ವಿಶೇಷ ಪೋಲೀಸ್‍ ವೀಕ್ಷಕರಾಗಿ ಆರೆಸ್ಸೆಸ್‍ ಹಿತೈಷಿಯ ನೇಮಕ ಅತ್ಯಂತ ಆತಂಕಕಾರಿ

ಚುನಾವಣಾ ಆಯೋಗಕ್ಕೆ  ನೀಲೋತ್ಪಲ ಬಸು ಪತ್ರ

ಚುನಾವಣಾ ಆಯೋಗ ಪಶ್ಚಿಮ ಬಂಗಾಲ ಮತ್ತು ಝಾರ್ಖಂಡ್‍ಗೆ ವಿಶೇಷ ಪೋಲೀಸ್‍ ವೀಕ್ಷಕರಾಗಿ ಬಿ.ಎಸ್.ಎಫ್‍.ನ  ಗ ನಿವೃತ್ತರಾಗಿರುವ ಮಹಾ ನಿರ್ದೇಶಕ ಕೆ.ಕೆ.ಶರ್ಮಾ ಅವರನ್ನು ನೇಮಿಸಿರುವುದು ಅತ್ಯಂತ ಆತಂಕಕಾರಿ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ ಹೇಳಿದ್ದಾರೆ. ಅವರು ಈ ಕುರಿತು ಮುಕ್ಯ ಚುನಾವಣಾ ಆಯುಕ್ತರಿಗೆ ಮಾರ್ಚ್ 27 ರಂದು ಬರೆದ ಪತ್ರದಲ್ಲಿ ಈ ಬಗ್ಗೆ ಪುನರಾಲೋಚನೆ ನಡೆಸಬೇಕು ಮತ್ತು ಈ ನೇಮಕವನ್ನು ತಕ್ಷಣವೇ ರದ್ದು ಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸೀಮಾಂತ ಚೇತನಾ ಮಂಚ್‍ ಎಂಬ ಒಂದು ಸಂಘಟನೆ ಕೊಲ್ಕತಾದಲ್ಲಿ ಏರ್ಪಡಿಸಿದ್ದ ರಡು ದಿನಗಳ ಕಾರ್ಯಕ್ರಮವೊಂದರಲ್ಲಿ ಈ ವ್ಯಕ್ತಿ ಭಾಗವಹಿಸಿದ್ದ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದೆ. ಈ ಸಂಘಟನೆ  ದೇಶದ ಗಡಿಪ್ರದೇಶಗಳಲ್ಲಿ ‘ದೇಶಪ್ರೇಮ’ವನ್ನು ತುಂಬಲೆಂದು ರಚಿಸಿರುವ ರೆಸ್ಸೆಸ್‍ ಬೆಂಬಲಿತ “ಸೀಮಾ ಜಾರಣ ಮಂಚ್’’ ಎಂಬ ಸಂಘಟನೆಯ ಭಾಗವಾಗಿದೆ.

ಆದ್ದರಿಂದ ಚುನಾವಣಾ ಆಯೋಗದ   ನೇಮಕ ಅತ್ಯಂತ ಪ್ರಶ್ನಾರ್ಹವಾಗಿದೆ, ಇದು ರಾಜಕೀಯ ಪಕ್ಷಪಾತದ ಪ್ರಶ್ನೆಯನ್ನು ಎತ್ತುತ್ತದೆ. ಆದ್ದರಿಂದು ಆಯೋಗ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಮತ್ತು ನೇಮಕವನ್ನು ತಕ್ಷಣವೇ ರದ್ದು ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಕೆ.ಕೆ. ಶರ್ಮಾರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ ಫೋಟೋವನ್ನು ಚುನಾವಣಾ ಆಯೋಗಕ್ಕೆ ಕಳಿಸಿದ ಪತ್ರಕ್ಕೆ ಲಗತ್ತಿಸಲಾಗಿದೆ.

ತ್ರಿಪುರಾ ಮುಖ್ಯಮಂತ್ರಿಯ ಬೆದರಿಕೆಯ ಭಾಷಣ-ತುರ್ತು ಕ್ರಮಕ್ಕೆ ಆಗ್ರಹ

ಈ ಪತ್ರದಲ್ಲಿ ನೀಲೋತ್ಪಲ ಬಸು ಅವರು ತ್ರಿಪುರಾದ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್‍ ದೇಬ್ ಭಾಷಣದ ಅಂಶವನ್ನೂ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ತ್ರಿಪುರಾದ ಎರಡು ಲೋಕಸಭಾ ಕ್ಷೇತ್ರಗಳ ಚುನಾವಣೆಗಳು ಈ ಬಾರಿ ಹಿಂದಿನದಕ್ಕಿಂತ ಭಿನ್ನವಾಗಿರುತ್ತವೆ ಎನ್ನುತ್ತ, ಸಾಮಾನ್ಯ ಚುನಾವಣಾ ವಿಧಾನವನ್ನು ಬುಡಮೇಲು ಮಾಡುವ ಬೆದರಿಕೆಯ ಸೂಚನೆ ನೀಡಿದ್ದಾರೆ.

ತಾನು ಕೇವಲ ಹುಮ್ಮಸ್ಸಿನಿಂದ ಈ ಮಾತು ಹೇಳುತ್ತಿಲ್ಲ, ಸಂಪೂರ್ಣ ಪ್ರಜ್ಞೆಯಿಂದಲೇ ಹೇಳುತ್ತಿದ್ದೇನೆ ಎಂದು ಅವರು ಈ ಬೆದರಿಕೆಗೆ ಇನ್ನಷ್ಟು ಒತ್ತು ನೀಡಿದ್ದಾರೆ. ಇದು ಅವರ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡು ಒಂದು ಮುಕ್ತ, ನ್ಯಾಯಯುತ ಮತ್ತು ಶಾಂತಿಯುತ ಮತದಾನಕ್ಕೆ ಬೆದರಿಕೆ ಒಡ್ಡುವ ಒಂದು ಸ್ಪಷ್ಟ ಉಲ್ಲಂಘನೆಯಾಗಿದೆ, ಅದನ್ನು ತಡೆಯಲು ಚುನಾವಣಾ ಆಯೋಗದಿಂದ ತುರ್ತಾದ ಸರಿಪಡಿಕೆ ಕ್ರಮಗಳ ಅಗತ್ಯವಿದೆ ಎಂದು ನೀಲೋತ್ಪಲ ಬಸು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಈ ಭಾಷಣದ ವೀಡಿಯೋ ಸಾಕ್ಷಿಯನ್ನೂ ಆಯೋಗಕ್ಕೆ ಒದಗಿಸಲಾಗಿದೆ

Leave a Reply

Your email address will not be published. Required fields are marked *