ಜಮ್ಮು ಮತ್ತು ಕಾಶ್ಮೀರ ಜನತೆಗೆ ಎಡಪಕ್ಷಗಳ ಸೌಹಾರ್ದ ಮೋದಿ ಸರಕಾರದ ವಿಶ್ವಾಸಘಾತಕ್ಕೆ ಒಂದು ವರ್ಷ

ಆಗಸ್ಟ್ 5, 2020 ರಂದು ಕಲಮು 370ನ್ನು ರದ್ದು ಮಾಡಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ, ಮತ್ತು  ಜಮ್ಮು ಮತ್ತು ಕಾಶ್ಮೀರ ಜನತೆಯನ್ನು ಪಂಜರದೊಳಗೆ ಬಂಧಿಸಿಟ್ಟು ಒಂದು ವರ್ಷವಾಗುತ್ತದೆ.

ಕಳೆದ ವರ್ಷ ಮೋದಿ ಸರಕಾರ, ಈ ನಡೆ ಏನೆಲ್ಲ ಸಾಧಿಸುತ್ತದೆ, ಅದು ಹೇಗೆ ಭಾರತಕ್ಕೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಪ್ರಯೋಜನಕಾರಿಯಾಗುತ್ತದೆ ಎಂದು ಹಲವಾರು ಟೊಳ್ಳು ಆಶ್ವಾಸನೆಗಳನ್ನು ಕೊಟ್ಟಿತ್ತು. ಈ ನಡುವೆ, ಕಾಶ್ಮೀರದಲ್ಲಿ ಮೋದಿ ಆಳ್ವಿಕೆಯ ದಬ್ಬಾಳಿಕೆ ಬೇಗನೇ ಇಡೀ ಭಾರತಕ್ಕೆ ಒಂದು ನೀಲನಕ್ಷೆಯಾಗುತ್ತದೆ ಎಂದು ಹಲವರು ಎಚ್ಚರಿಸಿದ್ದರು. ಈಗ ಒಂದು ವರ್ಷವಾಗುತ್ತಿರುವಾಗ ಸರಕಾರದ ಆಶ್ವಾಸನೆಗಳು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಬಗೆದಿರುವ ವಿಶ್ವಾಸಘಾತ ಎಂದು ಬಯಲಾಗಿದೆ. ಅಲ್ಲಿಯ ಜನತೆಯನ್ನು ಇನ್ನೂ ಪಂಜರದಲ್ಲೇ ಬಂಧಿಸಿಡಲಾಗಿದೆ, ಅವರ ಬಾಯಿ ಮುಚ್ಚಿಸಲಾಗಿದೆ.

ಭಾರತೀಯ ಸಂವಿಧಾನದ ಕಲಮು 370 ಮತ್ತು 35(ಎ) ರದ್ದತಿಗೆ ಸವಾಲುಗಳು ಇನ್ನೂ ಸುಪ್ರಿಂ ಕೋರ್ಟಿನ ಮುಂದೆ ಇತ್ಯರ್ಥವಾಗದೆ ಉಳಿದಿವೆ.

ಆಗಸ್ಟ್ 2019ರಿಂದ ಬಂಧನದಲ್ಲಿ ಇಟ್ಟಿರುವ ಎಲ್ಲರನ್ನೂ ಬಿಡುಗಡೆ ಮಾಡಬೇಕು, ಸಂಪೂರ್ಣ ಸಂಪರ್ಕವನ್ನು ಮರು ಸ್ಥಾಪಿಸಬೇಕು ಮತ್ತು ಜನಗಳ ಮುಕ್ತ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಐದು ಎಡಪಕ್ಷಗಳಾದ ಸಿ.ಪಿ.ಐ.(ಎಂ), ಸಿ.ಪಿ.ಐ., ಸಿ.ಪಿ.ಐ.(ಎಂಎಲ್)-ಲಿಬರೇಷನ್, ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಮತ್ತು ಆರ್‍.ಎಸ್‍.ಪಿ. ಮುಖಂಡರು ಒಂದು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ..

ಇದು ಮಹಾಸೋಂಕನ್ನು ಪರಿಣಾಮಕಾರಿಯಾಗಿ ಎದುರಿಸಲಿಕ್ಕೆ ಮತ್ತು ಪ್ರಹಾರಗಳಿಗೆ ತುತ್ತಾಗಿರುವ ಜನಗಳಿಗೆ ಪರಿಹಾರ ಒದಗಿಸಲಿಕ್ಕೆ ಹಾಗೂ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ  ಸಂವಿಧಾನ ನೀಡಿರುವ  ಖಾತ್ರಿಗಳನ್ನು ಎತ್ತಿ ಹಿಡಿಯಲಿಕ್ಕೆ ಅತ್ಯಗತ್ಯ ಎಂದು ಅವರ ಹೇಳಿದ್ದಾರೆ.

Leave a Reply

Your email address will not be published. Required fields are marked *