ಕೆಂಪು ಪುಸ್ತಕ ದಿನ 2022 ಆಚರಣೆಗೆ ಕರೆ

Communist-pranalike-Cover1ಫೆಬ್ರುವರಿ 21, 1848 ಮಾರ್ಕ್ಸ್-ಎಂಗೆಲ್ಸ್ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಪ್ರಕಟಿಸಿದ ದಿನ. ಇದನ್ನು ಪ್ರತಿ ವರ್ಷ ‘ಕೆಂಪು ಪುಸ್ತಕ ದಿನ’ವಾಗಿ ಆಚರಿಸಲು ಭಾರತ ಮತ್ತು ಅಂತರರಾಷ್ಟ್ರೀಯ ಎಡ ಪ್ರಕಾಶಕರ ಸಂಘ ನಿರ್ಧರಿಸಿ, ಕಳೆದ ಎರಡು ವರ್ಷಗಳಿಂದ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಕಮ್ಯುನಿಸ್ಟ್ ಪ್ರಣಾಳಿಕೆ ಅಥವಾ ಯಾವುದೇ ಕ್ಲಾಸಿಕ್ ಮಾರ್ಕ್ಸ್‌ವಾದಿ ಕೃತಿಯನ್ನು ಆರಿಸಿಕೊಂಡು ಅದರ ಓದು ಮತ್ತಿತರ ಕಾರ್ಯಕ್ರಮಗಳನ್ನು ತಮ್ಮ ಭಾಷಾ ದೇಶ-ಪ್ರದೇಶದ ಪರಿಸ್ಥಿತಿಗೆ ಅನುಗುಣವಾಗಿ ಆಚರಿಸಲು ಎರಡೂ ಸಂಘಗಳು ಕೆಲವು ಸಾಮಾನ್ಯ ಸೂಚನೆಗಳನ್ನು ನೀಡಿವೆ. ‘ಕೆಂಪು ಪುಸ್ತಕ ದಿನ’ದ ಆಚರಣೆಯ ಭಾಗವಾಗಿ “ಕಮ್ಯುನಿಸ್ಟ್ ಪ್ರಣಾಳಿಕೆ”ಯ ಕುರಿತು ಒಂದು ಅಂತರರಾಷ್ಟ್ರೀಯ ಕಲಾಕೃತಿ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯ ಆಯ್ದ ಕಲಾಕೃತಿಗಳ ಆನ್-ಲೈನ್ ಪ್ರದರ್ಶನವನ್ನು ಫೆಬ್ರವರಿ 21ರಂದು ಏರ್ಪಡಿಸಲಾಗಿದೆ.

ಮಾರ್ಕ್ಸ್‌ವಾದದ ಮೇಲೆ, ಎಡ ಪ್ರಜಾಸತ್ತಾತ್ಮಕ ಶಕ್ತಿಗಳ ಮೇಲೆ ಜಗತ್ತಿನಾದ್ಯಂತ ಸೈದ್ಧಾಂತಿಕ ದಾಳಿ (ಎರಡು ದೇಶಗಳಲ್ಲಿ ಮಾರ್ಕ್ಸ್‌ವಾದವನ್ನು ನಿಷೇಧಿಸಲಾಗಿದೆಯಂತೆ) ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ, “ಕೆಂಪು ಪುಸ್ತಕ ದಿನ”ವನ್ನು ಮೇ ದಿನಾಚರಣೆಯಂತೆ ಜಾಗತಿಕವಾಗಿ ಎಡಶಕ್ತಿಗಳ ಸಾರ್ವತ್ರಿಕ ದಿನವನ್ನಾಗಿ ಆಚರಿಸಿ ಸ್ಥಾಪಿಸುವ ಅಗತ್ಯವಿದೆ. ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ‘ಕೆಂಪು ಪುಸ್ತಕ ದಿನ’ವನ್ನು  ಫೆಬ್ರವರಿ 21, 2022 ರಂದು ಆಚರಿಸಲು ತನ್ನ ಘಟಕಗಳಿಗೆ ಕರೆ ಕೊಟ್ಟಿದೆ.

ಕರ್ನಾಟಕದಲ್ಲಿ ‘ಕೆಂಪು ಪುಸ್ತಕ ದಿನ -2022’ ಆಚರಣೆಯ ಭಾಗವಾಗಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಕರೆ ಕೊಟ್ಟಿದೆ.

  1. ಫೆಬ್ರವರಿ 14- 21 “ನಾನು_ಕಮ್ಯುನಿಸ್ಟ್ ಪ್ರಣಾಳಿಕೆ ಓದಿದ್ದು” ಫೇಸ್ ಬುಕ್ ಚಾಲೇಂಜ್ ಪ್ರಚಾರಾಂದೋಲನ #RedBooksDay2022 ಮತ್ತು #ನಾನು_ಕಮ್ಯುನಿಸ್ಟ್_ಪ್ರಣಾಳಿಕೆ_ಓದಿದ್ದು ಹ್ಯಾಶ್ ಟ್ಯಾಗ್ ನೊಂದಿಗೆ
  2. ಫೆಬ್ರವರಿ 21ರಂದು ರಾಜ್ಯ ಮಟ್ಟದ ಆನ್‌ಲೈನ್ ಸಭೆ
  • ಉಪನ್ಯಾಸ – “ಕಮ್ಯುನಿಸ್ಟ್ ಪ್ರಣಾಳಿಕೆಯ ಮಹತ್ವ” : ಕಾಂ. ಎಂ.ಎ.ಬೇಬಿ, ಸಿಪಿಐ(ಎಂ), ಪೊಲಿಟ್‌ಬ್ಯುರೊ ಸದಸ್ಯರು
  • “ನನಗೆ ಇಷ್ಟವಾದ ಕಮ್ಯುನಿಸ್ಟ್ ಪ್ರಣಾಳಿಕೆಯ ಭಾಗ” – 5 ಸಂಗಾತಿಗಳಿಂದ ಪ್ರಣಾಳಿಕೆಯ ಭಾಗಗಳ ಓದು
  • ʻʻಕಮ್ಯುನಿಸ್ಟ್ ಪ್ರಣಾಳಿಕೆ”ಯ ಕುರಿತು ಕೆಲವು ಅಂತರರಾಷ್ಟ್ರೀಯ ಕಲಾಕೃತಿಗಳ ಪ್ರದರ್ಶನ
  • ‘’ಸಮತಾವಾದ’ದ ಆದರ್ಶಗಳನ್ನು ಒಳಗೊಂಡ ಮೊದಲ ಕನ್ನಡ ಕವನಗಳ ವಾಚನ/ಹಾಡು
  1. ಫೆಬ್ರವರಿ 21-28 ಅವಧಿಯಲ್ಲಿ ಜಿಲ್ಲಾ ಅಥವಾ ಇತರ ಕೇಂದ್ರಗಳಲ್ಲಿ (ರಾಜ್ಯ ಮಟ್ಟದ ಆನ್‌ಲೈನ್ ಸಭೆಗಳ ನಾಲ್ಕು ಅಂಶಗಳಲ್ಲಿ ಕೆಲವು ಅಥವಾ ಎಲ್ಲ ನಾಲ್ಕನ್ನೂ ಅಥವಾ ಇತರ ಅಂಶಗಳನ್ನು ಒಳಗೊಂಡ) ದೈಹಿಕ ಸಭೆಗಳು.

Leave a Reply

Your email address will not be published. Required fields are marked *