಿದೆ.

ಇತ್ತೀಚಿನ ಬಿಟ್‌ಕಾಯಿನ್ ಹಗರಣದ ಆರೋಪಿ ಶ್ರೀಕಿ ಸರ್ಕಾರಿ ಇಲಾಖೆಗಳ ಅಂತರ್ಜಾಲಗಳನ್ನು ಹ್ಯಾಕ್ ಮಾಡಿ ನೂರಾರು ಕೋಟಿ ರೂಗಳನ್ನು ಲಪಟಾಯಿಸಿರುವ ವರದಿಗಳು, ಆತನೆÆಂದಿಗಿನ ಕೆಲವು ರಾಜಕೀಯ ಪ್ರಭಾವಿಗಳ ನಂಟು, ಅದರ ಕುರಿತು ಸಮಗ್ರ ತನಿಖೆಗೆ ಕ್ರಮವಹಿಸದ ನಡೆಗಳು ಭ್ರಷ್ಟಾಚಾರ, ಹಗರಣಗಳಿಗೂ ಬಿಜೆಪಿ ಸರ್ಕಾರಕ್ಕೂ ಇರುವ ನೇರ ನಂಟನ್ನು ತೋರುತ್ತದೆ. ಹಾಗಾಗಿಯೇ ಬಿಬಿಎಂಪಿ ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ವರದಿ ಸಲ್ಲಿಸಿ ವರ್ಷಗಳೆ ಕಳೆದರು ಕ್ರಮವಹಿಸದೆ ಇರುವ ನಡೆಗಳು ರಾಜ್ಯದ ಆರ್ಥಿಕ ಸಂಪನ್ಮೂಲ-ಜನತೆಯ ತೆರಿಗೆ ಹಣ ಭ್ರಷ್ಟರ ಪಾಲಾಗಿ, ಅಭಿವೃದ್ಧಿ ಕಾರ್ಯಗಳು ಸಮರ್ಥವಾಗಿ ನಡೆಯದÀ ದುಸ್ಥಿತಿ ನಿರ್ಮಿತವಾಗಿದೆ.

Leave a Reply

Your email address will not be published. Required fields are marked *