ಭಾರತ-ಪಾಕಿಸ್ತಾನ ಪರಿಸ್ಥಿತಿ: ಉದ್ವಿಗ್ನಗೊಳಿಸುವುದಲ್ಲ ಶಮನಗೊಳಿಸಬೇಕಾಗಿದೆ

Prakash_karat
ಪ್ರಕಾಶ್ ಕಾರಟ್

ಪುಲ್ವಾಮಾದಲ್ಲಿ ನಡೆದಂಥ ಗಡಿಯಾಚೆಯಿಂದ ಪ್ರೇರಿತ ಭಯೋತ್ಪಾದಕ ಆಕ್ರಮಣಗಳನ್ನು ಭಾರತ ಸಹಿಸಿಕೊಳ್ಳುವುದಿಲ್ಲ ಎಂಬ ಪರಿಣಾಮಕಾರಿ ಸಂದೇಶವನ್ನು ಕಳಿಸುವ ಉದ್ದೇಶದಿಂದ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್-ಎ-ಮೊಹಮದ್ (ಜೆಇಎಂ) ಶಿಬಿರದ ಮೇಲೆ ಭಾರತೀಯ ವಾಯು ಪಡೆ ಫೆಬ್ರವರಿ ೨೬ರಂದು ವೈಮಾನಿಕ ದಾಳಿ ನಡೆಸಿತು.

  • ರಾಷ್ಟ್ರೋನ್ಮಾದವನ್ನು ಉದ್ರೇಕಿಸಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ಕಾರ್ಯನಿರತವಾಗಿದೆ. ಸೇಡು ತೀರಿಸಿಕೊಳ್ಳಲು ಮತ್ತು ಮಿಲಿಟರಿ ಕಾರ್ಯಾಚರಣೆ ನಡೆಸುವಂತೆ ಬಹುತೇಕ ಟಿವಿ ಚಾನೆಲ್‌ಗಳು ಕರೆ ನೀಡುತ್ತಿವೆ. ಫೆಬ್ರವರಿ ೨೬ ಮತ್ತು ೨೭ರಂದು ನಡೆದ ದಾಳಿ-ಪ್ರತಿದಾಳಿಗಳು ಪರಿಸ್ಥಿತಿ ಉಲ್ಬಣಿಸಿ ಯುದ್ಧಕ್ಕೆ ದಾರಿ ಮಾಡಿಕೊಢುವ ಅಪಾಯದ ಸೂಚನೆಯಾಗಿದೆ. ಕಾಶ್ಮೀರಿ ಜನರು ತಮ್ಮ ರಾಜಕೀಯಾಟದ ದಾಳಗಳು ಎಂದು ಪರಿಗಣಿಸುವುದುನ್ನು ಮೋದಿ ಸರಕಾರ ಮತ್ತು ಬಿಜೆಪಿ ತಕ್ಷಣವೇ ನಿಲ್ಲಿಸಬೇಕು. ಉದ್ವಿಗ್ನತೆ ಕಡಿಮೆ ಮಾಡಿ ಸಾಮಾನ್ಯ ಸ್ಥಿತಿ ಮರಳಲು ಕ್ರಮಗಳನ್ನು ಕೈಗೊಳ್ಳಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಸಂಕುಚಿತ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು.

ಭಯೋತ್ಪಾದಕರ ನೆಲೆಗೆ ಆದ ಹಾನಿಯ ಲೆಕ್ಕದಲ್ಲಿ ಈ ಕಾರ್ಯಾಚರಣೆಯ ಯಶಸ್ಸು ಎಷ್ಟೆಂಬುದನ್ನು ಇನ್ನೂ ಸಾಬೀತು ಮಾಡಬೇಕಾಗಿದೆ. ಪ್ರಖ್ಯಾತ ಅಂತಾರ್ರಾಷ್ಟ್ರೀಯ ರಕ್ಷಣಾ ಉಸ್ತುವಾರಿ ಸಂಸ್ಥೆ ’ಜೇನ್ ಇನ್ಫರ್ಮೇಶನ್ ಗ್ರೂಪ್, ಕಾರ್ಯಾಚರಣೆ ಯಶಸ್ಸಿನ ಬಗ್ಗೆ ಹೇಳಿಕೊಂಡಿರುವುದು “ಊಹಾಪೋಹದ್ದು” ಎಂದು ಅಭಿಪ್ರಾಯಪಟ್ಟಿದೆ. ಅದೇನೇ ಇರಲಿ, ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿಯ ಒಳಗೆ ನುಗ್ಗಿ ಕಾರ್ಯಾಚರಣೆ ನಡೆಸಿತೆಂಬುದೇ ಒಂದು ಮಹತ್ವದ ಮಿಲಿಟರಿ ಮಧ್ಯಪ್ರವೇಶವಾಗಿದೆ. ಯಾಕೆಂದರೆ ಅದು ಪಾಕಿಸ್ತಾಓ ಆಕ್ರಮಿತ ಕಾಶ್ಮೀರದ ಗಡಿಗಳನ್ನು ದಾಟಿ ಹೋಗಿತ್ತು.

 Modi--Balakot-Attack

ಮರುದಿನ ನಿಯಂತ್ರಣ ರೇಖೆಯಲ್ಲಿ ವೈಮಾನಿಕ ದಾಳಿ ಮಾಡುವ ಮೂಲಕ ಪ್ರತೀಕಾರಕ್ಕೆ ಪಾಖಿಸ್ತಾನ ಯತ್ನಿಸಿದ್ದು  ಭಾರತೀಯ ವಾಯು ಪಡೆಯ ಯುದ್ಧವಿಮಾನಗಳೊಂದಿಗಿನ ಮುಖಾಮುಖಿಗೆ ಕಾರಣವಾಯಿತು. ಈ ಮುಖಮುಖಿಯಲ್ಲಿ ಎರಡೂ ಕಡೆಯ ತಲಾ ಒಂದು ವಿಮಾನ ನಷ್ಟವಾಯಿತು.

ಹೊಡೆದುರುಳಿಸಲಾದ ಭಾರತದ ಮಿಗ್-೨೧ ವಿಮಾನದ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ಪ್ಯಾರಾಚೂಟ್ ಮೂಲಕ ಹೊರಕ್ಕೆ ಜಿಗಿದಾಗ ನಿಯಂತ್ರಣ ರೇಖೆಯಾಚೆ ಬಿದ್ದು ಪಾಕಿಸ್ತಾನಿ ಸೈನಿಕರ ವಶವಾಗಿದ್ದಾರೆ. ರಜೌರಿ ಮತ್ತು ಪೂಂಚ್ ವಲಯದಲ್ಲಿ ಮಾರ್ಟಾರ್ ಶೆಲ್ ದಾಳಿ ನಡೆದಿದ್ದು ಗಡಿಯಲ್ಲಿರುವ ಗ್ರಾಮಗಳು ಸಂತ್ರಸ್ತವಾಗಿವೆ.

ಈ ರೀತಿಯಾಗಿ ಉಭಯ ದೇಶಗಳ ನಡುವೆ ಮಿಲಿಟರಿ ಮಟ್ಟದ ಉದ್ವಿಗ್ನತೆ ಹಠಾತ್ತನೆ ಹೆಚ್ಚಾಗಿದೆ. ಇದೊಂದು ಅಪಾಯಕಾರಿ ಪರಿಸ್ಥಿತಿಯಾಗಿದ್ದು ಉದ್ವಿಗ್ನತೆಯ ಶಮನಕ್ಕೆ ತಕ್ಷಣವೇ ಕ್ರಮಗಳನ್ನು ಕೈಗೊಳ್ಳಬೇಕು.

ಪುಲ್ವಾಮಾ ದಾಳಿಯ ವಿಚಾರವನ್ನು ಜಗತ್ತಿನ ಪ್ರಮುಖ ದೇಶಗಳೊಂದಿಗೆ ಪರಿಣಾಮಕಾರಿಯಾಗಿ ಪ್ರಸ್ತಾವಿಸುವ ಮೂಲಕ ಭಾರತವು ರಾಜತಾಂತ್ರಿಕ ರಂಗದಲ್ಲಿ ಪ್ರಗತಿಯನ್ನು ಸಾಧಿಸಿತ್ತು. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಪುಲ್ವಾಮಾ ಆಕ್ರಮಣವನ್ನು ಖಂಡಿಸಿ ಗೊತ್ತುವಳಿಯನ್ನು ಅಂಗೀಕರಿಸಿದೆ. ಜೆಇಎಂ ಈ ದಾಳಿಗೆ ಕಾರಣವೆಂದು ಅದು ಗೊತ್ತುವಳಿಯಲ್ಲಿ ಹೆಸರಿಸಿದೆ. ಈ ಖಂಡನೀಯ ಭಯೋತ್ಪಾದನೆಯ ಸಂಘಟಕರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡಬೇಕು ಹಾಗೂ ಅವರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬೇಕು ಎಂದು ಭದ್ರತಾ ಮಂಡಳಿಯ ಗೊತ್ತುವಳಿ ಕರೆ ನೀಡಿದೆ. ಇಂಥ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಶ್ವ ಸಂಸ್ಥೆಯು ಎಲ್ಲಾ ದೇಶಗಳಿಗೆ ಕರೆ ನೀಡಿದೆ.

Evacuation-Story-AI

ಜೆಇಎಂ, ಲಷ್ಕರ್ ಎ ತೊಯ್ಬಾ ಮತ್ತಿತರ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ  ಪಾಕಿಸ್ತಾನದ ಮೇಲೆ ಇನ್ನಷ್ಟು ಒತ್ತಡಗಳನ್ನು ಹೇರುವ ದಿಸೆಯಲ್ಲಿ ರಾಜತಾಂತ್ರಿಕ ಮತ್ತು ರಾಜಕೀಯ ರಂಗದ ಪ್ರಯತ್ನಗಳನ್ನು ಭಾರತ ಮುಂದುವರಿಸಬೇಕು. ಪುಲ್ವಾಮಾ ದಾಳಿಯಲ್ಲಿ ಜೆಇಎಂ ಪಾತ್ರ ಮತ್ತು ಅದರ ಇತರ ಚಟುವಟಿಕೆಗಳ ಕುರಿತ ಸಾಕ್ಷ್ಯವನ್ನು ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಸಲ್ಲಿಸಿದೆ.

ಆಳುವ ಪಕ್ಷದ ಚುನಾವಣಾ ಲಾಭಕ್ಕೆ ಹೊರತಾಗಿ ಮಿಲಿಟರಿ ಕಾರ್ಯಾಚರಣೆಯು ಗಡಿಯಾಚೆಯಿಂದ ನಡೆಯುವ ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ವ್ಯೂಹಾತ್ಮಕ ಯಶಸ್ಸನ್ನು ಸಾಧಿಸುತ್ತದೆಯೋ ಇಲ್ಲವೋ ಎಂದು ಕಳೆದ ವಾರದ ಲೇಖನದಲ್ಲಿ ಪ್ರಸ್ತಾವಿಸಲಾಗಿತ್ತು.

ಪುಲ್ವಾಮಾ ದಾಳಿಯ ನಂತರದಲ್ಲಿ ಪ್ರಧಾನಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ನಡವಳಿಕೆ ಪುಲ್ವಾಮಾದ ಹುತಾತ್ಮರ ಹೆಸರಿನಲ್ಲಿ ಪ್ರತೀಕಾರ ತೆಗೆದುಕೊಳ್ಳವುದಕ್ಕೆ ಕರೆ ನೀಡುವಂತಿತ್ತು. ಜನರ ಭಾವನೆಗಳನ್ನು ಕೆಣಕಿ ರಾಜಕೀಯ ಬಂಡವಾಳವಾಗಿ ಮಾಡಿಕೊಳ್ಳಲು ಬಳಸಿಕೊಳ್ಳುವಂತಿತ್ತು. ಫೆಬ್ರವರಿ ೨೬ರ ವೈಮಾನಿಕ ದಾಳಿ ನಡೆದ ತಕ್ಷಣದಲ್ಲಿ ಕೂಡ, ಸಾರ್ವಜನಿಕ ಸಭೆಯೊಂದರಲ್ಲಿ ಅಮಿತ್ ಷಾ, ’ಗಠಬಂಧನ್ ಸರಕಾರ ಇಲ್ಲದೆ, ಬಿಜೆಪಿ ಸರಕಾರವಿದ್ದ ಕಾರಣಕ್ಕೆ ಈ ದಾಳಿ ಸಾಧ್ಯವಾಯಿತು, ಎಂದು ಹೇಳಿದರು.

ರಾಷ್ಟ್ರೋನ್ಮಾದವನ್ನು ಉದ್ರೇಕಿಸಲು ಬಿಜೆಪಿ-ಆರ್‌ಎಸ್‌ಎಸ್ ಕೂಟ ಕಾರ್ಯನಿರತವಾಗಿದೆ. ಸೇಡು ತೀರಿಸಿಕೊಳ್ಳಲು ಮತ್ತು ಮಿಲಿಟರಿ ಕಾರ್ಯಾಚರಣೆ ನಡೆಸುವಂತೆ ಬಹುತೇಕ ಟಿವಿ ಚಾನೆಲ್‌ಗಳು ಕರೆ ನೀಡುತ್ತಿವೆ. ಫೆಬ್ರವರಿ ೨೬ ಮತ್ತು ೨೭ರಂದು ನಡೆದ ದಾಳಿ-ಪ್ರತಿದಾಳಿಗಳು ಪರಿಸ್ಥಿತಿ ಉಲ್ಬಣಿಸಿ ಯುದ್ಧಕ್ಕೆ ದಾರಿ ಮಾಡಿಕೊಢುವ ಅಪಾಯದ ಸೂಚನೆಯಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿ ಸರಕಾರದ ವೈಫಲ್ಯವೇ ಅಲ್ಲಿ ಹಿಂಸೆ ಮತ್ತು ಭಯೋತ್ಪಾದನೆ ಮುಂದುವರಿಯಲು ಮೂಲ ಕಾರಣವಾಗಿದೆ. ಕಳೆದ ಸುಮಾರು ಐದು ವರ್ಷಗಳಲ್ಲಿ ಕಾಶ್ಮೀರ ವಿಚಾರದಲ್ಲಿ ಇತ್ಯರ್ಥಕ್ಕಾಗಿ ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವ ಯಾವುದೇ ರಾಜಕೀಯ ಉಪಕ್ರಮವನ್ನು ಕೈಗೊಳ್ಳಲಾಗಿಲ್ಲ. ಅದಕ್ಕೆ ಬದಲಿಗೆ, ಕೋಮುವಾದಿ ಭಾವನೆಗಳನ್ನು ಉದ್ದೀಪಿಸಲು ಮತ್ತು ೩೫-ಎ ವಿಧಿಯಂಥ ಸೂಕ್ಷ್ಮ ವಿಚಾರಗಳನ್ನು ಕೆದಕುವ ನಿಟ್ಟಿನಲ್ಲಿ ಬಿಜೆಪಿ ಛಿದ್ರಕಾರಿ ಪಾತ್ರವನ್ನು ನಿರ್ವಹಿಸಿದೆ. ಪುಲ್ವಾಮಾ ದಾಳಿಯ  ನಂತರ ಕೈಗೊಂಡ ದಮನಕಾರಿ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲಿವೆ.

pulwama-war war

ಕಾಶ್ಮೀರಿ ಜನರು ತಮ್ಮ ರಾಜಕೀಯಾಟದ ದಾಳಗಳು ಎಂದು ಪರಿಗಣಿಸುವುದುನ್ನು ಮೋದಿ ಸರಕಾರ ಮತ್ತು ಬಿಜೆಪಿ ತಕ್ಷಣವೇ ನಿಲ್ಲಿಸಬೇಕು. ಉವಿಗ್ನತೆ ಕಡಿಮೆ ಮಾಡಿ ಸಾಮಾನ್ಯ ಸ್ಥಿತಿ ಮರಳಲು ಕ್ರಮಗಳನ್ನು ಕೈಗೊಳ್ಳಬೇಕು. ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಸಂಕುಚಿತ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ಒಂದು ಬೃಹತ್ ಪ್ರಜಾಸತ್ತಾತ್ಮಕ ಕಾರ್ಯಾಚರಣೆ, ಅಂದರೆ ಲೋಕಸಭೆ ಚುನಾವಣೆಗೆ ದೇಶದ ಮುಂದಿದೆ, ಅದಕ್ಕೆ ಸಜ್ಜಾಗಬೇಕಿದೆ.

ಅನು: ವಿಶ್ವ

—————————————————————————————————————-

yechury-electoral bondsನಮ್ಮ ವಾಯು ಪಡೆಯಿಂದ ಪರಿಣಾಮಕಾರಿ ಕಾರ್ಯಾಚರಣೆ-ಸೀತಾರಾಂ ಯೆಚುರಿ

“ಸಂಕುಚಿತ ಉನ್ಮಾದವನ್ನು ಹರಡುವ, ಉದ್ವಿಗ್ನತೆಯನ್ನು ಪ್ರಚೋದಿಸುವ ಪ್ರಯತ್ನ ಬೇಡ”

ಕೇಂದ್ರ ಸರಕಾರದ ಹಿರಿಯ ಮಂತ್ರಿಗಳು ಫೆಬ್ರುವರಿ ೨೬ ರ ಸಂಜೆ ಪ್ರತಿಪಕ್ಷಗಳ ಮುಖಂಡರ ಸಭೆ ಕರೆದು ಭಾರತೀಯ ವಾಯು ಪq ಆ ದಿನ ಮುಂಜಾನೆ ನಡೆಸಿದ ಪ್ರಹಾರಗಳ ಬಗ್ಗೆ ತಿಳಿಸಿದರು. ” ನಮ್ಮ ವಾಯು  ಪಡೆ ಒಂದು ಪರಿಣಾಮಕಾರಿ ಕಾರ್ಯಾಚರಣೆ ನಡೆಸಿದೆಯೆಂಬುದನ್ನು ಗಮನಿಸಿ ಉತ್ಸಾಹಭರಿತ ರಾಗಿದ್ದೇವೆ” ಎಂದು ಈ ಬಗ್ಗೆ  ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಹೇಳಿದ್ದಾರೆ.

ಇದೊಂದು “ಭಯೋತ್ಪಾದನಾ-ವಿರೋಧಿ ಪ್ರಹಾರ ಮತ್ತು “ಸೈನಿಕೇತರ” ಸ್ವರೂಪದ್ದು ಎಂದು ಸರಕಾರ ಒತ್ತಿ ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಂಕುಚಿತ ದೇಶಭಕ್ತಿಯ ಉನ್ಮಾದವನ್ನು ಎಬ್ಬಿಸುವ ಮತ್ತು ಉದ್ರಿಕ್ರತೆಯನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯಬಾರದು ಎಂದು ನಾವು ಹೇಳಿದೆವು ಎಂದು ಯೆಚುರಿ ತಿಳಿಸಿದ್ದಾರೆ.

seval-pradhan sevak

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಉಂಟಾಗಿರುವ ಆತಂಕ ಮತ್ತು ಅಭದ್ರತೆಯ ಭಾವವನ್ನು ತಗ್ಗಿಸಬೇಕು, ಅದು ಹಬ್ಬದಂತೆ ಕೇಂದ್ರ ಸರಕಾರ ನೋಡಿಕೊಳ್ಳಬೇಕು. ಸಂವಿಧಾನದ ೩೭೦ನೇ ಕಲಮು, 35ಎ ಕಲಮು ಮುಂತಾದ ವಿವಾದಾಸ್ಪದ ವಿಷಯಗಳನ್ನು ಈಗ ಎತ್ತುವುದು ತದ್ವಿರುದ್ಧವಾದ ಮತ್ತು ಅನಾಹುತಕಾರಿ ಪರಿಣಾಮಗಳನ್ನು ಬೀರುತ್ತದೆ ಎಂದಿರುವ ಯೆಚುರಿಯವರು “ಭಾರತದ ಬೇರೆ ಭಾಗಗಳಲ್ಲಿ ವಾಸಿಸುತ್ತಿರುವ ಕಾಶ್ಮೀರಿಗಳ ಮೇಲೆ ಹಲ್ಲೆಗಳನ್ನು ನಡೆಸಲು ಸರಕಾರ ಬಿಡಬಾರದು. ಇದು ಭಾರತದ ಐಕ್ಯತೆ ಮತ್ತು ಸಮಗ್ರತೆಯನ್ನು ಗಟ್ಟಿಗೊಳಿಸುವುದಿಲ್ಲ, ಬದಲಾಗಿ ನಾಶ ಮಾಡುತ್ತದೆ” ಎಂದು ಎಚ್ಚರಿಸಿದ್ದಾರೆ.

ಹತೋಟಿ ರೇಖೆ ಮತ್ತು ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಮ್ಮ ಜನಗಳ ಪರಿಸ್ಥಿತಿಯ ಬಗ್ಗೆ ಆತಂಕ ಉಂಟಾಗಿದೆ. ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಒಯ್ಯಬೇಕಾಗಿದೆ, ಏಕೆಂದರೆ ಈಗಾಗಲೇ ಅಲ್ಲಿ ಭಾರೀ ಗುಂಡು ಹಾರಾಟಗಳು ನಡೆಯುತ್ತಿವೆ, ಈ ಬಗ್ಗೆ ಆದ್ಯತೆಯ ಮೇಲೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಪುಲ್ವಾಮದಲ್ಲಿ  ಗುಪ್ತಚರ ವಿಫಲತೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರು ಹೇಳಿದ್ದಾರೆ. ಉರಿ, ಪಠಾಣಕೋಟ್ ಮತ್ತು ಗುರುದಾಸ್ ಪುರದಲ್ಲೂ ಆಗಿರುವ ಇಂತಹ ವಿಫಲತೆಗಳು  ಮರುಕಳಿಸಬಾರದು. ಅದರಿಂದಾಗಿ ನಮ್ಮ ಹಲವು ಯುವ ಸೈನಿಕರು ಪ್ರಾಣ ಕಳಕೊಳ್ಳುವಂತಾಗಿದೆ, ನಮ್ಮ ಇನ್ನಷ್ಟು ಜನಗಳನ್ನು ಕಳಕೊಳ್ಳುವಂತಾಗಬಾರದು ಎಂದು ಯೆಚುರಿ  ಈ ಸಂದರ್ಭದಲ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *