ಕಾಮ್ರೇಡ್‌ ವೀರೇಂದ್ರ ಸಿಂಗ್ ನಿಧನ

birender1ಕಾಮ್ರೇಡ್‌ ವೀರೇಂದ್ರ ಸಿಂಗ್, ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ಕೇಂದ್ರ ಮುಖಪತ್ರಿಕೆಗಳಾದ ಪೀಪಲ್ಸ್ ಡೆಮಾಕ್ರಸಿ ಮತ್ತು ಲೋಕಲಹರ್ ನ ವ್ಯವಸ್ಥಾಪಕರು, ಜೂನ್‌ 4ರಂದು  ನಿಧನರಾಗಿದ್ದಾರೆ. ಅವರು ಕಳೆದ ಒಂದೂವರೆ ವರ್ಷದಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು.

1957ರಲ್ಲಿ ಹರ್ಯಾಣದ ಚಿಮ್ನಿ ಗ್ರಾಮದಲ್ಲಿ ಜನಿಸಿದ ವೀರೇಂದ್ರರ ತಂದೆ ದಯಾಸಿಂಗ್ ಡಿಟಿಸಿ ಡ್ರೈವರ್ ಆಗಿದ್ದು, ಅಲ್ಲಿನ ಸಿಐಟಿಯುಗೆ ಸೇರಿದ ಕಾರ್ಮಿಕ ಸಂಘದಲ್ಲಿ ಸಕ್ರಿಯರಾಗಿದ್ದರು.

ಕಲನೌರ್‌ನ ನ ಸತ್ಜಿಂದಾ ಕಲ್ಯಾಣ್ ಕಾಲೇಜಿನಲ್ಲಿ ಸ್ನಾತಕ ಪದವಿ ಪಡೆದ ವೀರೇಂದ್ರ ಎಪ್ಪತ್ತರ ದಶಕದ ಉತ್ತರಾರ್ಧದಲ್ಲಿ, ಲೋಕಲಹರ್ ಪ್ರಾರಂಭವಾದಾಗ ಅದರ ವ್ಯವಸ್ಥಾಪನಾ ವಿಭಾಗದಲ್ಲಿ ಪೂರ್ಣ ಕಾಲದ ಉದ್ಯೋಗಿಯಾಗಿ ಸೇರಿದರು.

1981 ರಲ್ಲಿ ಸಿಪಿಐ(ಎಂ) ಸೇರಿದ ನಂತರ ಅವರು 1982 ರಲ್ಲಿ ಪೂರ್ಣ ಕಾಲದ ಕಾರ್ಯಕರ್ತರಾದರು. ಅಂದಿನಿಂದ ನಾಲ್ಕು ದಶಕಗಳ ಈ ಸುದೀರ್ಘ ಅವಧಿಯಲ್ಲಿ ಅವರು ಪಕ್ಷದ ಪ್ರಕಟಣೆಗಳನ್ನು ನಿರ್ವಹಿಸುವಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡರು. ನಿಧನದ ವೇಳೆಯಲ್ಲಿ ಅವರು ಪಕ್ಷದ ಪತ್ರಿಕೆಗಳ ವ್ಯವಸ್ಥಾಪಕರಾಗಿದ್ದರು.

ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರಾದ ಬಿ ವಿ ರಾಘವುಲು ಮತ್ತು ನೀಲೋತ್ಪಲ್ ಬಸು, ಫರಿದಾಬಾದ್ ನಲ್ಲಿರುವ ಅವರ ಮನೆಗೆ ತೆರಳಿ ಅಗಲಿದ ಸಂಗಾತಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ಪತ್ನಿ, ಇಬ್ಬರು ಪುತ್ರರು, ಸೊಸೆ ಮತ್ತು ಒಬ್ಬ ಮೊಮ್ಮಗನಿರುವ ಅವರ ದುಃಖತಪ್ತ ಕುಟುಂಬಕ್ಕೆ ಸಂತಾಪ ಸೂಚಿಸಿದರು.

Leave a Reply

Your email address will not be published. Required fields are marked *