ಆರೋಗ್ಯ ಕಾರ್ಯಕರ್ತರಿಗೆ ಕಾನೂನು: ಸುಗ್ರೀವಾಜ್ಞೆಯಲ್ಲಿಯೇ ದೋಷ

ಮಹಾಮಾರಿಯ ವಿರುದ್ಧ ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಕಾನೂನು ರಕ್ಷಣೆ ಅತ್ಯಗತ್ಯವಾಗಿದೆ. ಆದ್ದರಿಂದ ಇಂತಹ ಯಾವುದೇ ಕ್ರಮವನ್ನು ತಾನು ಸ್ವಾಗತಿಸುವುದಾಗಿ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ.

ಆದರೆ ಭಾರತದ ರಾಷ್ಟ್ರಪತಿಗಳು ಈಗ ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಕೆಲವು ಗಂಭೀರ ದೋಷಗಳಿವೆ. ಈ ಸುಗ್ರೀವಾಜ್ಞೆಯ ಸೆಕ್ಷನ್ 7 ಸಾಂಕ್ರಾಮಿಕ ರೋಗಗಳ ಕಾಯ್ದೆ, ೧೮೯೭ರ ಸೆಕ್ಷನ್ ೩ನ್ನು ತಿದ್ದುಪಡಿ ಮಾಡಿ ಸೆಕ್ಷನ್ ೩(ಸಿ) ಮತ್ತು ೩(ಡಿ) ನ್ನು ಸೇರಿಸಿದೆ.

ಇವೆರಡು ಸೆಕ್ಷನ್‌ಗಳು  ಒಟ್ಟಾಗಿ ಅಪರಾಧ ಸಾಬೀತಾಗುವ ವರೆಗೆ ಒಬ್ಬ ವ್ಯಕ್ತಿಯನ್ನು ನಿರ್ದೋಷಿ ಎಂಬ  ಜಗತ್ತಿನ ಎಲ್ಲ ದೇಶಗಳು ಸ್ವೀಕರಿಸಿರುವ ಮತ್ತು ಅನುಸರಿಸುತ್ತಿರುವ ಒಂದು ಸಾಮಾನ್ಯ ಕಾನೂನು ತತ್ವವನ್ನು ಉಲ್ಲಂಘಿಸುತ್ತವೆ. ಭಾರತದ ಕ್ರಿಮಿನಲ್ ಕಾನೂನು ನ್ಯಾಯಶಾಸ್ತ್ರ ಕೂಡ ಈ ಬಹು ಮಹತ್ವದ ಅಂಶವನ್ನು ಸ್ವೀಕರಿಸಿದೆ. ಈ ಎರಡು ಸೆಕ್ಷನ್‌ಗಳು ಒಟ್ಟಾಗಿ ಈ ತತ್ವವನ್ನು ತಲೆಕೆಳಗಾಗಿಸುತ್ತವೆ. ಇದು ಇದರ  ಸಂಪೂರ್ಣ ದುರುಪಯೋಗಕ್ಕೆ, ಕಿರುಕುಳಕ್ಕೆ ಒಳಪಡಿಸಲಿಕ್ಕೆ ಮತ್ತು ನಿರ್ದಿಷ್ಟವಾಗಿ ಗುರಿಪಡಿಸಲಿಕ್ಕೆ ಅವಕಾಶ ಕಲ್ಪಿಸುತ್ತದೆ.

ಆದ್ದರಿಂದ ಈ ಎರಡು ಸೆಕ್ಷನ್‌ಗಳನ್ನು ಈ ಸುಗ್ರೀವಾಜ್ಞೆಯಿಂದ  ತೆಗೆದು ಹಾಕಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *