ದುರುಪಯೋಗಪಡಿಸಿಕೊಂಡ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ

ರಾಜ್ಯಪಾಲರು ಮತ್ತು ಅವರ ಕಚೇರಿ ಹಾಗೂ ಕೇಂದ್ರ ಸರಕಾರದ ಅಧಿಕಾರವನ್ನು ಬಿಜೆಪಿ ಮತ್ತೊಮ್ಮೆ ದುರುಪಯೋಗ ಪಡಿಸಿಕೊಂಡು ಬಹುಮತದ ಸಂಖ್ಯೆಯನ್ನು ಹೊಂದಿರದ ಶ್ರೀ ಯಡಿಯೂರಪ್ಪ ರವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದೆ.

ನಿರಂತರವಾಗಿ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಲೇ ಅಕ್ರಮವಾಗಿ ಅಧಿಕಾರ ಹಿಡಿಯಲು ಮುಂದಾಗುತ್ತಿರುವುದು ತೀವ್ರ ಪ್ರಜಾಪ್ರಭುತ್ವದ ಉಲ್ಲಂಘನೆಯಾಗಿದೆ.

ರಾಜ್ಯಪಾಲರು ಶ್ರೀ ಯಡಿಯೂರಪ್ಪನವರು ಅಗತ್ಯ ಬಹುಮತದ ಸಂಖ್ಯಾಬಲವನ್ನು ಹೊಂದಿಲ್ಲವೆಂಬುದು ತಿಳಿದಿದ್ದರೂ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕರೆನೀಡಿರುವುದು ಅಕ್ಷಮ್ಯವಾಗಿದೆ.

ನಿನ್ನೆ ದಿನ ಸ್ಪೀಕರ್ ರವರು ಮೂವ್ವರು ಶಾಸಕರನ್ನು ಅನರ್ಹರೆಂದು ಪ್ರಕಟಣೆ ಮಾಡಿದ್ದಾರೆ. ಇದರಿಂದಾಗಿ, ವಿಧಾನ ಸಭೆಯ ಒಟ್ಟು ಸದಸ್ಯತ್ವ ಸಂಖ್ಯೆ 222 ಆಗಿದೆ. ಅದರಂತೆ ಬಹುಮತದ ಮ್ಯಾಜಿಕ್ ನಂಬರ್ 112 ಅಗುತ್ತದೆ. ಆದರೆ ಯಡಿಯೂರಪ್ಪನವರ ಹತ್ತಿರವಿರುವುದು ಕೇವಲ 105 ಮಾತ್ರವೇ ಆಗಿದೆ. ಪರಿಸ್ಥಿತಿ ಹೀಗಿರುವಾಗ ಬಹುಮತಸಾಬೀತುಗೊಳಿಸಲು ಯಡಿಯೂರಪ್ಪನವರಿಗೆ ಒಂದು ವಾರ ಸಮಯಾವಕಾಶವನ್ನು ರಾಜ್ಯಪಾಲರು ನೀಡಿದ್ದಾರೆ.

ಇದೇ ರಾಜ್ಯಪಾಲರು ಶ್ರೀ ಕುಮಾರ ಸ್ವಾಮಿಯವರು ಮಂಡಿಸಿದ ವಿಶ್ವಾಸಮತಕ್ಕೆ ಬೇಗನೇ ಮುಗಿಸುವಂತೆ ಒತ್ತಡ ಹೇರಿ ತಾರತಮ್ಯ ಎಸಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಯಡಿಯೂರಪ್ಪನವರ ಹತ್ತಿರ ಬಹುಮತದ ಸಂಖ್ಯಾಬಲ ವಿಲ್ಲದಿರುವಾಗ ಎಲ್ಲಿಂದ ಆ ಸಂಖ್ಯೆಯನ್ನು ತೋರಿಸುವರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಶ್ರೀ ಯಡಿಯೂರಪ್ಪನವರು ಮತ್ತು ಬಿಜೆಪಿ ಬಹುಮತ ಸಾಬೀತು ಪಡಿಸಲು ಮತ್ತೊಂದು ಅಕ್ರಮದಲ್ಲಿ ತೊಡಗಲೇ ಬೇಕಾಗಿದೆ.

ಇದರಷ್ಟು ಲಜ್ಜೆಗೇಡಿ ಪಕ್ಷ ಮತ್ತೊಂದಿರಲಾರದು. ರಾಜ್ಯದ ಜನತೆ ಬಿಜೆಪಿಯ ಈ ಲಜ್ಜೆಗೇಡಿ ನಡೆಯನ್ನು ತೀವ್ರವಾಗಿ ಖಂಡಿಸಿ ಪ್ರತಿರೋಧಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಕರೆನೀಡಿದೆ.

ಶಾಸಕರ ಅನರ್ಹಗೊಳಿಸಿದ ಸ್ಪೀಕರ್ ಕ್ರಮ – ಸಿಪಿಐಎಂ ಸ್ವಾಗತ

ನಿನ್ನೆ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮೂವರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ ಸ್ಪೀಕರ್ ಶ್ರೀ ರಮೇಶ್ ಕುಮಾರ್ ರವರ ಕ್ರಮವನ್ನು ಸಿಪಿಐ(ಎಂ) ರಾಜ್ಯ ಸಮಿತಿ ಸ್ವಾಗತಿಸುತ್ತದೆ.

ಪ್ರಜಾಪ್ರಭುತ್ವ ವಿರೋಧಿಯಾದ ಪಕ್ಷಾಂತರವನ್ನು ತಡೆದು ಪ್ರಜಾಸತ್ತೆಯನ್ನು ಬಲ ಪಡಿಸಲು ಇಂತಹ ಕ್ರಮಗಳು ಅಗತ್ಯವಾಗಿವೆ

ಯು. ಬಸವರಾಜ, ಕಾರ್ಯದರ್ಶಿ

Leave a Reply

Your email address will not be published. Required fields are marked *